Poem ; Haadi ( for winning mind) ,By Kumar B Bagival.
ಹಾದಿ...
ಜಯದ ಹಾದಿಯಲಿ ಬಿಕ್ಕಳಿಕೆಗಳೇ ಹಲವು
ನೀರ ಕುಡಿದು ಸಿಕ್ಕ ತಡೆಯ ತೊಡೆದು ಹಾಕಿ
ಎಡಬಿಡದೆ ನಡೆ,ನಿನಗೆ ಜಯದ ಬಲವು.
ಸಾಧನೆಯ ದಾರಿಯಲಿ ಸೋತು ಸತ್ತ
ಯತ್ನಗಳೊರಟಿವೆ ಮೆರವಣಿಗೆಯ ಪಥ
ಸೆದೆಬಡಿ ಅವನ ಒಮ್ಮೆ ಗೆಲುವು ನಿನ್ನ ಸುತ್ತ.
ಸಾಕಷ್ಟಿವೆ ಎಡರು ತೊಡರು ಗೆಲುವಿನೋಟದಲ್ಲಿ
ಎಗ್ಗಿಲ್ಲದೆ ನುಗ್ಗುತ್ತವೆ ಭಯದ ಬುಗ್ಗೆಗಳು
ಬಗ್ಗುಬಡಿ ನುಗ್ಗಿ ನಡಿ ಸೇರು ಗುರಿಯ ತಡಿ.
ಸಂಕಟಗಳ ಸಂಪುಟಗಳೆ ಸೊಂಪಾಗಿವೆ ಇಲ್ಲಿ
ಎಂಟೆದೆ ಹಠವ ಮಾಡು ಮೂಲೆಗುಂಪಾಗುತ್ತವೆ ಸೋಲು.
ಜಯ ನಿನ್ನದೆ ಝೇಂಕರಿಸು… ಧರಿಸು ವಿಜಯ ಮಾಲೆ.
ರಚನೆ: ಕುಮಾರ್. ಬಿ. ಬಾಗೀವಾಳ್.
Comments
Post a Comment