ಗುರು ಮತ್ತು ವಚನಗಳು Teacher and vachanagalu
ಗುರು ಮತ್ತು ವಚನಗಳು
"ಗುರುವಿನ ಗುಲಾಮನಾಗದ ಹೊರತು ಮಕ್ತಿ ದೊರೆಯದು "...
ಜಗತ್ತಿನಲ್ಲಿ ಮತ,ಭಾಷೆ,ಕುಲ,ಸ್ಥರ,ಹೀಗೆ ಎಲ್ಲವೂ ಬೇರೆ ಬೇರೆ ಆದರೆ ಜಗತ್ತಿನಾದ್ಯಂತ ಒಂದೇ ಎಂಬುದೊಂದು ಇದ್ದರೆ ಅದು ಗುರುವಿನ ಸ್ಥಾನ ಮಾತ್ರ.
ವಚನಕಾರರು ಅರಿವಿನ ಮಾರಿತಂದೆ
ಎನಗೆ ಗುರುವಾಗಬೇಡ ಹೆಣ್ಣು ಹೊನ್ನು ಮಣ್ಣಿನ ಆಸೆ ಉಳ್ಳನ್ನಕ್ಕ,
ಎನಗೆ ಲಿಂಗವಾಗಬೇಡ ಶಕ್ತಿಸಂಪರ್ಕವುಳ್ಳನ್ನಕ್ಕ,
ಎನಗೆ ಜಂಗಮವಾಗಬೇಡ ಕಂಡಕಂಡವರ ಮಂದಿರದಲ್ಲಿ ಹೊಕ್ಕು
ಅಶನ ವಿಷಯಕ್ಕಾಗಿ ಹುಸಿವೇಷವ ತೊಟ್ಟು ಗಸಣಿಗೊಳಬೇಡ,
ಎಂದು ಹೇಳಿದ ಮಾತಿಗೆ ನೊಂದ ನೋವು,
ನಿಮ್ಮ ದೇವತ್ವದ ಹಾನಿ ಎನ್ನ ಸಜ್ಜನದ ಕೇಡು.
ಎನ್ನ ಹೊದ್ದಡೆ ಮಾಣೆ, ಇದ್ದುದ ಹೇಳಿದೆ, ನೊಂದಡೆ ನೋಯೆ,ಸದಾಶಿವಮೂರ್ತಿಲಿಂಗವೆ ನಿನ್ನ ನಾ ಹಿಂಗದ ತೊಡಕು.
ಗುರುಚರದಲ್ಲಿ ಸೇವೆಯ ಮಾಡುವನ್ನಕ್ಕ ಮೂರಕ್ಕೆ ಹೊರಗಾಗಿರಬೇಕು,
ಮೂರಕ್ಕೆ ಒಳಗಾಗಿರಬೇಕು.
ಮೂರರ ಒಳಗೆ ಕಂಡು ಮೂರರ ಹೊರಗನರಿತು,ನೆರೆ ನೀರನಾಗಿರಬೇಕು, ಸದಾಶಿವಮೂರ್ತಿಲಿಂಗವ ಮೀರಬೇಕು.
ವಚನಕಾರರು ಅಕ್ಕಮ್ಮ
ಗುರುವಾದಡೂ ಆಚಾರಭ್ರಷ್ಟನಾದಡೆ ಅನುಸರಿಸಲಾಗದು.
ಲಿಂಗವಾದಡೂ ಆಚಾರದೋಹಳವಾದಲ್ಲಿ ಪೂಜಿಸಲಾಗದು.
ಜಂಗಮವಾದಡೂ ಆಚಾರ ಅನುಸರಣೆಯಾದಲ್ಲಿ ಕೂಡಲಾಗದು.
ಆಚಾರವೆ ವಸ್ತು, ವ್ರತವೆ ಪ್ರಾಣ, ಕ್ರಿಯೆಯೆ ಆಚಾರ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
ವಚನಕಾರರು ಅಪ್ಪಿ ದೇವಯ್ಯ
ಹೊನ್ನು ಹೆಣ್ಣು ಮಣ್ಣು ಬಿಡಿಸದ ಗುರುವಿನ ಉಪದೇಶವನೊಲ್ಲೆ,
ರೋಷ ಹರುಷವ ಕೆಡಿಸದ ಲಿಂಗವ ಪೂಜಿಸೆ,
ತಾಮಸಭ್ರಮೆಯನಳಿಯದ ಜಂಗಮಕ್ಕೆ ದಾಸೋಹವ ಮಾಡೆ,
ಪರಮಾನಂದವಲ್ಲದ ಪಾದೋದಕವ ಕೊಳ್ಳೆ,
ಪರಿಣಾಮವಲ್ಲದ ಪ್ರಸಾದವನುಣ್ಣೆ,ಆನೆಂಬುದನಳಿಯದ ಈಶ್ವರೀಯ ವರದ ಮಹಾಲಿಂಗನನೇನೆಂದೆಂಬೆ!
ವಚನಕಾರರು ಅಂಬಿಗರ ಚೌಡಯ್ಯ
ಅರಿಯದ ಗುರು ಅರಿಯದ ಶಿಷ್ಯಂಗೆ
ಅಂಧಕನ ಕೈಯನಂಧಕ ಹಿಡಿದಡೆ ಮುಂದನಾರು ಕಾಬರು ಹೇಳಲೆ ಮರುಳೆ.
ತೊರೆಯಲದ್ದವನನೀಸಲರಿಯದವ
ತೆಗೆವ ತೆರನಂತೆಂದನಂಬಿಗ ಚೌಡಯ್ಯ.
ಅಡ್ಡಬಿದ್ದು ಶಿಷ್ಯನ ಮಾಡಿಕೊಂಬ ದಡ್ಡ ಪ್ರಾಣಿಗಳನೇನೆಂಬೆನಯ್ಯ.
ಏನೇನೂ ಅರಿಯದ ಎಡ್ಡ ಮಾನವರಿಗೆ ಉಪದೇಶವ ಮಾಡುವ
ಗೊಡ್ಡ ಮಾನವನ ಮುಖವ ತೋರದಿರಯ್ಯಾ.
ಅದೇನು ಕಾರಣವೆಂದಡೆ:
ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ.
ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು, ಅಷ್ಟಮದಂಗಳೆಂಬ
ಖೊಟ್ಟಿ ಗುಣಂಗಳ ಬಿಡಿಸಲಿಲ್ಲ.
ಸೂತಕ ಪಾತಕಂಗಳ ಕೆಡಿಸಿ, ಮೂರು ಮಲಂಗಳ ಬಿಡಿಸಿ
ಮುಕ್ತಿಪಥವನರುಹಲಿಲ್ಲ.
ಮಹಾಶೂನ್ಯ ನಿರಾಳ ನಿರಂಜನಲಿಂಗವ
ಕರ-ಮನ-ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ.
ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆ ಪ್ರಮಥರು ಮೆಚ್ಚುವರೆ ?
ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು.
ಅವರು ಇಹಲೋಕ ಪರಲೋಕಕ್ಕೆ ಹೊರಗೆಂದಾತನಂಬಿಗ ಚೌಡಯ್ಯ.
ಎಸವಿನ ಗುರು ಹೋಗಿ ಶಿಶುವಧೆಯ ಮಾಡಿದ.
ಶಿಶು ಹೋಗಿ ಮರಳಿ ಗುರುವ ಕೊಂದಡೆಯು,
ಹೆಸರುಗೊಂಬ ಅಣ್ಣಗಳು ನೀವು ಕೇಳಿರೋ:
ವರಿಬ್ಬರೂ ಸತ್ತಠಾವನೊಬ್ಬರೂ ಅರಿಯರು,
ನಿರ್ವಯಲೆಂದಾತನಂಬಿಗ ಚೌಡಯ್ಯ.
ಕಂಥೆ ತೊಟ್ಟವ ಗುರುವಲ್ಲ,
ಕಾವಿ ಹೊತ್ತವ ಜಂಗಮವಲ್ಲ,
ಶೀಲ ಕಟ್ಟಿದವ ಶಿವಭಕ್ತನಲ್ಲ,
ನೀರು ತೀರ್ಥವಲ್ಲ,
ಕೂಳು ಪ್ರಸಾದವಲ್ಲ.
ಹೌದೆಂಬವನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.
ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ,
ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು
ಅಕ್ಕಿ ಕಣಕವ ಕೊಂಡುಹೋಗುವ ಗುರುವಿನ ಕಂಡರೆ,
ಕೆಡವಿ ಹಾಕಿ ಮೂಗನೆ ಕೊಯ್ಧು
ಇಟ್ಟಂಗಿಯ ಕಲ್ಲಿಲೆ ತಿಕ್ಕಿ
ಸಾಸಿವೆಯ ಹಿಟ್ಟನೆ ತಳಿದು
ಮೇಲೆ ಲಿಂಬಿಯ ಹುಳಿಯನೆ ಹಿಂಡಿ ಪಡುವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ.
ಗುರು-ಲಿಂಗ-ಜಂಗಮವೆಂದರಿಯದ ಗೊಡ್ಡುಗಳ
ಶಿಷ್ಯನ ಮಾಡಿಕೊಂಬುವ ಹೆಡ್ಡಜಡಜೀವಿಗಳನೇನೆಂಬೆನಯ್ಯ !
ಆಚಾರ-ಅನಾಚಾರದ ಭೇದವನರಿಯದ ಹೆಡ್ಡ ಮಾನವರಿಗೆ
ಉಪದೇಶವ ಕೊಡುವ ಮತಿಭ್ರಷ್ಟರನೇನೆಂಬೆನಯ್ಯ !
ಅವನ ಅಜ್ಞಾನವನಳಿಯದೆ, ಅವನ ನಡೆನುಡಿಯ ಹಸ ಮಾಡದೆ,
ಅವನ ಆದಿ-ಅಂತ್ಯವ ತಿಳಿಯದೆ,
ಧನಧಾನ್ಯದ್ರವ್ಯದಾಸೆಗೆ ಶಿವದೀಕ್ಷೆಯ ಮಾಡುವನೊಬ್ಬ ಗುರುವ
ಹುಟ್ಟಂಧಕನೆಂಬೆನಯ್ಯ !
ತನ್ನ ಗುರುತ್ವವನರಿಯದ ಗುರುವಿಂದ
ಉಪದೇಶವ ಪಡವನೊಬ್ಬ ಶಿಷ್ಯನ ಕೆಟ್ಟಗಣ್ಣವನೆಂಬೆನಯ್ಯ !
ಇಂತಿವರ ಗುರು-ಶಿಷ್ಯರೆಂದಡೆ ನಮ್ಮ ಪ್ರಮಥರು ಮಚ್ಚರಯ್ಯ !
ನಮ್ಮ ಪ್ರಮಥರು ಮಚ್ಚದಲ್ಲಿ ಇಂತಪ್ಪ ಗುರುಶಿಷ್ಯರಿಬ್ಬರಿಗೆಯೂಯಮದಂಡಣೆ ತಪ್ಪದೆಂದಾತನಂಬಿಗರ ಚೌಡಯ್ಯನು.
ಗುರುವೆಂಬ ಭಾವ ಬ್ರಹ್ಮಮೂರ್ತಿ, ಲಿಂಗವೆಂಬ ಭಾವ ವಿಷ್ಣುಮೂರ್ತಿ,
ಜಂಗಮವೆಂಬ ಭಾವ ರುದ್ರಮೂರ್ತಿ.
ಅದೆಂತೆಂದಡೆ;
ಅನಾದಿವಸ್ತು ರೂಪಾಗಬೇಕಾದ ಕಾರಣ,
ಅಹಂ ಬ್ರಹ್ಮವೆಂಬ ಆಕಾರವಿಡಿದು ಬ್ರಹ್ಮಮೂರ್ತಿಯಾದ,
ಜ್ಞಾನರುದ್ರ ಪೀಠಸಂಬಂಧಿಯಾದ ಕಾರಣ ವಿಷ್ಣುಮೂರ್ತಿಯಾದ,
ಚಿದ್ಘನರುದ್ರ ಚತುರ್ವಿಧಫಲಂಗಳೊಳಗಾದ ಕಾರಣ
ಸಂಹಾರರುದ್ರನಾದ.
ಸಂಹಾರ ಅಡಗಿ ನಿಂದು, ಉಮಾಪತಿತತ್ವವ ಬಿಟ್ಟು ಸ್ವಯಂಭುಲಿಂಗವಾದ.
ಆ ಸ್ವಯಂಭು ಜಂಗಮವೆಂಬಲ್ಲಿ ನಿಂದು ನಿಜವ ಕಂಡಲ್ಲಿ ಲಿಂಗವಾದ.
ಲೀಯವಾಗಿ ಕಾಣಲ್ಪಟ್ಟುದ ನಿಲಿಸಿಭಾವರಹಿತನಾಗಬೇಕೆಂದನಂಬಿಗ ಚೌಡಯ್ಯ.
ಗುರುವೆಂಬೆನೆ ಹಲಬರ ಮಗ,
ಲಿಂಗವೆಂಬೆನೆ ಕಲುಕುಟಿಕನ ಮಗ,
ಪ್ರಸಾದವೆಂಬೆನೆ ಒಕ್ಕಲಿಗನ ಮಗ,
ಪಾದೋದಕವೆಂಬೆನೆ ದೇವೇಂದ್ರನ ಮಗ
ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ.ತನ್ನೊಳಗ ನೋಡೆಂದನಂಬಿಗ ಚೌಡಯ್ಯ.
ಗುರುವಿನೊಳಡಗಿದ ಭಕ್ತ ಪರವ ಕಂಡುದಿಲ್ಲ,
ಲಿಂಗದೊಳಡಗಿದ ಭಕ್ತ ಜಂಗಮವ ಕಂಡುದಿಲ್ಲ.
ಇವರಿಬ್ಬರ ಭಕ್ತಿಯೂ ಹುರಿಗೂಡದ ಹಗ್ಗದಂತಾಯಿತ್ತು ನೋಡಯ್ಯ.
ಅರಿವು ಆಚಾರವಿಡಿದು ಆಚರಿಸಿದ ಸದ್ಭಕ್ತನು.
ಗುರು ಲಿಂಗ ಜಂಗಮವ ನೆರೆ ಕಂಡು ಸನ್ಮತನಾಗಿ
ಇ[ಹ] ಪರವೆಂಬುಭಯ ಸಂಕಲ್ಪವರತದಲ್ಲದಿಲ್ಲವೆಂದಾತನಮ್ಮ ಅಂಬಿಗ ಚೌಡಯ್ಯ.
ಗುರುಲಿಂಗಜಂಗಮಕ್ಕೆ ಆಧಾರ ಬಸವಣ್ಣ,
ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ,
ಸರ್ವಾಪತ್ತಿಗಾಧಾರ ಬಸವಣ್ಣ,
(ಸ್ವರ್ಗ) ಮತ್ರ್ಯ ಪಾತಾಳಕ್ಕೆ ಬಸವಣ್ಣನ ಚೈತನ್ಯವಲ್ಲದಿಲ್ಲ.
ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋಎನುತಿರ್ದಾತನಂಬಿನ (ಗ) ಚೌಡಯ್ಯ.
ಲಿಂಗವನರಿದೆಹೆನೆಂದಡೆ ಗುರುವಿಗೆ ಹಂಗು,
ಗುರುವನರಿದೆಹೆನೆಂದಡೆ ಲಿಂಗದ ಹಂಗು,
ಉಭಯವ ಮೀರಿ ಕಂಡೆಹೆನೆಂದಡೆ ಬೇರೊಂದೊಡಲುಂಟು.
ಒಡಲು ಒಡೆದಲ್ಲದೆ ಬೇರೊಂದೆಡೆಯಿಲ್ಲಎಂದನಂಬಿಗ ಡಯ್ಯ.
ವಚನಕಾರರು ಅಜಗಣ್ಣ ತಂದೆ
ಇನನ ಕಂಡ ತಮದಂತಾಯಿತ್ತೆನ್ನ ಗುರುವಿನುಪದೇಶ,
ವಾಯುವಿನ ಕೈಯ ಸೊಡರಿನಂತಾಯಿತ್ತೆನ್ನ ಗುರುವಿನುಪದೇಶ,
ಉರಿಯ ಮುಖದೊಳಗಿಪ್ಪ ಕರ್ಪುರದಂತಾಯಿತ್ತೆನ್ನ ಗುರುವಿನುಪದೇಶ.
ಮಹಾಘನ ಸೌರಾಷ್ಟ್ರ ಸೋಮೇಶ್ವರನ
ಸದ್ಗುರುವೆನ್ನ ಕರಸ್ಥಲಕ್ಕೆ ಕೃಪೆಮಾಡಿದ ಕಾರಣಸಕಲಪ್ರಪಂಚು ಬಿಟ್ಟೋಡಿತ್ತು.
ಗುರುಶಿಷ್ಯರಿಬ್ಬರೂ ಸಹಪಂಕ್ತಿಯಲ್ಲಿ ಲಿಂಗಾರ್ಚನೆ ಮಾಡಿಹೆವೆಂಬರಯ್ಯಾ!
ಹೋ! ಹೋ! ಬಾಲಭಾಷೆಯ ಕೇಳಲಾಗದು.
ಅಲ್ಲಲ್ಲ, ಮಾಡಬಹುದು. ಅದೇನು ಕಾರಣ?
ಗುರುವಿನ ಅರಿವಿನ ಹರಿವನರಿಯಬಲ್ಲಡೆ ಮಾಡಬಹುದು, ಮಾಡಬಹುದು.
ಶಿಷ್ಯ ಪ್ರಸಾದವೆಂಬುಭಯಸಂದೇಹ ಹಿಂದುಳಿಯಬಲ್ಲಡೆ,
ಮಾಡಬಹುದು, ಮಾಡಬಹುದು.
ಇದಲ್ಲದೆ ಲಿಂಗಪ್ರಸಾದದ ಮೇಲೆ ಗುರುಪ್ರಸಾದವನಿಕ್ಕಿಹೆನೆಂಬ
ಶಿವದ್ರೋಹಿಗಳನೇನೆಂಬೆ! ಕೊಂಡೆಹೆನೆಂಬ ಗುರುದ್ರೋಹಿಗಳನೇನೆಂಬೆ!
ಇದು ಕಾರಣ, ಮಹಾಘನಸೋಮೇಶ್ವರಾ,
ನಿಮ್ಮಲ್ಲಿ, ಇವರಿಬ್ಬರ ಗುರು ಶಿಷ್ಯರೆಂದೆನಾದಡೆ,ಎನ್ನನದ್ದಿ ನೀನೆದ್ದು ಹೋಗಯ್ಯಾ?
ಗುರುಭಕ್ತ ಗುರುವಿಲ್ಲದೆ ಶಿಷ್ಯನಾಗಿ,
ಲಿಂಗಭಕ್ತ ಲಿಂಗವಿಲ್ಲದೆ ಲಿಂಗವಂತನಾಗಿ,
ಜಂಗಮಭಕ್ತ ಜಂಗಮವಿಲ್ಲದೆ ಜಂಗಮಕ್ಕಿಕ್ಕಿ ಮುಕ್ತನಾದ.
ಇಂತೀ ಮೂವರ ಮುದ್ದು ಎನಗೆ ಸತ್ತುಹೋಯಿತ್ತಲ್ಲಾ ಎಂದು,
ಬಿಕ್ಕದೆ ಕಣ್ಣನೀರಿಲ್ಲದೆ ಒಂದೆ ಸ್ವರದಲ್ಲಿ ಅಳುತ್ತಿದ್ದಸದ್ಯೋಜಾತಲಿಂಗ ಕೇಳಬೇಕೆಂದು.
ಗುರುವೆಂಬುದ ಪ್ರಮಾಣಿಸಿದ ಶಿಷ್ಯನಾದಡೆ
ತನ್ನಯ ಉಭಯದ ಗುರುವ ತಿಂದು ತೇಗಬೇಕು.
ಲಿಂಗ ಭಕ್ತನಾದಡೆ ಅಂಗ ಲಿಂಗವೆಂಬ ಉಭಯವನೊಡೆದು
ಉಭಯದ ಸಂದಿಯಲ್ಲಿ ಸಿಕ್ಕದೆ ನಿಜಲಿಂಗವಂತನಾಗಬೇಕು.
ಜಂಗಮ ಅಳಿದು ವಿರಕ್ತನಾಗಬಲ್ಲಡೆ ಆ ಗುರು, ಆ ಶಿಷ್ಯ, ಆ ಲಿಂಗ, ಆ ಭಕ್ತನ,
ಈ ಜಂಗಮ, ಈ ವಿರಕ್ತನ ಕೊಂದು ತಿಂದು
ಅಂಗ ನಿರಂಗವಾಗಬಲ್ಲಡೆ ಸದ್ಭಾವಸಂಗಿ, ಷಟ್ಸ್ಥಲಬ್ರಹ್ಮಿ.
ಸರ್ವಾರ್ಪಣ ಅಂತಸ್ಥಲೇಪ, ತದ್ಭಾವ ನಾಶ. ಈ ಸಂದನಳಿದಲ್ಲಿ ಸದ್ಯೋಜಾತಲಿಂಗದಲ್ಲಿ ವಿನಾಶವಾದ ನಿರ್ಲೇಪ
ಗುರುವಿಂಗೆ ಲಿಂಗ ಬಂದು ಗುರುವಾದುದನರಿದು
ಮತ್ತರಿಯದೆ ಕೊಟ್ಟನಲ್ಲಾ, ಶಿಷ್ಯನೆಂದು ಆ ಲಿಂಗವ.
ಗುರುವಾರೆಂಬುದನರಿಯದ ನಾ ಶಿಷ್ಯನೆಂದು ಕಟ್ಟಿದೆನಲ್ಲಾ ಆ ಲಿಂಗವ.
ಆವ ಬೀಜವ ಬಿತ್ತಿದಡೂ ಆ ಬೀಜವಪ್ಪುದಲ್ಲದೆ ಬೇರೊಂದಪ್ಪುದೆ?
ಜ್ಯೋತಿ ಜ್ಯೋತಿಯ ಮುಟ್ಟಿದಂತೆ ಇದಿರೆಡೆಯಿಲ್ಲದೆ
ಗುರುಕರಜಾತನ ಮಾಡಬೇಕು.
ನಾನು ಕರ್ತು, ಅವನು ಭೃತ್ಯನೆಂದಲ್ಲಿ ಗುರುವಾದನಲ್ಲದೆ,
ಅಘಹರ ಶ್ರೀಗುರುವಾದುದಿಲ್ಲ.ಜ್ಞಾನದೀಕ್ಷೆ ಸಂಬಂಧ ಸದ್ಯೋಜಾತಲಿಂಗಕ್ಕೆ.
ವಚನಕಾರರು ಅಕ್ಕಮಹಾದೇವಿ
ಗುರು ತನ್ನ ವಿನೋದಕ್ಕೆ ಗುರುವಾದ
ಗುರು ತನ್ನ ವಿನೋದಕ್ಕೆ ಲಿಂಗವಾದ
ಗುರು ತನ್ನ ವಿನೋದಕ್ಕೆ ಜಂಗಮವಾದ
ಗುರು ತನ್ನ ವಿನೋದಕ್ಕೆ ಪಾದೋದಕವಾದ
ಗುರು ತನ್ನ ವಿನೋದಕ್ಕೆ ಪ್ರಸಾದವಾದ
ಗುರು ತನ್ನ ವಿನೋದಕ್ಕೆ ವಿಭೂತಿಯಾದ
ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ
ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ.
ಇಂತೀ ಭೇದವನರಿಯದೆ,
ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ
ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು.
ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ
ಅಂಗೈಯಲ್ಲಿರ್ದ ಲಿಂಗವು ಜಾರಿತ್ತು.
ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು
ಭವಹೇತುಗಳ ಮಾಡುವನಯ್ಯಾ.
ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು
ಚೆನ್ನಮಲ್ಲಿಕಾರ್ಜುನಾ
ಗುರುವೆ ತೆತ್ತಿಗನಾದ,
ಲಿಂಗವೆ ಮದುವಣಿಗನಾದ, ನಾನೆ ಮದುವಳಿಗೆಯಾದೆನು.
ಈ ಭುವನವೆಲ್ಲರಿಯಲು ಅಸಂಖ್ಯಾತರೆನಗೆ ತಾಯಿತಂದೆಗಳು.
ಕೊಟ್ಟರು ಸಾದೃಶ್ಯವಪ್ಪ ವರನ ನೋಡಿ.
ಇದು ಕಾರಣ ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ.
ಮಿಕ್ಕಿನ ಲೋಕದವರೆನಗೆ ಸಂಬಂಧವಿಲ್ಲವಯ್ಯಾ ಪ್ರಭುವೆ.
ಗುರುಪಾದತೀರ್ಥವೆ ಮಂಗಳ ಮಜ್ಜನವೆನಗೆ.
ವಿಭೂತಿಯೆ ಒಳಗುಂದದರಿಷಿಣವೆನಗೆ
ದಿಗಂಬರವೆ ದಿವ್ಯಾಂಬರವೆನಗೆ.
ಶಿವಭಕ್ತರ ಪಾದರೇಣುವೆ ಅನುಲೇಪನವೆನಗೆ.
ರುದ್ರಾಕ್ಷಿಯೆ ಮೈದೊಡಿಗೆಯೆನಗೆ.
ಶರಣರ ಪಾದರಕ್ಷೆಯೆ ಶಿರದಲ್ಲಿ ತೊಂಡಿಲುಬಾಸಿಗವೆನಗೆ.
ಚೆನ್ನಮಲ್ಲಿಕಾರ್ಜುನನ ಮದವಳಿಗೆಗೆ ಬೇರೆ ಶೃಂಗಾರವೇಕೆ ಹೇಳಿರೆ ಅವ್ವಗಳಿರಾ ?
ಗುರುವೆಂಬ ತೆತ್ತಿಗನು
ಲಿಂಗವೆಂಬಲಗನು ಮನನಿಷ್ಠೆಯೆಂಬ ಕೈಯಲ್ಲಿ ಕೊಡಲು,
ಕಾದಿದೆ ಗೆಲಿದೆ ಕಾಮನೆಂಬವನ,
ಕ್ರೋಧಾದಿಗಳು ಕೆಟ್ಟು, ವಿಷಯಂಗಳೋಡಿದವು.
ಅಲಗು ಎನ್ನೊಳು ನಟ್ಟು ಆನಳಿದ ಕಾರಣ ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ.
ಗುರುವಿನ ಕರುಣದಿಂದ ಲಿಂಗವ ಕಂಡೆ, ಜಂಗಮನ ಕಂಡೆ.
ಗುರುವಿನ ಕರುಣದಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ.
ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಗೋಷ್ಠಿಯ ಕಂಡೆ.
ಚೆನ್ನಮಲ್ಲಿಕಾರ್ಜುನಯ್ಯಾ,
ನಾ ಹುಟ್ಟಲೊಡನೆ ಶ್ರೀಗುರು ವಿಭೂತಿಯ ಪಟ್ಟವ ಕಟ್ಟಿ ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು.
ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ.
ಏಕೆ? ಆತನ ಧನಕ್ಕೆ ತಂದೆಯಾದನಲ್ಲದೆ
ಆತನ ಮನಕ್ಕೆ ತಂದೆಯಾದನೆ ?
ಏಕೆ? ಆತನ ಮನವನರಿಯನಾಗಿ, ಆತನ ಧನಕ್ಕೆ ತಂದೆಯಾದನು.
ತನ್ನಲ್ಲಿರ್ದ ಭಕ್ತಿಯ ಮಾರಿಕೊಂಡುಂಬವರು ನಿಮ್ಮ ನಿಜಭಕ್ತರಲ್ಲವಯ್ಯಾ ಚೆನ್ನಮಲ್ಲಿಕಾರ್ಜುನಾ.
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ.
ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ.
ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ.
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ.
ಮನ ಮುನ್ನ ಮುನ್ನವೆ ಗುರುವಿನೆಡೆಗೆಯಿದಿತ್ತು.
ತನುವಿನಲ್ಲಿ ಡಿಂಬ ನೋಡಾ ?
ಮನ ಬೇರಾದವರ ತನುವನಪ್ಪುವನೆಗ್ಗ ನೋಡಾ. ಚೆನ್ನಮಲ್ಲಿಕಾರ್ಜುನನ ನೋಡಿ ಕೂಡಿ ಬಂದೆಹೆನಂತಿರುವಂತಿರು.
ಶಿವನು ತಾನೆ ಗುರುವಾಗಿ ಬಂದು
ಮಹಾಘನಲಿಂಗವ ವೇದಿಸಿಕೊಟ್ಟ ಪರಿಯೆಂತೆಂದೊಡೆ v
ಆತ್ಮಗೂಡಿ ಪಂಚಭೂತಂಗಳನೆ ಷಡಂಗವೆಂದೆನಿಸಿ,
ಆ ಅಂಗಕ್ಕೆ ಕಲೆಗಳನೆ ಷಡುಶಕ್ತಿಗಳೆನಿಸಿ,
ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ,
ಆ ಭಕ್ತಿಗಳಿಗೆ ಭಾವe್ಞನಮನಬುದ್ಧಿಚಿತ್ತ
ಅಹಂಕಾರಗಳನೆ ಹಸ್ತಂಗಳೆಂದೆನಿಸಿ,
ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ
ಪಂಚಲಿಂಗಂಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ,
ಆ ಮಂತ್ರಲಿಂಗಂಗಳಿಗೆ ಹೃದಯಗೂಡಿ
ಪಂಚೇಂದ್ರಿಯಂಗಳನೆ ಮುಖಂಗಳೆಂದೆನಿಸಿ,
ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯ ಪದಾರ್ಥಗಳೆಂದೆನಿಸಿ,
ಆ ದ್ರವ್ಯಪದಾರ್ಥಂಗಳು ಆಯಾ ಮುಖದ ಲಿಂಗಗಳಲ್ಲಿ
ನಿರಂತರ ಸಾವಧಾನದಿಂದ ಅರ್ಪಿತವಾಗಿ
ಬೀಗಲೊಡನೆ ಅಂಗಸ್ಥಲಂಗಳಡಗಿ,
ತ್ರಿವಿಧ ಲಿಂಗಾಂಗ ಸ್ಥಲಂಗಳುಳಿದು,
ಕಾಯಗುರು, ಪ್ರಾಣಲಿಂಗ, e್ಞನ ಜಂಗಮ,
ಗುರುವಿನಲ್ಲಿ ಶುದ್ಧ ಪ್ರಸಾದ
ಲಿಂಗದಲ್ಲಿ ಸಿದ್ಧಪ್ರಸಾದ
ಜಂಗಮದಲ್ಲಿ ಪ್ರಸಿದ್ಧ ಪ್ರಸಾದ
ಇಂತೀ ತ್ರಿವಿಧ ಪ್ರಸಾದ ಏಕಾರ್ಥವಾಗಿ
ಮಹಾಘನ ಪರಿಪೂರ್ಣ ಪ್ರಸಾದವಳವಟ್ಟ ಶರಣ
e್ಞನಿಯಲ್ಲ, ಅe್ಞನಿ ಮುನ್ನವೆ ಅಲ್ಲ,
ಶೂನ್ಯನಲ್ಲ, ನಿಶ್ಶೂನ್ಯನಲ್ಲ, ದ್ವೈತಿಯಲ್ಲ, ಅದ್ವೈತಿಯಲ್ಲ.
ಇಂತೀ ಉಭಯಾತ್ಮಕ ತಾನೆಯಾಗಿ
ಇದು ಕಾರಣ, ಇದರಾಗುಹೋಗು ಸಕಲಸಂಬಂಧವ ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರೆ ಬಲ್ಲರು.
ಸದ್ಗುರು ಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತಚ್ಫಿಷ್ಯನ ಮಸ್ತಕದ ಮೇಲೆ ತನ್ನ ಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ.
ಒಪ್ಪುವ ಶ್ರೀ ವಿಭೂತಿಯ ನೊಸಲಿಂಗೆ ಪಟ್ಟವಕಟ್ಟಿದಡೆ
ಮುಕ್ತಿರಾಜ್ಯದ ಒಡೆತನಕ್ಕೆ ಪಟ್ಟವಕಟ್ಟಿದಂತಾಯಿತ್ತಯ್ಯಾ.
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ
ಪಂಚಕಳಶದಭಿಷೇಕವ ಮಾಡಿಸಲು,
ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯಾ.
ನೆರೆದ ಶಿವಗಣಂಗಳ ಮಧ್ಯದಲ್ಲಿ
ಮಹಾಲಿಂಗವನು ಕರತಳಾಮಳಕವಾಗಿ ಶಿಷ್ಯನ ಕರಸ್ಥಲಕ್ಕೆ ಇತ್ತು,
ಅಂಗದಲ್ಲಿ ಪ್ರತಿಷ್ಠಿಸಿ, ಪ್ರಣವಪಂಚಾಕ್ಷರಿಯುಪದೇಶವ
ಕರ್ಣದಲ್ಲಿ ಹೇಳಿ, ಕಂಕಣವ ಕಟ್ಟಿದಲ್ಲಿ,
ಕಾಯವೆ ಕೈಲಾಸವಾಯಿತ್ತು ;
ಪ್ರಾಣವೆ ಪಂಚಬ್ರಹ್ಮಮಯಲಿಂಗವಾಯಿತ್ತು.
ಇಂತು ಮುಂದ ತೋರಿ ಹಿಂದ ಬಿಡಿಸಿದ
ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯಾ ಚೆನ್ನಮಲ್ಲಿಕಾರ್ಜುನಾ.
ವಚನಕಾರರು ಅಮುಗೆ ಮಾರಮ್ಮ
ಗುರುವೆಂಬೆನೆ, ಗುರುವು ನರನುದ
ಲಿಂಗವೆಂಬೆನೆ, ಲಿಂಗವು ಕಲ್ಲುz
ಜಂಗಮವೆಂಬೆನೆ, ಜಂಗಮವು ಆತ್ಮನುz
ಪಾದೋದಕವೆಂಬೆನೆ, ಪಾದೋದಕ ನೀರುz
ಪ್ರಸಾದವೆಂಬೆನೆ, ಪ್ರಸಾದ ಓಗರ.
ಇಂತೆಂದುದಾಗಿ,
ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧವ ಹಿಡಿದ ಕಾರಣ,
ಗುರುವೆಂಬವನು ನರನು.
ಅಷ್ಟವಿಧಾರ್ಚವೆ ಷೋಡಶೋಪಚಾರಕ್ಕೆ ಒಳಗಾದ ಕಾರಣ,
ಲಿಂಗವೆಂಬುದು ಕಲ್ಲು.
ಆಶೆಪಾಶೆಗೆ ಒಳಗಾದ ಕಾರಣ,
ಜಂಗಮವೆಂಬುದು ಆತ್ಮನು.
ಲಾಂbsನಿಗಳೆಂದು ಕಾಂಚನಕ್ಕೆ ಕೈಯಾನುವರಲ್ಲಿ
ಪಾದೋದಕ ಪ್ರಸಾದವೆಂದು ಕೊಂಡೆನಾದಡೆ
ಕೆಸರಿನೊಳಗೆ ಬಿದ್ದ ಪಶುವಿನಂತೆ ಆಯಿತ್ತು ಕಾಣಾಅಮುಗೇಶ್ವರಾ.
ಗುರುವಿನಡಿಗೆರಗೆನೆಂಬ ಭಾಷೆ ರಿನಗೆ.
ಲಿಂಗವ ಪೂಜಿಸಿ ವರವ ಬೇಡೆನೆಂಬ ಭಾಷೆ ಎನಗೆ.
ಜಡೆಮುಡಿಯುಳ್ಳ ನಿಜಜಂಗಮವ ಕಂಡು
ಅಡಿಗೆರಗದ ಭಾಷೆ ಎನಗೆ.
ಹಿಡಿದ bsಲವ ಬಿಡದೆ ನಡೆಸಿ
ಮೃಡನ ಪಡೆದೆಹೆನೆಂಬ ಭಾಷೆ ಎನಗೆ.
ಕಡುಗಲಿಯಾಗಿ ಆಚರಿಸಿ ಜಡಿದೆನು
ಅe್ಞನಿಗಳ ಬಾಯ ಕೆರಹಿನಲ್ಲಿ.
ಮಾತಿನಲ್ಲಿ ವೇಷಧಾರಿಗಳು ಮೃಡನ ಅರಿದೆಹೆನೆಂದು ಗಳಹುತಿಪ್ಪರೆ,
ಕೆರಹಿನಟ್ಟೆಯಲ್ಲಿ ಹೊಯ್ಯದೆ ಮಾಣ್ಬನೆ ಅರಿವುಳ್ಳ ಘನಮಹಿಮನು ¯
ಅಮುಗೇಶ್ವರನೆಂಬ ಲಿಂಗವ ಅರಿದಿಪ್ಪ ಮಹಾಘನಮಹಿಮನ ನಾನೇನೆಂಬೆನಯ್ಯಾ ¯
ನಾನೆ ಗುರುವಾದಬಳಿಕ ಇನ್ನಾರ ನೆನೆವೆನಯ್ಯಾ ?
ನಾನೆ ಲಿಂಗವಾದಬಳಿಕ ಇನ್ನಾರ ನೆನೆವೆನಯ್ಯಾ ?
ನಾನೆ ಜಂಗಮವಾದಬಳಿಕ ಇನ್ನಾರ ನೆನೆವೆನಯ್ಯಾ ?
ಎನಗೆ ಗುರುವಾದಾತನು ನೀನೆ, ಎನಗೆ ಲಿಂಗವಾದಾತನು ನೀನೆ.
ಎನಗೆ ಜಂಗಮವಾದಾತನು ನೀನೆ.
ಎನಗೆ ಪಾದೋದಕ ಪ್ರಸಾದವಾದಾತನು ನೀನೆ. ಅಮುಗೇಶ್ವರಲಿಂಗವಾಗಿ ಎನ್ನ ಕರಸ್ಥಲಕ್ಕೆ ಬಂದಾತನು ನೀನೆ, ಪ್ರಭುವೆ
ವಚನಕಾರರು ಆದಯ್ಯ
ಆಚಾರದನುವಳವಟ್ಟು, ಕರಣಂಗಳನುಡುಗಿ, ತನುವ ಸವೆವುದು ಗುರುವಿನಲ್ಲಿ.
ವ್ರತನೇಮಂಗಳಿಂ ಪಲ್ಲಟವಿಲ್ಲದೆ, ಮನವ ಸವೆವುದು ಲಿಂಗದಲ್ಲಿ.
ಆಶೆ ರೋಷಗಳಿಲ್ಲದೆ ಆದರಣೆಯಿಂಧನವ ಸವೆವುದು, ಜಂಗಮದಲ್ಲಿ.
ಇಂತೀ ತ್ರಿವಿಧದಲ್ಲಿ ತ್ರಿವಿಧ ಸವೆದು ಪ್ರಳಯಪ್ರಕೃತಿಗೊಳಗಾಗದೆ,
ಸುಜ್ಞಾನಮುಖದಿಂ ಪ್ರಸಾದವ ಹಿಂಗದೆ ಗ್ರಹಿಸಿಪ್ಪ ಭಕ್ತನನೇನೆಂದುಪಮಿಸುವೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
ಗುರುಕರಣವೆಂಬ ಪಾದೋದಕದಲ್ಲಿ ನಾಂದು ನಾಂದು,
ನಿಃಕ್ರೀಯಾಯಿತ್ತಯ್ಯಾ.
ಇಂತು ನಿರ್ಮಲನಾಗಿ ಲಿಂಗಕ್ಕೆ ಮಜ್ಜನಕ್ಕೆರದು
ಲಿಂಗೋದಕವಾಯಿತ್ತು.
ಲಿಂಗಸೋಂಕಿನಿಂದ ಪಾದೋದಕವಾಯಿತ್ತು.
ಲಿಂಗಾರ್ಪಿತದಿಂದ ಪ್ರಸಾದೋದಕವಾಯಿತ್ತು.
ಲಿಂಗೋದಕ ಮಜ್ಜನದಲ್ಲಿ
ಪಾದೋದಕ ಕರಚರಣಮುಖ ಪ್ರಕ್ಷಾಲನದಲ್ಲಿ
ಪ್ರಸಾದೋದಕ ಲಿಂಗಭೋಗೋಪಭೋಗದಲ್ಲಿ.
ಇಂತೀ ತ್ರಿವಿಧೋದಕದ ಪರಿಯನರಿತು
ಲಿಂಗಭೋಗೋಪಭೋಗದಲ್ಲಿ ಭೋಗಿಸಬಲ್ಲರೆಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
ಗುರುಕರಾಬ್ಜದಿಂದ ಉದಯಿಸಿದ ಶಿಷ್ಯನು
ಬೀಜವೃಕ್ಷದಂತೆ ಅನ್ಯವಲ್ಲದಿಪ್ಪನಾಗಿ,
ಗುರು ತಾನಾದ ಶಿಷ್ಯನು ಗುರುತನದ ಹಮ್ಮಿಲ್ಲದೆ
ಆ ಶಿಷ್ಯನಾಗಿ ನಿಂದ ಸಹಜನಯ್ಯಾ.
ಸೌರಾಷ್ಟ್ರ ಸೋಮೇಶ್ವರಲಿಂಗದಪ್ರಸಾದಸಾಧ್ಯವಾಯಿತ್ತಾಗಿ ಅಭೇದ್ಯನಯ್ಯಾ.
ಗುರುಕಾರುಣ್ಯ ವೇದ್ಯವಾದ ಬಳಿಕ ಜನನ ಸೂತಕವಿಲ್ಲ,
ಘನಲಿಂಗಸಂಗದಲ್ಲಿ ಮನವು ನಿವಾಸಿಯಾದ ಬಳಿಕ ಜಾತಿಸೂತಕವಿಲ್ಲ,
ತತ್ವಪರಿಜ್ಞಾನದಿಂ ತನ್ನ ತಾನರಿದ ಬಳಿಕ ಪ್ರೇತಸೂತಕವಿಲ್ಲ.
ಸರ್ವೇಂದ್ರಿಯಂಗಳಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ಮತವಾದ ಬಳಿಕ
ಜಡದುಃಖಕರ್ಮ ಸಂಕಲ್ಪವಿಕಲ್ಪಂಗಳಿನಿತುನಾನಾ ಸೂತಕಂಗಳೇನೂ ಇಲ್ಲ ನೋಡಯ್ಯಾ
ಗುರುಕಾರುಣ್ಯವ ಪಡೆದು ಲಿಂಗಾನುಗ್ರಾಹಕನಾಗಿ
ಅಂಗ ಲಿಂಗ ವೇಧೆಯಿಂದಿರಲು ಆ ಇಷ್ಟಲಿಂಗಕ್ಕೆ ಅಂಗವೇ ಅರ್ಪಿತ.
ಮತ್ತಾ ಇಷ್ಟಲಿಂಗಕ್ಕೆ ಮನಕ್ಕೆ ವೇದ್ಯವಾಗಿ
ಪ್ರಾಣನಲ್ಲಿ ಪ್ರವೇಶವಾಗಿ ಲಿಂಗವೇ ಪ್ರಾಣವಾಗಿರಲು
ಆ ಪ್ರಾಣಲಿಂಗಕ್ಕೆ ಮನವೇ ಅರ್ಪಿತ.
ಇಷ್ಟ ಪ್ರಾಣ ಸಂಗ ಸಂಯೋಗ ಸಮರಸಾನುಭಾವ ಲಿಂಗದನುವರಿತು,
ಅರಿಕೆಯರತ ಅರುವಿನ ತೃಪ್ತಿಯೇ ಭಾವಲಿಂಗಾರ್ಪಿತ.
ಇದಕ್ಕೆ ಶ್ರುತಿ:
ಇಷ್ಟಲಿಂಗಾರ್ಪಿತಂ ಚಾಂಗಂ ಪ್ರಾಣಲಿಂಗಾರ್ಪಿತಂ ಮನಃ†
ಭಾವಲಿಂಗಾರ್ಪಿತಾ ತೃಪ್ತಿರಿತಿ ಭೇದೋ ವರಾನನೇ ††
ಇಂತೆಂದುದಾಗಿ,
ಇಷ್ಟ ಪ್ರಾಣ ತೃಪ್ತಿ ಸಮರಸಾದ್ವೈತವಾದಲ್ಲಿಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತ.
ಗುರುವೆ ಅಂಗ, ಲಿಂಗವೆ ಮನ, ಜಂಗಮವೇ ಪ್ರಾಣವಯ್ಯಾ.
ನಾದವೆ ಗುರು, ಬಿಂದುವೆ ಲಿಂಗ, ಕಳೆಯೆ ಜಂಗಮವಯ್ಯಾ.
ಇದಕ್ಕೆ ಶ್ರುತಿ:
ನಾದಂ ಗುರುಮುಖಂಚೈವ ಬಿಂದುಂ ಲಿಂಗಮುಖಂ ತಥಾ †
ಕಲಾಂ ಚರಮುಖಂ ಜ್ಞಾತ್ವಾ ಗುರುರ್ಲಿಂಗಂತು ಜಂಗಮಃ ††
ಇಂತೆಂದುದಾಗಿ ಪ್ರಸಾದಕಿನ್ನೇವೆ?
ಗುರುವೆ ಲಿಂಗ, ಲಿಂಗವೆ ಜಂಗಮ, ಜಂಗಮವೆ ಪ್ರಸಾದ,
ಪ್ರಸಾದವೆ ಪರಿಪೂರ್ಣವಾದಡೆಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ತಾನೆ.
ಗುರುವಿಡಿದು ಲಿಂಗವಾವುದೆಂದರಿಯಬೇಕು,
ಲಿಂಗವಿಡಿದು ಜಂಗಮವಾವುದೆಂದರಿಯಬೇಕು,
ಜಂಗಮವಿಡಿದು ಪ್ರಸಾದವಾವುದೆಂದರಿಯಬೇಕು,
ಪ್ರಸಾದವಿಡಿದು ಪರಮಪರಿಣಾಮವೆಡೆಗೊಳ್ಳಬೇಕು.
ಅಂತಪ್ಪ ಪರಮಪರಿಣಾಮವೆ ಪರಬ್ರಹ್ಮವೆಂದರಿತಲ್ಲಿ,ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತ.
ಗುರುವಿನಂತರಂಗದೊಳಗೆ ಶಿಷ್ಯ, ಶಿಷ್ಯನಂತರಂಗದೊಳಗೆ ಗುರು.
ಈ ಗುರುಶಿಷ್ಯಸಂಬಂಧ ಶರೀರಪ್ರಾಣದಂತೆ ಭಿನ್ನವಿಲ್ಲದೆ,
ಗುರುವೆಂಬ ಭಾವ ತೋರದಿರ್ದಡೆ ಆತ ಶಿಷ್ಯ.
ಶಿಷ್ಯನೆಂಬ ಭಾವ ತೋರದಿರ್ದಡೆ ಆತ ಗುರು.
ಇಂತು ಭಾವ ಭೇದಗಟ್ಟಿರಲು
ಮೌನಮುದ್ರೆಯಿಂದುಪದೇಶವ ಮಾಡಿದ ಗುರುಸೇವೆಯಿಂ
ತತ್‍ಶಿಷ್ಯನ ಸಂಶಯ ವಿಚ್ಛಿನ್ನವಾಗಿ, ಉಪಮಾತೀತವಾದ ಉಪದೇಶದಿಂ
ಲಿಂಗಸೇವ್ಯದಲ್ಲಿ ತನ್ನಂಗವ ಮರದಿಪ್ಪಸುಖವನುಪಮಿಸಬಾರದಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
ಗುರುವಿನಲ್ಲಿ ಗುಣವನರಸಲಿಲ್ಲ, ಲಿಂಗದಲ್ಲಿ ಲಕ್ಷಣವನರಸಲಿಲ್ಲ,
ಜಂಗಮದಲ್ಲಿ ಕುಲವನರಸಲಿಲ್ಲ, ಪಾದೋದಕದಲ್ಲಿ ಶುದ್ಧವನರಸಲಿಲ್ಲ,
ಪ್ರಸಾದದಲ್ಲಿ ರುಚಿಯನರಸಲಿಲ್ಲ.ಸೌರಾಷ್ಟ್ರ ಸೋಮೇಶ್ವರನ ಶರಣರಲ್ಲಿ ಮತ್ತೇನನೂ ಅರಸಲಿಲ್ಲ.
ಗುರುಲಿಂಗಜಂಗಮ ಒಂದಾದ ಕ್ರಿಯೆಯಲ್ಲಿ ನಿಂದ
ಪ್ರಕಾಶಂಗೆ ಆವ ಸಂದೇಹವಿಲ್ಲ.
ಆವ ವಿಷಯಂಗಳೊಳಗೆ ಮನವಿಹುದು ಆ ರೂಪು ತಾನಾಗಿಹುದಾಗಿ
ಸೌರಾಷ್ಟ್ರ ಸೋಮೇಶ್ವರಲಿಂಗದ ವಿಷಯದೊಳಿಪ್ಪ ಮನತದ್ರೂಪ ತ[ಲ್ಲೀ]ಯ.
ಗುರುಲಿಂಗದ ದೃಷ್ಟಿಯಲ್ಲಿ ದೃಷ್ಟಿನಟ್ಟು, ಕಂಗಳು ಕರಗಿ,
ಅವಗ್ರಹಿಸಿ ಬೆರಸಿ ಶಿವಜ್ಞಾನಾನುಭಾವದಲ್ಲಿ ಮನ ಕರಗಿ,
ಮನ, ಕಂಗಳು ಏಕರಸವಾಗಿಸೌರಾಷ್ಟ್ರ ಸೋಮೇಶ್ವರನ ಕರುಣ ಪಾದೋದಕದೊಳಗೆ ಬೆರಸಿತ್ತು.
ಸಂಗ್ರಹ : ಕುಮಾರ್ ಬಿ ಬಾಗೀವಾಳ್
Comments
Post a Comment