Posts

ಅಸ್ಪಷ್ಟ ನಿಲುವಿನ ಹುಡುಗಿ...

ಅಸ್ಪಷ್ಟ ನಿಲುವಿನ ಹುಡುಗಿ... ಹುಡುಗಿಯೋರ್ವಳ ಕೀರಲು ದ್ವನಿಯಲ್ಲಿ ದ್ವಂದ್ವ ಯಾವ ಹಿಂಸೆಯೋ ಏನೋ ರಕ್ಷಣೆಗಾಗಿನ ಹಪಾಹಪಿ, ತಾನೇ ತೋಡಿದ ಗುಂಡಿಯೊಳಗೆನ ವಾಸ ಅರಮನೆಯೋ ಸೆರೆಮನೆಯೋ ತಿಳಿಯದಾಗಿದೆ ಸ್ವಲ್ಪ ಹಿತವೆನಿಸಿದರೂ ಅಹಿತವೇ ಹೆಚ್ಚಾದಂತಿದೆ ದೂರದಲ್ಲೆಲ್ಲೋ ಪ್ರಸವ ವೇದನೆ ಅನುಭವಿಸುತ್ತಿರುವ ಹೆಂಗಸಿನ ಹಾಗೆ ನೋವಿನಲ್ಲಿಯೂ ಸುಖ. ತಾನೇ ನೇಯ್ದ ಬಲೆಯೊಳಗಿನ ಜೇಡನ ಹಾಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆಯ್ದುಕೊಂಡ ದಾರಿ ಹೂವಾಗ ಬಹುದೆಂಬ ಹಂಬಲ  ಆದರೆ ನಡೆದಷ್ಟಕ್ಕೂ ಸಿಗುತ್ತಿಲ್ಲ ಇನ್ನೆಷ್ಟಿದೆಯೋ ನಡೆಯಬೇಕಾದದ್ದೆಂಬ ಅದೃಶ್ಯ ಅಸ್ಪಷ್ಟದ ಮುನ್ಸೂಚನೆ ಸೂಜಿ ಚಿನ್ನದ್ದಾದರೂ ಇಟ್ಟುಕೊಂಡಷ್ಟು ಆಕಸ್ಮಿಕವಾಗಿಯಾದರೂ ಚುಚ್ಚಿ ಬಿಡಬಹುದೆಂಬ ಎಚ್ಚರಿಕೆಯ ಬದುಕು. ಮರುಬರುವೆನೆಂದರೆ ಬಹುದೂರ ಸಾಗಿಯಾಗಿದೆ ಮುಂದುವರೆಯೋಣವೆಂದರೆ ಅಸ್ಪಷ್ಟ ದಾರಿ ಒಗ್ಗಿದೂರಿನಿಂದ ಬಗ್ಗಿನಡೆಯಬೇಕಾದ ಊರಿಗೆ ಪಯಣ ತಾನೇನೇ ಆದರೂ ತನ್ನನ್ನೇ ಕಳಕೊಂಡ ತೊಳಲಾಟ ಸಮರ ಮನದೊಳಗೆ ಸಾವಿರ ಸಾವಿರ ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ. ಉತ್ತರಗಳ ಆಯ್ಕೆಯ ಗೊಂದಲದ ದ್ವಂದ್ವ ಹುಡುಗಿಗೆ. ರಚನೆ : ಕುಮಾರ್ ಬಿ ಬಾಗೀವಾಳ್

ಭಾರತದ ಕನಸುಗಾರ ಡಾ|| ಎ.ಪಿ.ಜೆ.ಅಬ್ದುಲ್ ಕಲಾಮ್. India's Dream man Dr.APJ Abdul Kalam : an article by Kumar B Bagival

Image
ಭಾರತದ ಕನಸುಗಾರ ಡಾ|| ಎ.ಪಿ.ಜೆ.ಅಬ್ದುಲ್ ಕಲಾಮ್. ಕನಸೊಂದರ ಕಾಲುದಾರಿ ಹೆದ್ದಾರಿಯಾದ ಪರಿ… "ನೀನು ಸೂರ್ಯನಂತೆ ಪ್ರಜ್ವಲಿಸಬೇಕಾದರೆ ಮೊದಲು ಆ ಸೂರ್ಯನಂತೆ ದಹಿಸಬೇಕು" - ಡಾ|| ಎ.ಪಿ.ಜೆ. ಅಬ್ದುಲ್ ಕಲಾಮ್ ನಿಷ್ಠೆ, ಪರಿಶ್ರಮ,ತೊಡಗಿಸಿಕೊಳ್ಳುವಿಕೆ,ಏಕಾಗ್ರತೆ, ತನ್ನಲ್ಲಿನ ಆತ್ಮವಿಶ್ವಾಸ, ಕನಸು…. ಇದ್ದರೆ ಏನನ್ನಾದರೂ ಸಾಧಿಸಬಹುದು ಮತ್ತು ಆ ಸಾಧಕನನ್ನ ಸ್ಥಾನ ತಾನಾಗಿಯೇ ಹುಡುಕಿಕೊಂಡು ಬರುತ್ತದೆ,ಹೆಸರು ನೂರ್ಕಾಲ ಜಗಜನಿತವಾಗುತ್ತದೆ. ಹಾಗು ಯಶಸ್ಸು ಸಿಕ್ಕ ನಂತರವೂ ತನ್ನತನವನ್ನು ಬಿಡದಿದ್ದರಂತು ಸಾಧನೆಗೊಂದು ಸಾರ್ಥಕತೆ ಸಿಗುತ್ತದೆ. ಅಂದ ಹಾಗೆ ಹೀಗೆಲ್ಲಾ ಮಾತನಾಡುವುದು ಕೇವಲ ಮಾತಾಗಿರುವುದಿಲ್ಲ ಅದು ಸಾಧಕರನ್ನ ನೆನೆಯುವುದಾಗಿರುತ್ತದೆ ಹಾಗು ಅವರ ಹಾದಿಯನ್ನು ನಾವೂ ಹಿಡಿಯಬಹುದಾದ ಮಾರ್ಗವಾಗಿರುತ್ತದೆ. ತಮಿಳುನಾಡಿನ ರಾಮೇಶ್ವರಂನ ಕಡಲ ಕಿನಾರೆಯ ಮೇಲೆ ನಡೆದಾಡುತ್ತಿದ್ದ ಹುಡುಗನೊಬ್ಬನ ಪೂರ್ವಜರು ಶ್ರೀಮಂತರಾಗಿದ್ದರೂ ವ್ಯವಹಾರದಲ್ಲಾದ ನಷ್ಟದ ಪರಿಣಾಮ ಬಡತನ ಬಂದೊದಗಿದಾಗ ಜೀವನ ನಿರ್ವಹಣೆಗೆ ತನ್ನ ಪೋಷಕರಿಗೆ ನೆರವಾಗಲೋಸುಗ ದಿನಪತ್ರಿಕೆ ಹಂಚುತ್ತಾ ಕಷ್ಟದ ದಿನಗಳನ್ನು ದೂಡುತ್ತಾ ತನ್ನ ಬಾಲ್ಯದಲ್ಲೇ ಹೆಚ್ಚನ ಜವಾಬ್ದಾರಿಯ ಅರಿವನ್ನು ಹೊಂದಿರುತ್ತಾನೆ. ಆ ದಿನ ಯಾರಿಗೂ ತಿಳಿದಿರಲಿಲ್ಲ ಅದೇ ಬಾಲಕ ಭಾರತದ ಕ್ಷಿಪಣಿ ಲೋಕದ ಜವಾಬ್ದಾರಿ ಹೊರುತ್ತಾನೆಂದು, ಭಾರತದ ಶಕ್ತಿ ಎಂತಹದ್ದೆಂದು ವಿಶ್ವಕ್ಕೆ ತೋರಿಸುತ್ತಾನೆಂದು, ಅಷ್ಷೇ ಏಕ...

ಹಾಗೆ ಒಂದರಗಳಿಗೆ ನಿಮ್ಮೊಂದಿಗೆ... ಜೀವನದ ಅತ್ಯುತ್ತಮ ಗಳಿಗೆ ಯಾವುದು? An article about which is our best monent in our life? By Kumar B Bagival.

ಹಾಗೆ ಒಂದರಗಳಿಗೆ ನಿಮ್ಮೊಂದಿಗೆ... ಜೀವನದ ಅತ್ಯುತ್ತಮ ಗಳಿಗೆ ಯಾವುದು? ಜೀವನದ ಅತ್ಯುತ್ತಮ ಗಳಿಗೆ ಯಾವುದೆಂದು ಯಾರಾದರೊಬ್ಬರನ್ನು ಕೇಳಿದರೆ ವೈವಿದ್ಯಮಯ ಉತ್ತರಗಳು ದೊರೆಯಬಹುದು. ಗಳಿಗೆಯೊಂದು ಉತ್ತಮ ಅತ್ಯುತ್ತಮವಾಗಲು ಹಲವರಿಗೆ ಹಲವು ಕಾರಣಗಳಿರುತ್ತವೆ. ಆ ಗಳಿಗೆಗಳು ಸಿಹಿಗಳಿಗೆಗಳೇ ಆಗಿರುತ್ತವೆ ಎಂಬುದು ಮಾತ್ರ ಸರ್ವಸಮ್ಮತ. ಯರೊಟ್ಟಿಗಿದ್ದರೆ ಹಿತ, ಅತ್ಯುತ್ತಮ ಎಂಬದು ಕೂಡ ಹಾಗೆಯೆ. ಅಂದ ಹಾಗೆ ಆ ಅತ್ಯುತ್ತಮ ಗಳಿಗೆ ಅಂದರೆ ಏನು ಎಂದೇನಾದರೂ ಪ್ರಶ್ನೆ ಬಂದರೆ ಎಲ್ಲರ ಉತ್ತರ ಒಂದೆ ಅದು ಸಿದ್ಧ ಉತ್ತರ ಸಿಹಿಗಳಿಗೆಯೇ ಆಗಿರಬೇಕು ಎಂಬುದು. ಆ ಗಳಿಗೆ ಹಿತಕರವಾಗಿರಬೇಕು, ಖುಷಿಯಾಗಿರಬೇಕು , ಅಥವಾ ಬದುಕಿಗೆ ಮುನ್ನುಡಿಯಂತಿರಬೇಕು,ಅಥವಾ ಬದುಕಿನ ಒಂದು ಉತ್ತಮ ತಿರುವಾಗಿರಬೇಕು ಹೀಗೆ… ಒಟ್ಟಾರೆ ಮಹತ್ವದ್ದೇ ಆಗಿರಬೇಕು. ಯೋಧನೊಬ್ಬನಿಗೆ ನಿನ್ನ ಜೀವನದ ಅತ್ಯುತ್ತಮ ಗಳಿಗೆ ಯಾವುದೆಂದು ಕೇಳಿದರೆ ಅವನಿಂದ ಬರಬಹುದಾದ ಉತ್ತರ ನಿರೀಕ್ಷಿತವೇ ಆಗಿರುತ್ತದೆ. ಅದು ಆತ ತನ್ನ ತಾಯ್ನೆಲದ ಪಹರೆಗೆ ನಿಂತಾಗ, ತಾಯ್ನೆಲಕ್ಕೆ ವೈರಿಗಳಿಂದ ಅಪಾಯ ಬಂದಾಗ ಅಪಾಯ ತಂದೊಡ್ಡಿದ ವೈರಯ ರುಂಡ ಚಂಡಾಡಿದ ಗಳಿಗೆಯೇ ಅತ್ಯುತ್ತಮ ಗಳಿಗೆ ಎಂದು. ಮಗುವಿಗೆ ಕೇಳಿದರೆ ಅದರ ಉತ್ತರವೂ ನಿರೀಕ್ಷಿತವೇ ಪೋಷಕರು ತನಗೆ ತನು ಅಪೇಕ್ಷಿಸಿದ್ದನ್ನು ಕೊಡಿಸಿದಾಗ ಎಂಬುದಾಗಿರುತ್ತದೆ. ಒಬ್ಬ ಕ್ರೀಡಾಪಟುವಿಗೆ ಕೇಳಿದರೆ ಜೀವಮಾನ ಪೂರ್ತಿ ತಾಯ್ನಾಡಿಗೆ ಕೀರ್ತಿ ತರಲೋಸುಗ ಬೆವರಿಳಿಸಿದ ಮೇಲೆ ...

Good Thougts

ಇದ್ದೇ ಇದೆ ಜಾಗ.. ಇದ್ದೇ ಇದೆ ಎಲ್ಲದಕೂ ಜಾಗ ಧರೆಯಲಿ ಎಡವಿ ಬಿದ್ದಿದಕೂ, ಗೆದ್ದು ಬೀಗಿದಕ್ಕೂ… ಕರಗಿ ಹರಿದದಕೂ, ಸುಟ್ಟು ಉರಿದದಕೂ.. ಸೊರಗಿದಕೂ…. ಮೆರೆದಿದಕೂ…. ಇದ್ದೇ ಇದೆ ಎಲ್ಲದಕೂ...ಜಾಗ.. ತುಳಿಯದೆ ಬಿಡುವರೆ.. ಬೆಳೆದು ನಿಂತು ಒಣಗುವುದರೊಳಗಿನವರೆಗಷ್ಟೇ ಬದುಕು. ತುಳಿವುದೇತಕೆ ಇತರರ, ತರಗೆಲೆ ಜನುಮ ನಿನದು. ನೀ ಬಿದ್ದಾಗ ತುಳಿಯದೇ ನಡೆವರೇ ನಿನ್ನನು? ~ ಕುಮಾರ್ ಬಿ ಬಾಗೀವಾಳ್

ನೋವೆಲ್ಲಿಯೂ ತಾ ತೋರದ ದೈವ…. A poem on mother by Kumar B Bagival

Image
ನೋವೆಲ್ಲಿಯೂ ತಾ ತೋರದ ದೈವ… . ಕಲ್ಲೊಂದಿದೆ ಕಣ್ಣೆದುರಿಗೆ ಕಲೆಯಾಗಿ, ಕಡೆವಾಗಿನ ನೋವೆಲ್ಲಿಯೂ ತಾ ತೋರದೇ. ಮರವೊಂದಿದೆ ಮನದೆದುರಿಗೆ ಸುಗಂಧವಾಗಿ ತೇಯುವಾಗಿನ ನೋವೆಲ್ಲಿಯೂ ತಾ ತೋರದೆ. ಕಬ್ಬೊಂದಿದೆ ಕಣ್ಣೆದುರಿಗೆ ಸಿಹಿಯಾಗಿ, ಅರೆವಾಗಿನ ನೋವೆಲ್ಲಿಯೂ ತಾ ತೋರದೆ. ಬತ್ತಿಯೊಂದಿದೆ ಕಣ್ಣೆದುರಿಗೆ ಬೆಳಕಾಗಿ ಉರಿವಾಗಿನ ನೋವೆಲ್ಲಿಯೂ ತಾ ತೋರದೆ. ಮರವೊಂದಿದೆ ಕಣ್ಣೆದುರಿಗೆ ನೆಳಲಾಗಿ, ಉರಿಬಿಸಿಲಿನ ನೋವೆಲ್ಲಿಯೂ ತಾ ತೋರದೆ. ಧರೆಯೊಂದಿದೆ ಕಣ್ಣೆದುರಿಗೆ ವರವಾಗಿ, ನೀನೀಡುವ ನೋವೆಲ್ಲಿಯೂ ತಾ ತೋರದೆ. ಮನವೊಂದಿದೆ ಕಣ್ಣೆದುರಿಗೆ ದೈವವಾಗಿ ತಾ ಹೆತ್ತು ಹೊತ್ತು ಸಲುಹಿದ ನೋವೆಲ್ಲಿಯೂ ತಾ ತೋರದೆ. ಬಯಸಿದೆ ನಿನ್ನ ಸುಖವನೆ ಅನುದಿನವು ತಾ ಮರೆಯದೆ . ರಚನೆ: ಕುಮಾರ್ ಬಿ ಬಾಗೀವಾಳ್.

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ಅಕ್ಕಮಹಾದೇವಿಯವರ ಆಯ್ದ ವಚನಗಳು.                          ೧ ಅಂಗ ಕ್ರಿಯಾಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು.  ಮನ ಅರಿವ ಬೆರಸಿ, ಜಂಗಮ ಸೇವೆಯ ಮಾಡಿ,        ಮನಜಂಗಮಲಿಂಗದೊಳಗಾಯಿತ್ತು.    ಭಾವ ಗುರುಲಿಂಗದೊಳಗೆ ಬೆರಸಿ, ಮಹಾಪ್ರಸಾದವ ಭೋಗಿಸಿ, ಭಾವ ಗುರುಲಿಂಗದೊಳಗಾಯಿತ್ತು. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಒಲುಮೆಯಿಂದ ಸಂದಳಿದು ಸ್ವಯಲಿಂಗಿಯಾದೆನಯ್ಯಾ ಪ್ರಭುವೆ.  **************************************************************                       ೨ ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು.  ಮನ, ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು.  ಭಾವ, ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಲಿಂಗವಾಯಿತ್ತು.  **************************************************************         ...