Posts

Poem: Yugada aadi , By : Kumar B Bagival ,

ಯುಗದ ಆದಿ... ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಜಗ ಜಗಕೆಲ್ಲ ಹಸಿರು ಹಸಿರ ಚಿಗುರ ಹಾದಿ. ಬೇವಿಗೂ,ಬೆಲ್ಲಕೂ ಸರಿ ಸರಿದೂಗಿಸೋ ಯಾದಿ ಯುಗಾದಿ ಇದು ಯುಗಾದಿ. ತೊಟ್ಟು ಕಳಚುವ ಮುನ್ನ ಉದುರುವೆಲೆ ಜೀವವನಲ್ಲೇ ಬಿಟ್ಟು ಚಿಗುರೆಲೆಗೆ ತುಂಬೋ ಇಂಬಿದು ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಮಾವಿನ ಚಿಗುರ ಹೊಗರ  ತಿಂದರೂ ಸವಿನುಲಿವ, ನಲಿವನೊತ್ತು ಧರೆಗೆ ತರುವ ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಹಳೆದಾದ ನೆಲದ ಮನದಲೊಂದಿನಿತು ಹೊಸ ಬೆಳೆ ಬೆಳೆವ ನಿಲುವುಗಳನು ಬಿತ್ತಿ ಹೊತ್ತಿ ಉರಿಯುವ ಬೆಳಕು ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಭಾವ ಬಾನಲಿ ಮಿನುಗೋ  ಚುಕ್ಕಿ ಚಂದ್ರಮರ ಮುಂದಾಳುತನ ಮಿಕ್ಕಿದಷ್ಟು ಎಕ್ಕಿ ತೆಗೆದ ಸಂತಸ ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಕಳೆದಿದ್ದೆಷ್ಟೋ ಕಳಂಕಗಳ ಕೊಳವೇ ಭಾಗ್ಯೋದಯ ಇಲ್ಲಿ ಕೊಳಗದಷ್ಟು. ವೃತ್ತವಿದು ಆವೃತ್ತಿಯು, ಬಿತ್ತಿದ್ದು ಬೆಳೆದು  ಬೀಜವೊಡೆದು ಮತ್ತೆ ಸಿಧ್ಧ ಮೊಳೆಕೆಗೆ. ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ನೆಲಕುರುಳಿದ ಮಳೆಯುದುರ ಆವಿ ತೆರನೆ ಮೆರೆದು ಮೇಲೇರಿ ತಂಪಿನಿತು ಸುರಿದ ತೆರದೀ ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಯುಗ ಜಗಕೂ ತಿಳಿಯ ಕೆಳಗಿಳಿದ ತಿರುಗೋ ಚಕ್ರವೊಂದು ಮೇಲೆ ಬರುವ ಸೂಚಿ ಕಾಲವಿದು ಪಕ್ವವಿದೆ ಮುನ್ನ...

Poem ; Haadi ( for winning mind) ,By Kumar B Bagival.

Image

Poem DHEESHAKTHI AMBEDKAR BY : Kumar B Bagival.

ಧೀಶಕ್ತಿ ಅಂಬೇಡ್ಕರ ನಿಂತಿಲ್ಲವೋ ಅವು ನಡೆದಿವೆ ಅಡಿಗಡಿಗೂ ಬಿರಿದು ಕಾಡುತ್ತಿವೆ,ಹಾದಿಬೀದಿಯಲಿ ಬೊಳ್ಳು ಹಾಕುತ್ತಿವೆ  ಗುಳ್ಳೆನರಿಗಳು ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ. ಮೊಡ್ಡಾಗಿವೆ ಮೊನಚು ಸೂಜಿಗಳು ಹೊಲೆಯಲಾಗದೆ ಬದುಕ ಚಾದರವ ಮೈಯ್ಯೊಡ್ಡಿ ನಿಂತಿವೆ ಬಿಸಿಲ್ಮಳೆಚಳಿಗೆ ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ. ಸಿಹಿಯಾಗಲೊರಟ ಊಟದಲೂ ನಂಜನುಣ್ಣುತಿವೆ ಬದುಕಲೋಸುಗ ಮಸಕಾಗಿವೆ ಹೊಸಕಿ ಹಾಕದೆ ಹುಳುವ ನೀನಿಲ್ಲದೆ ನಮ್ಮೊಳಗೆ ,ಅವತರಿಸು ಮತ್ತೊಮ್ಮೆ. ಸಾಕಿಡಿಸಿದ ಹಸಿ ಹುಸಿಭರವಸೆಗಳು ಮಾರುತ್ತಿವೆ ಹಸಿಮಾಂಸದ ಮುದ್ದೆಗಳ ಕಾಳಸಂತೆಯ  ಕದ್ದ ಮಾಲುಗಳಂತೆ ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ. ಅರೆಬೆಂದ ಹಸಿ ಉರುವಲ ಉರಿ ಉಗುಳುತ್ತಿದೆ ಕಾರೊಗೆಯ ಬೂದಿ ಸುರಿದಂತೆ ಬಾನಿಂದ ಆಮ್ಲಮಳೆ ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ. ನೀನಿದ್ದರೆ ನಮ್ಮೊಳಗೆ ಹೆದ್ದಾರಿಯೇ ಆಗುವೆ ಕಾಲುದಾರಿಯ ಬದಲಾಗಿ ಕೊಂಡೊಯ್ಯುವೆ ನಮ್ಮವರ ಗುರಿ ಮುಟ್ಟುವರೆಗೆ ನೀನಿಲ್ಲಿಯೆ ಅವತರಿಸು ,ಮತ್ತೊಮ್ಮೆ ನಮ್ಮೊಳಗೆ. ನೀನಿದ್ದರೆ ನಮ್ಮೊಳಗೆ ಜಗಕೆ ಕಣ್ಣೇ  ಆಗುವೆ ಹುಣ್ಣಾಗುವ ಬದಲಾಗಿ ಕರೆದೊಯ್ಯುವೆ ನಮ್ಮವರ ಬೆಳಕಿನೆಡೆಗೆ ನೀನಿಲ್ಲಿಯೆ ಅವತರಿಸು, ಮತ್ತೊಮ್ಮೆ ನಮ್ಮೊಳಗೆ. ವಿಷ್ಣುವಿನಿಗ್ಷಟೇ ಏಕೆ ದಶಾವತಾರ ನೀನೂ ತಳೆ ಮತ್ತೊಂದು ಅವತಾರ ...

NAYIKODE poem, by Kumar B Bagival

Image
ನಾಯಿಕೊಡೆ ನಾಯಿಕೊಡೆಗಳಾಗಿವೆ ಬದುಕು, ಹುಟ್ಟಿದೆಲ್ಲವೂ ಬದುಕುಳಿಯಲಿಲ್ಲ, ಸುಟ್ಟಿವೆ ನೆಟ್ಟ ಸಸಿಗಳೆಲ್ಲವು, ಬಟಾಬಯಲಾಗಿವೆ ವನಮನಗಳು, ಗಿಡವಾಗಲಿಲ್ಲ, ಮರಮುಟ್ಟಾಗಲಿಲ್ಲ, ಹೂ ,ಕಾಯಿ, ಹಣ್ಣು ,ಮೊದಲೇ ಇಲ್ಲ ಹುಟ್ಟಿದ್ದೇ ದೊಡ್ಡದಲ್ಲ ಈ ಧರೆಯೊಳಗೆ ಕರಗಿ ಕೊರಗಿ ಕೊನೆಯುಸಿರೆಳೆದವರ ಕಳೆಬರದ ಮೇಲಿನ ಬದುಕು. ಸಾಮೂಹಿಕ ಚರ್ಚೆಯಿದು, ಬಲಿವ ಮುನ್ನವೇ ಸೂತಕದ ವಾಸನೆ, ಯಾವುದೋ ಸಾಂಕ್ರಾಮಿಕ ರೋಗ ಬಂದು ಮುಗಿಯಿತೇ ಎನ್ನುವಂತೂ ಇಲ್ಲ. ಮರುಗಟ್ಟುವ ಮರುಕ ಮೊದಲಿಲ್ಲ. ಯಾತಕ್ಕಾಗಿ ಹುಟ್ಟಿದವೋ? ಗೊತ್ತುಗುರಿಯಿಲ್ಲ. ಹೊತ್ತುರಿವ ಬಯಕೆಗಳಿಗೆ ದಹ್ಯವೂ ಅಲ್ಲ. ಧಮನವಾಗಲೆಂದೇ ಬಂದಂತಿದೆ ಭುವಿಗೆ, ಪುನರ್ ಹುಟ್ಟಿಗೂ ಕಳೆಬರದ ನಂಟು ಅಂಟಿದ ಕಳಂಕ, ಪೀಳಿಗೆಯ ಊಳಿಗದ  ಹಸನಾದ ಹಸುಗೂಸು ಎನ್ನುವಂತಿಲ್ಲ. ಇರುಳ ಕನಸು ಇರುಳಲೇ ಕರಗಿದಂತೆ ಮರುದಿನದ ಬದುಕು ಅರಳಲೇ ಇಲ್ಲ. ಕೊನೆಯುಸಿರೂ ಅದೇ ಕಳೆಬರದ ಮೇಲೆ. ನಾಯಿಕೊಡೆಗಳಗಿವೆ ಬದುಕು ಹುಟ್ಟದೆಲ್ಲವೂ ಬದುಕುಳಿಯಲಿಲ್ಲ. ರಚನೆ: ಕುಮಾರ್. ಬಿ.ಬಾಗೀವಾಳ್.

Poem MUNGARINA BAYAKE(about coorg disaster) from Kumar B Bagival

Image
ಮುಂಗಾರಿನ ಬಯಕೆ. ಮುಂಗಾರಿನ ಹೊಸಲಲಿ  ಬಂಗಾರದೆದೆಯ ಭಾವನಾಭಾವವ ತಣಿಸಲೆಂದೇ ಬಾರೆಯೇನು? ಬರದಿ ಬಳಲಿರುವೆ ನಾನು. ಬೆಂದುಸಿರಿಗೆ ಮಿಂದುಸಿರ ಬೆರೆಸು ಬೆರಗಂಬತೆ ಚಿಗುರಿ ಬರುವೆ ನಾನು. ಬಾ… ನಲಿವೆ..ಬಾ… ಕರೆದ ಮೊರತ ಕರಗುವ ಮೊದಲು ಸುರಿದ ಭರತ ಕುಣಿಯಲಿ, ಮರೆತು ಕುಳಿತ ಬೀಜವೊಂದು ಮೊಳೆಯಲಿ ಸೂರು ಕಂಡ ಜಗವು ನಿನಗೆ ಬಾಗಿ ನಮಿಸಲಿ. ಬಾ...ನಲಿವೆ...ಬಾ… ಬರಲೇಳಿದೊಡನೆ ಬಂದ ನಿನಗೆ ಸೆರಗನೊಡ್ಡಿ ಬೇಡುವೆ ನಾನು ಶಾಂತಿಯ ನಡೆಯನಿಡು ನೀನು, ಅಡಿಗಡಿಗೂ ಇದೆ ಜೀವರಾಶಿ  ಮುನಿದರೆ ನೀ ಹೆಣದ ರಾಶಿ, ಕಂಡಿಲ್ಲವೆ ನಾ… ನೀ ಬರೆದ ಕೆಟ್ಡ ಸಾಲ ನುಂಗಿದಲ್ಲ ಬದುಕನೆಲ್ಲ ಹಾಗಾಗದಿರಲಿ ಈ ಸಲ. ಮೈಯ್ಯನೆಲ್ಲವ ತುಂಬಿ , ಬರಲಿ ಬಳಿ ಜೇನ ದುಂಬಿ ಹಸಿರ ಬಸಿರ ಹೊರುವ ಆಸೆ,  ಮಾಡದಿರೆನಗೆ ನಿರಾಸೆ…. ಬಾ...ನಲಿವೆ...ಬಾ…. ರಚನೆ: ಕುಮಾರ್. ಬಿ.ಬಾಗೀವಾಳ್.

STORY HOSA CHIGURAGONA By Kumar B Bagival.

Image
ಕಥೆ ಹೇಳುವೆ .. . ಹೊಸ ಚಿಗುರಾಗೋಣ . ವಸಂತಕಾಲದ ಆರಂಭದಲ್ಲೊಂದು ದಿನ ಬೇಗ ಕೆಲಸ ಮುಗಿಸಿ ಮನೆಗೆ  ಬಂದ ಅಪ್ಪ ಮಕ್ಕಳೊಂದಿಗೆ ಮನೆಯ ಪಕ್ಕದಲ್ಲೇ ಇರುವ ಉದ್ಯಾನ ವನಕ್ಕೆ ಸಣ್ಣದೊಂದು ವಾಕ್ ಹೊರಟರು.ಮಕ್ಕಳೆಂದರೆ ಕೇಳಬೇಕೆ ಅವು ಕುತೂಹಲದ ಕಣಜ, ದಾರಿಯುದ್ದಕ್ಕೂ ಪ್ರಶ್ನೆಗಳೇ,ಮಕ್ಕಳ ಪ್ರಶ್ನೆಗಳಿಗೆ, ಮಕ್ಕಳ ಮಟ್ಟಕ್ಕೇ ಇಳಿದು ಉತ್ತರಿಸುತ್ತಾ ಕುತೂಹಲ ತಣಿಸುತ್ತಿದ್ದರು ಅಪ್ಪ. ಉದ್ಯಾನವನದಲ್ಲಿ ಒಂದು ಸುತ್ತು ಸುತ್ತಿ ಪಕ್ಕದಲ್ಲೇ ಇದ್ದ ಸಿಮೆಂಟ್ ಕುರ್ಚಿಯ ಮೇಲೆ ಕುಳಿತರು. ಉದ್ಯಾನವನ ಮರಗಿಡಗಳಿಂದ ತುಂಬಿತ್ತು ತಂಪಾದ ತಂಬೆಲರು, ವಾಕ್ ಮಾಡುವ ಜನರ ಅವಸರದ ನಡಿಗೆ ಅಲ್ಲಿನ ಸಾಮಾನ್ಯ ದೃಶ್ಯ. ಅಲ್ಲೆ ಆಟವಾಡುತ್ತಿದ್ದ ಮಗು ಏನೋ ನೆನಪಿಸಿಕೊಂಡಂತೆ ಓಡಿಬಂದು ಒಂದು ಮರವನ್ನು ತೋರಿಸುತ್ತ ಅಪ್ಪನಿಗೆ ಪ್ರಶ್ನಿಸಿತು.“ಅಪ್ಪ ಅಪ್ಪ ಈ ವಾರದ ಹಿಂದೆ ಅಮ್ಮನೊಂದಿಗೆ ಬಂದಾಗ ಆ ಮರದ ತುಂಬ ಎಲೆಗಳಿದ್ದವು ಈಗ ನೋಡಿದರೆ ಒಂದೂ ಎಲೆಗಳೇ ಇಲ್ಲ ಯಾಕಪ್ಪ ಆ ಮರಕ್ಕೆ ಏನಾದರು ಕಾಯಿಲೆಯೇ?”ಎಂದು ಪ್ರಶ್ನಿಸಿತು. ಉತ್ತರಿಸಲು ಒಂದು ವಾರದ ಸಮಯ ಕೊಡುವಂತೆ ಮಗುವಿನಲ್ಲಿ ಕೇಳಿಕೊಂಡ ಅಪ್ಪ ಮನೆಗೆ ಮಕ್ಕಳೊಂದಿಗೆ ಬಂದರು. ವಾರ ಕಳೆಯಿತು ಮಕ್ಕಳನ್ನು ಅದೇ ಉದ್ಯಾನವನಕ್ಕೆ ಕರೆದುಕೊಂಡು ಬಂದರು. ಮಗುವಿಗೆ ಆ ಮರವನ್ನು ತೋರಿಸುವಂತೆ ಹೇಳುವರು.ಮಗು ಆ ಮರವನ್ನು ಗುರುತಿಸಿ “ ಮರಕ್ಕೆ ಹೊಸ ಎಲೆಗಳು ಬಂದಿವೆ” ಎಂದಿತು. ಈಗ ಅಪ್ಪ ಮಗುವಿನ ಪ್ರಶ್ನೆಗೆ ಉತ್ತರಿ...

Poem: DUDIYUVA KAI NEE MADIYADIRU. (About farmers) BY KUMAR B BAGIVAL

Image
ದುಡಿಯುವ ಕೈ ನೀ ಮಡಿಯದಿರು. ದುಡಿಯುವ ಕೈ ನೀ ಮಡಿಯದಿರು ಸುಡುವ ಕಷ್ಟಗಳೆಷ್ಟೇ ಬರಲಿ ಮಾಡುವ ಕಾಯಕದೊಳಿಷ್ಟವು ಇರಲಿ ಚಿನ್ನಕು ಮಿಗಿಲು ಅನ್ನವನು   ಈ ಜಗಕೆ ನೀನೆ  ಇತ್ತವನು. ಮಸುಕಲಿ ಎದ್ದು,ಹೊಲದಲಿ ಸದ್ದು ಮಾಡುತಲಿರುವ ನಿನ್ನನು ನೋಡಿ ನಾಚುತ ತಾ ನೇಸರ ಮೂಡಿ ತಾ ಕೆನ್ನೆಯ ಕೆಂಪನೆ ಮಾಡಿದನು. ಸುಡು ಬಿಸಿಲಿಗು ಜಗ್ಗದ ನಿನ್ನನು ಮೆಚ್ಚುವ ಗಡಿಯ ಕಾಯ್ವ ಯೋಧನು. ಮಳೆಗೆ ಕೊಡೆ ಹಿಡಿಯದ,ಚಳಿಗೂ ಚಳಿಯಿಡಿಸುವ ಧೃತಿಗೆಡದ ಮೈ ಅದು ಕೈ ಕೆಸರಾದರು ಲೋಕದ ಬಾಯಿಗೆ ಮೊಸರದು ತಾ ಸೋತರೂ ಜಗವ ಗೆಲಿಸುವ ತ್ಯಾಗವು ನೀನಗಲ್ಲದೆ ಮತ್ಯಾರಿಗಿದೆ ಆ ಧೈರ್ಯವು? ಬೆಳೆವುದು ನೂರಾದರೆ ಪಡೆವುದು ಚೂರು ಕೊಳಗಕೂ ಮೀರಿದ ಆಸೆಯಾದರೂ ಬಳಗಕೆಲ್ಲ ಸುರಿದಳೆವ ಒತ್ತಾಸೆಯು ನಿನದು ಬೆನ್ನೆಲುಬು ನೀನಾದರು ಜಗಕೆ ಜಗವೇ ನಿಂತಿದೆ ನಿನ್ನಯ ಬೆನ್ನಿಗೆ. ಉರುಳಿಗೆ ಕೊರಳನೊಡ್ಡದಿರು ಬೆರಳು ಮಾಡದ ಹಾಗೆ ನಿನ್ನೆಡೆಗೆ. ವಿರಮಿಸದಿರು ಬದುಕ  ಮಾಡು  ಹೊನ್ನ ,ಒಮ್ಮೆ ಮಾತ್ರ ಮನುಜ ಜನ್ಮ ನೋಡಲಿ ಎಲ್ಲರೂ ಕೊರಳೆತ್ತಿ ನಿನ್ನ. ರಚನೆ: ಕುಮಾರ್. ಬಿ.ಬಾಗೀವಾಳ್.  ಧೀಶಕ್ತಿ ಅಂಬೇಡ್ಕರ ನಿಂತಿಲ್ಲವೋ ಅವು ನಡೆದಿವೆ ಅಡಿಗಡಿಗೂ ಬಿರಿದು ಕಾಡುತ್ತಿವೆ,ಹಾದಿಬೀದಿಯಲಿ ಬೊಳ್ಳು ಹಾಕುತ್ತಿವೆ  ಗುಳ್ಳೆನರಿಗಳು ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ. ಮೊಡ್...