Posts

ಜಂಗಮನ ಪರದೆಯ ಮೇಲೆ... Jangamna paradeya mele a poem by KUMAR B BAGIVAL

  ಜಂಗಮನ ಪರದೆಯ ಮೇಲೆ... ಬರೆದ ಅದೆಷ್ಟೋ ಹಾಳೆಗಳ ರಾಶಿ ಹರಿದ ಸ್ಥಿತಿಯಲ್ಲಿವೆ, ಹರಿಯದೇ ನಿಂತ ನೀರಿನ ಹಾಗೆ ನೊರೆ ಭರಿತ ಕೊಳೆತು ನಾರಿ. ಬರೆದಾಗಲೇ ಸರಿಪಡಿಸಿ  ಪ್ರಕಟಿಸಿದ್ದರೆ ಸಂಕಲನವೋ, ಗ್ರಂಥವೋ  ಆಗುತ್ತಿದ್ದವೇನೋ ! ಹರಡಿ ಹಳದಿಗಟ್ಟಿವೆ  ಉಸಿರಾಡಲೂ ಅವಕಾಶವಿಲ್ಲದೆ! ಇಂಗಿಹೋಗಿವೆ ಅಕ್ಷರಗಳು ಬರದ ನಾಡಿನ ರೈತನ ಕಂಗಳಂತೆ! ಬರ ಬಂದು ಬಿರುಕುಬಿಟ್ಟ ಕೆರೆಯೊಡಲಂತೆ ಬಾಯ್ಬಿಟ್ಟಿವೆ ಅಲ್ಲಲ್ಲಿ.! ಸಾಕ್ಷಿಯಾಗಿವೆ ಸೊಳ್ಳೆ, ನೊಣ, ಜಿರಳೆಗಳ ಸಂತಾನೋತ್ಪತ್ತಿಗೆ, ಹೆರಿಗೆ ಆಸ್ಪತ್ರೆಯ ಮುಂದಿನ ಗರ್ಭಿಣಿಯಂತೆ ಸಾಲಾಗಿವೆ ಜಿರಳೆಗಳು ಅಲ್ಲಲ್ಲಿ ಜಿರಳೆ ಮೊಟ್ಟೆಗಳ ಸಾಲು ! ಬರೆವ ಹುಚ್ಚಿಗೆ ಬರೆದರೆ ಹೀಗೇ ಆಗುವುದೇನೋ? ಓದಿಸಿಕೊಳ್ಳುವ ಗಟ್ಟಿತನವಿಲ್ಲದಿದ್ದರೆ, ಸಿದ್ದವಿಲ್ಲದಿದ್ದರೆ ಓದುವ ಮನಗಳು. ಜಂಗಮನ ಪರದೆಯೊಂದು ಸಿಕ್ಕಿದೆ  ಹಾಳೆಯ ಬದಲು. ಬರೆದಿರಿವೆ ಹಾಳೆಗಳ ಅಕ್ಷರಗಳನು  ಪರದೆಯ ಮೇಲೆ . ಒಂದಷ್ಟು ಸಮಾದಾನವಿದೆ  ಓದುವವರಿರುವರಿಲ್ಲಿ ಚೂರುಪಾರು. ರಚನೆ : ಕುಮಾರ್ ಬಿ ಬಾಗೀವಾಳ್.

ಕೆಳಗಿಳಿದ ಯುದ್ದ ನಳಿಗೆ !

  ಕೆಳಗಿಳಿದ ಯುದ್ದ ನಳಿಗೆ ! ಯಾರ ಹೇರಿಕೆಯೋ ನೆರೆ ಹೊರಟಿದೆ ಶೂರ ಸೈನಿಕರ ದಂಡು, ಮೆರೆದಿವೆ ದೊರೆಯಾದೇಶದ ಗುಂಡುಗಳು ವೈರಿದೇಶದ ಧರೆಯ ರಕ್ತವನುಂಡು, ಕರಗಿವೆ ಬಹುಮಹಡಿಗಳು,ಕೊರಗಿವೆ ಬಾನಾಡಿಗಳು ಸರಿದಿವೆ ಹಿಂದೆ ಬಲತುಂಬುವ ನೆಲಗಳು , ಬರೆದಿವೆ ರಕ್ತಸಿಕ್ತ ಪುಟಗಳು, ಕಮರಿವೆ ಕನಸುಗಳು, ಸೊರಗಿವೆ ಜೀವಗಳು ತಮ್ಮವರ ಕಳೆದುಕೊಂಡು, ಭಕ್ಷಕರೆದುರಿಗೆ ನಿಲ್ಲಲಣಿಯಾಗಿವೆ ದೇಶರಕ್ಷಕರ ದಂಡು ಅಬಲೆ ನಾನಲ್ಲ ಸಬಲೆ ನಾ ಪ್ರಶ್ನಿಸುವೆ ದಾಳಿಯನು ಎನ್ನುತ್ತಾ,  ಎದುರು ನಿಂತ ಸೈನಿಕನ ಬಂದೂಕಿನನಳಿಗೆಗೆ ,  ಎದುರು ನಿಂತ ಬಾಲಕಿ ಎದುರು ಬಂದೂಕಿಗೂ ಗೊಂದಲ ತನ್ನ ಕೆಲಸದ ಬಗ್ಗೆ ಕೊಲ್ಲುವುದು ನನ್ನ ಕೆಲಸವಾದರೂ ಕೊಲ್ಲಲಾಗುತಿಲ್ಲ ನಿಲ್ಲಲಾರೆ ಬಾಲಕಿ ಎದುರು ನನ್ನದೇಕೆ ನಿರುತ್ತರ ಎಂದು. ಸೈನಿಕನ ಕೈ ಸೋತಿವೆ  ಮಾನವೀಯತೆಯೆದುರು, ಬಂದೂಕಿನ ನಳಿಗೆಯ ಬಾಯಿ ಮುಚ್ಚಿದೆ ಬಾಲಕಿಯ ದಿಟ್ಟತನದೆದುರು.    ಕೊಳವೆಯೊಳಡಗಿದ ಗುಂಡಿನ ಸದ್ದಡಗಿದೆ ಮುದ್ದಾದ ಭವಿತದೆದುರು. ಬಾಲಕಿಯ ಮೌನಕೆ ಭೋರ್ಗರೆವ  ಕ್ಷಿಪಣಿ, ಯುದ್ದದ ಹಕ್ಕಿಗಳ ಹಾರಾಟವೂ ಸಹಕರಿಸುವ ಸಂದೇಶವೊಂದು ಸದ್ದಿಲ್ಲದೆ ಸಾರಿದೆ ಆಗಸದಿಂದ ಸಾಗರದಂಚಿಗೂ. ಕಲ್ಲೆದೆಯ ಸೈನಿಕನೆದೆಯಲ್ಲಿ  ಹೂ ಹರಳಿದಂತಾ ಅನುಭವ ರುಂಡ ಚಂಡಾಡುವ ಹಠವಿಲ್ಲಿ ಕಂಡೂ ಕಾಣದಂತೆ ಮಟಮಾಯ, ಬದುಕು ಕಟ್ಟಿಕೊಳಲು ಬಂದ ನಾನು ಬದುಕ ಕಳಚಲು ಗುಂಡು ಸಿಡಿಸಬೇಕೆ? ಸಿಡಿದಿವೆ ನೂರಾರು ಗುಂಡುಗಳು ಸೈನಿಕ...

ಸಮಾಂತರ ಶ್ರೇಢಿಗಳು Arithmetic Progression

  ಸಮಾಂತರ ಶ್ರೇಢಿಗಳು ಒಂದು ಶ್ರೇಢಿಯ ಅನುಕ್ರಮ ಪದಗಳ ನಡುವಿನ ವ್ಯತ್ಯಾಸ ಒಂದೇ ಆಗಿದ್ದರೆ ಆ ಶ್ರೇಢಿಯನ್ನು ಸಮಾಂತರ ಶ್ರೇಢಿ ಎನ್ನುತ್ತಾರೆ. ಉದಾ : 2,4,6,8,10.... ಇಲ್ಲಿ 2&4 ರ ವ್ಯತ್ಯಾಸ 2        6&4 ರ ವ್ಯತ್ಯಾಸ 2        8&6 ರ ವ್ಯತ್ಯಾಸ 2 ಹೀಗೆ ವ್ಯತ್ಯಾಸ ಸಮವಾಗಿರುತ್ತದೆ ಆದ್ದರಿಂದ ಈ ವ್ಯತ್ಯಾಸವನ್ನು ಸಾಮಾನ್ಯ ವ್ಯತ್ಯಾಸ ಎನ್ನುತ್ತೇವೆ. ಸಮಾಂತರ ಶ್ರೇಢಿ 2, 4,6,8,10.... ಇಲ್ಲಿ  2 ಮೊದಲಪದವಾಗಿದ್ದು ಸಾಮಾನ್ಯ ವ್ಯತ್ಯಾಸ 2 ಆಗಿದೆ‌. ಸಮಾಂತರ ಶ್ರೇಢಿಯ ಸಾಮಾನ್ಯ ಪದವನ್ನು ಕಂಡುಹಿಡಿಯುವ ಸೂತ್ರ  an= a+(n-1)d ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ  d = an+1 - an ಸಮಾಂತರ ಶ್ರೇಢಿಯ nನೇ ಪದಗಳವರೆಗಿನ ಮೊತ್ತ ಕಂಡುಹಿಡಿಯುವ ಸೂತ್ರ  Sn=n/2[2a+(n-1)d or Sn =n/2[a+an]  ಸಮಾಂತರ ಶ್ರೇಢಿಯ ಸಾಮಾನ್ಯ ರೂಪ   a, a+d, a+2d, a+3d,.....a+(n-1)d. ಸರಳ ಸಮಸ್ಯೆಗಳು :  1) 2,5,8,11....ಈ ಸಮಾಂತರ ಶ್ರೇಢಿಯ 12 ನೇ ಪದ ಕಂಡುಹಿಡಿಯಿರಿ. ಪರಿಹಾರ :  ಶ್ರೇಢಿ 2,5,8,11... ಇಲ್ಲಿ                 a = 2    d=3    n= 12                an =...

ಹನಿಗವನಗಳು

 ನೇಸರ ನಾಳೆ ನೀನೇ ಬರಬೇಕು ನೇಸರ ಸ್ವಾಗತಕೆ, ದಿವ್ಯತೆಗೆ ಮರಳಿ  ಇರಳಲಿ ಕಳೆದ ಭವ್ಯತೆಯ ತೆರೆದಿಡಲು. ಭೂಮಿ ಹೊದ್ದ ಹಸಿರ ತೋರಲು ಹಕ್ಕಿ ಕೊರೊಳಲು ಗಾನ ಉಕ್ಕಲು _ಕುಮಾರ್ ಬಿ ಬಾಗೀವಾಳ್. ಜೂಟಾಟ. ದಿನವೂ ನಡೆದಿದೆ ಸೂರ್ಯ ಚಂದ್ರರ ಜೂಟಾಟ ಹಾಗಾಗಿಯೇ ಬೆಳಗು ಕತ್ತಲೆಯ ನೆರಳಾಟ. - ಕುಮಾರ್ ಬಿ ಬಾಗೀವಾಳ್ ಹೊಡೆದವರಾರು ಚಂದಿರನ ಚೆಲ್ಲಿದೆ ಬೆಳಕು ಅಂಗಳ ತುಂಬ ಹಾಲಾಗಿ,  ಕರೆದವರ್ಯಾರೋ ಹಾಲನು ಇಲ್ಲಿ ಕೇಳಿದ ಪುಟ್ಟ ಪ್ರಶ್ನೆಯ ಸಾಲಾಗಿ. ಪೂರ್ಣ ಚಂದಿರನ ಬೀಳಿಸಿ  ಹೊಡೆದವರ್ಯಾರೋ ಹೋಳಾಗಿ. _ ಕುಮಾರ್ ಬಿ ಬಾಗೀವಾಳ್ ಜಾರಿದ ಸೂರ್ಯ. ಗಿರಿ ತುದಿಯಲಿ ಮೂಡಿದ ಸೂರ್ಯ ಹಾರಿದ ಬಾನಿಗೆ ಪಟವಾಗಿ ಸೂತ್ರವ ಎಳೆದ ಮರುಕ್ಷಣವೇ ಮುಳುಗಿದ ಕಡಲಲಿ  ಸ್ಪುಟವಾಗಿ. _ ಕುಮಾರ್ ಬಿ ಬಾಗೀವಾಳ್. ಬಾರೋ ಚಂದಿರ ಬಾರೋ ಚಂದಿರ  ಬಾರೋ ಚಂದಿರ ತೋರೋ ಸುಂದರ ಮೊಗವನು ಈಗಲೆ, ಕಾರೋ ಬಿಸಿಲಲಿ ಸೊರಗಿರೋ ಮೋರೆಗೆ ತಂಪನು ತಾರೋ ಸಲುವಾಗಿ.

ತೋರು ನೀ ಮುಖವನ್ನ ನನ್ನ ಕಂದಾ...Thoru nee mukhavanna nanna kanda... Lori writing by Kumar B Bagival

  ತೋರು ನೀ ಮುಖವನ್ನ ನನ್ನ ಕಂದಾ... ರಚನೆ : ಕುಮಾರ್ ಬಿ ಬಾಗೀವಾಳ್ ತಾರೆಗಳ ಗೊಂಚಲು ತೇರೇರಿ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ, ತಾರೆಗಳನು ನೋಡುವೆನು ನಿನ್ನ ಕಂಗಳಲಿ ನನ್ನ ಮಗುವೆ, ಚಂದಿರನ ಮುಂದಿಟ್ಟು ತೋರುವೆ ನಿನ್ನನವಕೆ. ಹಕ್ಕಿಗಳ ಹಿಂಡೊಂದು ಹಾರುತಾ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ ಚಿಲಿಪಿಲಿಯ ಕೇಳುವೆನು ನಿನ್ನ ಮಾತಲಿ ನನ್ನ ಮಗುವೆ, ಚಟಪಟ ಮಾತುಗಳ ಕೇಳಿಸುವೆನು ಅವಕೆ. ಸುಯ್ಯನೆ ಸುಳಿಯುತ್ತ ತಣ್ಣನೆಯ ತಂಗಾಳಿ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ ಮುಂಗುರುಳ ಮುದದಾಟ ನಿನ್ನ ಮೊಗದ ಮೇಲೇರಿ  ನನ್ನ ಮಗುವೆ, ಮುಂಗುರುಳಾಟವನು ತೋರುವೆನವಕೆ. ಎಳೆ ಜೋಳದಾ ತೆನೆಗಳು ಹರಿಯಾಗಿ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ ಹಾಲು ಹಲ್ಲುಗಳ ತೆನೆಯ ನೋಡುವೆನು ನೀ ನಗುವಾಗ ನನ್ನ ಮಗುವೆ, ಸಾಲು ಹಾಲು ಹಲ್ಗಳ ಪಂಕ್ತಿಯನು ತೋರುವೆನವಕೆ. ಸುಕಾಲ ಸಾಲುಗಳು ಸಾಲಾಗಿ ನಿಂದಿವೆ ತೋರು ನೀ ಮುಖವನ್ನು ನನ್ನ ಕಂದಾ ಸಾಧನೆಯ ಹಾದಿಯ ಆದಿಯನು ಕಾಣುವೆನು ನನ್ನ ಮಗುವೆ, ಸೋಲಿರದ ಹಾದಿಯ ಗೆಲುವನ್ನು ತೋರುವೆನವಕೆ.

ಹಚ್ಚಿಬಿಡು ಹಣತೆಯನೊಮ್ಮೆ ಬಯಲಲಿ... Lighten a lamp a poem with deepavali wishes by Kumar B Bagival

Image
ಹಚ್ಚಿಬಿಡು ಹಣತೆಯನೊಮ್ಮೆ ಬಯಲಲಿ... ಎಲ್ಲವೂ ಒಂದೇ ಎಲ್ಲೂ ಇಲ್ಲ ಭಿನ್ನತೆ ಕತ್ತಲೊಳಗೆ, ಹಾಲಿರಲಿ, ಹಾಲಾಹಲವಿರಲಿ. ಕಲ್ಲಿರಲಿ, ಕಡಲಿರಲಿ. ಮುಳ್ಳಿರಲಿ, ಹೂವಿರಲಿ. ಶ್ವೇತ ಶ್ಯಾಮವಿರಲಿ, ವರ್ಣ ರಹಿತ ಗುರುತಿಗೆ ಸ್ವರ್ಣ ರಹಿತ ದೇಹಕೆ ಅಳುವಿರಲಿ, ನಗುವಿರಲಿ. ವಸ್ತ್ರವಿರಲಿ, ವಿವಸ್ತ್ರವಿರಲಿ. ಗೊತ್ತು ಗುರಿಯಿಲ್ಲ ಯಲ್ಲೆಗೆ.. ಏಕತಾನತೆ ನೀರಸ… ಬದುಕೆಂದರೆ ಇದೇನಾ…. ವರ್ಣ ಬೇಡವೇ ಗುರುತಿಗೆ? ಬೇಧ ಬೇಡವೇ ಹಾಲುಹಾಲಾಹಲಕೆ? ದಾರಿಯ ಸರಿಬೆಸ ಬೇಡವೇ ಸಾಗಲು? ಭಾವ ಬೇಡವೇ ಆನನದಲಿ ಅನುಭವಕೆ? ವಸ್ತ್ರ ವಿವಸ್ತ್ರಗಳ ಅರ್ಥ ಬೇಡವೇ ಮತಿಗೆ? ಯಲ್ಲೆ ಬೇಡವೇ ನಿಗದಿಗೆ? ಎಲ್ಲವೂ ಬಲ್ಲವುಗಳಾಗಬೇಡವೇ ? ಕಳೆಯಬೇಡವೇ ಕೊಳೆಯ ಬದುಕ ಬಯಲಲಿ? ಹಾಗಿದ್ದರೊಮ್ಮೆ ಹಚ್ಚಿಬಿಡು ಹಣತೆಯನು ಬದುಕ ಬಯಲಲ್ಲೊಮ್ಮೆ,ಜಗದ ಜಗುಲಿಯಲೊಮ್ಮೆ ಅಂಧಕಾರ ನೀಗಲಿ ಬೆಳಕಲ್ಲಿ ಬೀಗಲಿ.‌. ರಚನೆ : ಕುಮಾರ್ ಬಿ ಬಾಗೀವಾಳ್ .

ಅಲ್ಲಮ ಪ್ರಭುಗಳ ದೃಷ್ಟಿಯಲ್ಲಿ ಜಗಜ್ಯೋತಿ ಬಸವಣ್ಣನವರು.. Jagajyothi Basaveshwar on the view of Allama Prabhu Great Vachanakaras

ಅಲ್ಲಮ ಪ್ರಭುಗಳ ದೃಷ್ಟಿಯಲ್ಲಿ ಜಗಜ್ಯೋತಿ ಬಸವಣ್ಣನವರು.. ಅಂಗದಲ್ಲಿ ಆಚಾರವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ಆಚಾರದಲ್ಲಿ ಪ್ರಾಣವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ಪ್ರಾಣದಲ್ಲಿ ಲಿಂಗವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ಲಿಂಗದಲ್ಲಿ ಜಂಗಮವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ಜಂಗಮದಲ್ಲಿ ಪ್ರಸಾದವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ಪ್ರಸಾದದಲ್ಲಿ ನಿತ್ಯವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ನಿತ್ಯದಲ್ಲಿ ದಾಸೋಹವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ದಾಸೋಹದಲ್ಲಿ ತನ್ನ ಮರೆದು, ನಿಶ್ಚಿಂತನಿವಾಸಿಯಾಗಿ ಐದಾನೆ ಗುಹೇಶ್ವರಲಿಂಗದಲ್ಲಿ. ಸಂಗನಬಸವಣ್ಣನ ಶ್ರೀಪಾದಕ್ಕೆ ಶರಣೆಂದು ಧನ್ಯರಾಗಬೇಕು ನಡೆಯಾ- ಸಿದ್ಧರಾಮಯ್ಯಾ ಅಂಗನೆಯ ಮೊಲೆ ಲಿಂಗವೆ ? ಬಳ್ಳ ಲಿಂಗವೆ ? ಕಿತ್ತು ಬಹ ಸಾಣೆ ಲಿಂಗವೆ ? ಆಡಿನ ಹಿಕ್ಕಿ ಲಿಂಗವೆ ? ಮೆಚ್ಚುವರೆ ಪ್ರಮಥರು ? ಮೆಚ್ಚುವರೆ ಪುರಾತನರು, ನಿಮ್ಮ ಭಕ್ತರು ? ಭಾವಭ್ರಮೆಯಳಿದು, ಗುಹೇಶ್ವರಾ ನಿಮ್ಮಲ್ಲಿ ಅನಾದಿಸಂಸಿದ್ಧವಾದ ಜಂಗಮವನರಿದಾತ ಬಸವಣ್ಣನೊಬ್ಬನೆ. ಅಂಗವಿಡಿದಂಗಿಯನೇನೆಂಬೆ ? ಆರನೊಳಕೊಂಡ ಅನುಪಮನು ನೋಡಾ ! ಮೂರರ ಹೊಲಿಗೆಯ ಬಿಚ್ಚಿ, ಎಂಟಾತ್ಮ ಹರಿಗಳ ತನ್ನಿಚ್ಛೆಯೊಳ್ ನಿಲಿಸಿದ ನಿಜಸುಖಿಯು ನೋಡಾ. ತತ್ತ್ವ ಮೂವತ್ತಾರ ಮೀರಿ, ಅತ್ತತ್ತವೆ ತೋರ್ಪ ಆಗಮ್ಯನು ನೋಡಾ ! ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ ಪರಮಪ್ರಸಾದಿ ಮರುಳಶಂಕರದೇವರ ನಿಲವ ಬಸವಣ್ಣನಿಂದ ಕಂಡೆ ನೋಡಾ ಸಿ...