Poem MUNGARINA BAYAKE(about coorg disaster) from Kumar B Bagival
ಮುಂಗಾರಿನ ಬಯಕೆ.
ಮುಂಗಾರಿನ ಹೊಸಲಲಿ
ಬಂಗಾರದೆದೆಯ ಭಾವನಾಭಾವವ
ತಣಿಸಲೆಂದೇ ಬಾರೆಯೇನು?
ಬರದಿ ಬಳಲಿರುವೆ ನಾನು.
ಬೆಂದುಸಿರಿಗೆ ಮಿಂದುಸಿರ ಬೆರೆಸು
ಬೆರಗಂಬತೆ ಚಿಗುರಿ ಬರುವೆ ನಾನು.
ಬಾ… ನಲಿವೆ..ಬಾ…
ಕರೆದ ಮೊರತ ಕರಗುವ ಮೊದಲು
ಸುರಿದ ಭರತ ಕುಣಿಯಲಿ,
ಮರೆತು ಕುಳಿತ ಬೀಜವೊಂದು ಮೊಳೆಯಲಿ
ಸೂರು ಕಂಡ ಜಗವು ನಿನಗೆ ಬಾಗಿ ನಮಿಸಲಿ.
ಬಾ...ನಲಿವೆ...ಬಾ…
ಬರಲೇಳಿದೊಡನೆ ಬಂದ ನಿನಗೆ
ಸೆರಗನೊಡ್ಡಿ ಬೇಡುವೆ ನಾನು
ಶಾಂತಿಯ ನಡೆಯನಿಡು ನೀನು,
ಅಡಿಗಡಿಗೂ ಇದೆ ಜೀವರಾಶಿ
ಮುನಿದರೆ ನೀ ಹೆಣದ ರಾಶಿ,
ಕಂಡಿಲ್ಲವೆ ನಾ… ನೀ ಬರೆದ ಕೆಟ್ಡ ಸಾಲ
ನುಂಗಿದಲ್ಲ ಬದುಕನೆಲ್ಲ ಹಾಗಾಗದಿರಲಿ ಈ ಸಲ.
ಮೈಯ್ಯನೆಲ್ಲವ ತುಂಬಿ , ಬರಲಿ ಬಳಿ ಜೇನ ದುಂಬಿ
ಹಸಿರ ಬಸಿರ ಹೊರುವ ಆಸೆ,
ಮಾಡದಿರೆನಗೆ ನಿರಾಸೆ….
ಬಾ...ನಲಿವೆ...ಬಾ….
ರಚನೆ: ಕುಮಾರ್. ಬಿ.ಬಾಗೀವಾಳ್.
Comments
Post a Comment