ಮರಳು .... ರಚನೆ: ಕುಮಾರ್ ಬಿ ಬಾಗೀವಾಳ್ please come back...
ಮರಳು...
ಉಸಿರಲೆ ಕಸಿವಿಸಿ ಕಾಣುತಿದೆ
ತುಸು ಸುಧಾರಿಸು ಕಾಯುವೆ
ಮರು ಮಾತಿಗೆ ತರುವಿನ ಹಾಗೆ ಬಿಗಿದಪ್ಪಿ
ಹುಸಿಯದ ಪ್ರೀತಿಯ ಕದ ತೆರೆವೆ ಜೀವನದುದ್ದಕು.
ಕನಸಲೆ ಹೊಂಬಿಸಿಲಿಗೆ ತೆರೆದಿಟ್ಟ ಪುಷ್ಪಗಳ
ಅರಳುವಿಕೆಗಾಗಿ ಕಾಯುವೆ ಬರದಿಟ್ಟು ಹೆಸರ
ಗಳಿಗೆಗೊಮ್ಮೆ ನನ್ನದೇ ಕೃತಿಸಂಪುಟದಲಿ
ಚಂದದೊಂದು ಹೆಸರಿಟ್ಟು ಜೋಪಾನದಿ ಬಚ್ಚಿಟ್ಟು.
ಸಾಗರದ ತಟದಲ್ಲಿ ಸಾವಿರ ಅಲೆಗಳ ಮರು ಬರುವಿಕೆಗಾಗಿ ಕಾಯುವೆ ಮರಳಲಿ
ಮರೆಯ ಬೇಕಾದದ್ದನ ಬರೆದು ಮೆರೆದಳಿಸಿ,
ನೆರೆದುಳಿಯಲಿ ಸವಿನೆನಪುಗಳು ಅಂಗಳದಿ ಎಂದು
ಮುಗಿಲ ಮೇಲೆಲ್ಲೋ ಮೋಡದ ದುಗುಡ
ಮಳೆಹನಿಯ ಹೆರುವಿಕೆಗೆ ಕಾಯುವೆ
ಹೆತ್ತರಷ್ಟು ಭಾರ ಕರಗುವ ಹಾಗೆ ಅತ್ತುಬಿಡುವೆ
ಮಳೆಗೆ ಇಳೆ ತುಂಬಿ ನಗುವ ಹಾಗೆ ಸುಮ್ಮನೆ.
ರಚನೆ : ಕುಮಾರ್ ಬಿ ಬಾಗೀವಾಳ್
Comments
Post a Comment