ಹಣಾಹಣಿಯಿ ಮಣಿವುದು ಅಪರಾದವೇ?

 ಹಣಾಹಣಿಯಿ ಮಣಿವುದು ಅಪರಾದವೇ?


ಹಣಾಹಣಿಯಲಿ ಮಣಿಯುವುದು ಅಪರಾದವೇ?

ಅಣಿಯಾಗಲು,ಹೊಣೆಗಾರಿಕೆ ಹೊರಲಲ್ಲವೇ.

ಅವಲೋಕಿಸಲು ಇದು ಸರಿಸಮಯ ಎನಲು ತಾನೆ

ಹೆಣೆ ಜಯದ ಹಗ್ಗವನು ,ಹಿಡಿದೇಳು ಪುಟಿದು ನಿಲ್ಲುವವರೆಗು.


ಕಡೆಗಣಿಸದಿರು ಪರಿಶ್ರಮದ ಬದುಕನು

ನಡೆ ಕಡೆವರೆಗು ಗೆಲುವ ಬೆನ್ನತ್ತಿ ಗುರಿಯೆಡೆಗೆ.

ಪಡೆವೆ ಹೊಸದೆ ಜಯಾಮೃತವನೆ ಅಮರ ಕೊನೆಗೆ

ಹೆಡೆಯೆತ್ತಿ ನಡೆ ಮಣಿಯದಿರು ಸಂದರ್ಭಕೆ.


ಹೊಡೆದರೆ ಹಾಲು ಹಾಲಾಗದು  ಹಾಳಾಗುವುದು

ಮಡಿದರೆ ಮಣ್ಣಾಗುವುದು ನಿಶ್ಚಿತವಲ್ಲದೆ ಮತ್ತೇನು

ನಡೆ ನಡೆ ಗೆಲುವು ನಿನ್ನದೆ ಒಲವಿಡು ಮನಬಲದ ಮೇಲೆ

ಪಡೆ ಜಯದ ಮಾಲೆಯನು ಕೊರಳಿಗೆ,ಮೆರೆ ನೆರೆ ಹೊರೆ ಮೆಚ್ಚುವ ಹಾಗೆ.

 

ರಚನೆ: ಕುಮಾರ್ ಬಿ ಬಾಗೀವಾಳ್

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES