Posts

Showing posts from 2020

ಸರಿ ನೀ ಸ್ವಾಗತಿಸ ಬೇಕಿದೆ ನಾಳೆಗಳ…. Get lost I Want to welcome new days.... poem by KUMAR B BAGIVAL

Image
  ಸರಿ ನೀ ಸ್ವಾಗತಿಸ ಬೇಕಿದೆ ನಾಳೆಗಳ…. ಬರಿದೇ ಸಂಖ್ಯೆಯ ನೆಪವಾಗಿ ಬಂದೆ ನೀ ಸರಿಯುವ ಕಾಲ ಬಂದಾಯಿತು ಸರಿ ನೀ ನವ ನಾಳೆಗಳ ಸ್ವಾಗತಿಸುವೆವು ನಾವು ಮರೆತು ವರುಷದುದ್ದಕೂ ಆದ ನೋವು. ದೂಷಿಸಲೂ ಆಗುತಿಲ್ಲ ನಿನ್ನ ನಾವು ಎಲ್ಲೋ ದೂರದಲ್ಲಿದ್ದವರ ಒಗ್ಗೂಡಿಸಿದೆ ಮೆರೆದು ಓಡಾಡಿದವರ ಬಗ್ಗು ಬಡಿದೆ ಸಮಯವೇ ಇಲ್ಲವೆಂದವರಿಗೆ ಸಮಯವ ನೀಡಿದೆ. ಊರ ಮರೆತು ಹೋದವರಿಗೆ ತನ್ನೂರನ್ನೆ ವರವಾಗಿಸಿದೆ ಯಾರೂ ಯಾವುದೂ ನಿನ್ನದಲ್ಲ ನೀ ಒಂಟಿ ಎಂದು ಸಾರಿದೆ ಜೀವನಕ್ಕಿಂತ ಜೀವ ಮುಖ್ಯವೆಂದರುಹಿ ಹೇಳಿದೆ ಆದರೂ ಆರಕ್ಕೇರದ ಮೂರಕ್ಕಿಳಿಯದ ಬದುಕ ನೀಡಿದೆ ಮರೆಯದೇ ನೀ ಕಲಿಸಿದ ಪಾಠವ ಹೆಜ್ಜೆ ಇಡುವೆವು ಹೊಸತೊಂದು ವರುಷಕೆ ಹರುಷದಲಿ ಶುಭವನರಸುವೆವು ನಿನ್ನೊಂದಿಗಾದ ತಪ್ಪುಗಳ ತಿದ್ದಿ ಸರಿಪಡಿಸಿ ನಡೆಯುವೆವು ಉದಯವಾಗಿಸಿ ಹೊಸ ಹೊಂಗಿರಣಗಳ gಬೆಳಕ ಹರಿಸುವವು ಹೊಸ ವರ್ಷದ ಶುಭಾಶಯಗಳೊಂದಿಗೆ   ಅನಕುಮಾರ್, ನಿಗಮಾಂತ್ ಬಾಗೀವಾಳ್, ರುದ್ವೇದ ಬಾಗೀವಾಳ್   ರಚನೆ : ಕುಮಾರ್ ಬಿ ಬಾಗೀವಾಳ್.

ಗುರುತಿಸ ಬಲ್ಲೆನಾ…. ನನ್ನೆಜ್ಜೆ ಗುರುತುಗಳ..Can I identify my footprints? poem by Kumar B Bagival

Image
  ಗುರುತಿಸ ಬಲ್ಲೆನಾ…. ನನ್ನೆಜ್ಜೆ ಗುರುತುಗಳ... ಹೆಜ್ಜೆಗುರುತುಗಳು ಕಾಣದಾಗಿವೆ ಬಂದ ದಾರಿಯುದ್ದಕೂ ಅಷ್ಟು ದೂರ ಪಯಣಿಸಿದೆನಾ ಅಥವಾ  ಪಯಣದ ದಾರಿಯನ್ನೇ ಮರೆತೆನಾ. ಅಥವಾ ಯಾರಾದರೂ ….? ಇಲ್ಲ ನನ್ನ ಹೆಜ್ಜೆಯನ್ನೇ ಮರೆವಷ್ಟು ಬೆಳೆದುಬಿಟ್ಟನಾ?    ಹುಟ್ಟಿದಾಗ ಅಮ್ಮನ ಆಲಿಂಗನ ತೊಡೆಯನೇರಿದೆ ಹುಟ್ಟಿದೊಂದಷ್ಟು ದಿನ ಅಮ್ಮನೆಜ್ಜೆ ಗುರುತುಗಳೇ ನನ್ನವು ಹೆಜ್ಜೆ ಬರುವರೆಗೂ ಮೂಡಿಸಲಾಗಲಿಲ್ಲ  ಸಾಯುವಾಗಲೂ ಯಾರೋ ನಾಲ್ಕು ಜನರ  ಹೆಜ್ಜೆ ಗುರುತುಗಳೇ ನನ್ನವಾಗವುವು ಅಲ್ಲೂ ನನ್ನವೇನಿಲ್ಲ       ಈ ನಡುವಿನವಷ್ಟೇ ನನ್ನವು ಅವೂ ಕೆಲವು ಅಸ್ಪಷ್ಟ ಸ್ಪಷ್ಟವಾಗಿ ಇಟ್ಟ ಹೆಜ್ಜೆಗಳೂ ಮಾಸಿ ಹೋದಂತಿವೆ ಅವಿದ್ದರೆ ಬೆರಳೆಣಿಕೆಯಷ್ಟು ಮಾತ್ರ  ಅವುಗಳೂ ಬೇರೆಯವರ ಹಿಂಬಾಲಿಸಿ ಅವರದೇ ಗುರುತಂತಿವೆ.  ಸ್ವಂತಿಕೆಯೇ ಇಲ್ಲದ ಮೇಲೆ ಗುರುತಿಸುವುದಾದರೂ ಹೇಗೆ ನಾನವನ? ಹೋ ,  ತಡಿ ತುಡಿತವೇ ಹೃದ್ಬಡಿತ ನಿಲ್ಲುವುದರೊಳಗಾಗಿ ಅಡಿಯನಿಡು ನನ್ನದೇ ಮನ ಗುರುತಿಸುವ ಹಾಗೆ  ಲೋಕ ಗುರುತಿಸುವ ಮುನ್ನ ನನ್ನ ನಾ ಗುರುತಿಸ ಬೇಕಿದೆ ಹೆಜ್ಜೆಗೆ ಗೆಜ್ಜೆ ಕಟ್ಟುವೆ ಎಚ್ಚರದಿ ನಡೆಯಲೆಂದು  ಮರೆತರೂ ಮೊರೆತು ಹೇಳಲಿ ಅದು ನನ್ನ ಇರುವಿಕೆಯನು. ರಚನೆ ,: ಕುಮಾರ್ ಬಿ ಬಾಗೀವಾಳ್

ದುಡಿಯುವ ಕೈ ನೀ ಮಡಿಯದಿರು. A poem on farrmer... By Kumar.B.Bagival

Image
  ದುಡಿಯುವ ಕೈ ನೀ ಮಡಿಯದಿರು. ದುಡಿಯುವ ಕೈ ನೀ ಮಡಿಯದಿರು ಸುಡುವ ಕಷ್ಟಗಳೆಷ್ಟೇ ಬರಲಿ ಮಾಡುವ ಕಾಯಕದೊಳಿಷ್ಟವು ಇರಲಿ ಚಿನ್ನಕು ಮಿಗಿಲು ಅನ್ನವನು   ಈ ಜಗಕೆ ನೀನೆ  ಇತ್ತವನು. ಮಸುಕಲಿ ಎದ್ದು,ಹೊಲದಲಿ ಸದ್ದು ಮಾಡುತಲಿರುವ ನಿನ್ನನು ನೋಡಿ ನಾಚುತ ತಾ ನೇಸರ ಮೂಡಿ ತಾ ಕೆನ್ನೆಯ ಕೆಂಪನೆ ಮಾಡಿದನು. ಸುಡು ಬಿಸಿಲಿಗು ಜಗ್ಗದ ನಿನ್ನನು ಮೆಚ್ಚುವ ಗಡಿಯ ಕಾಯ್ವ ಯೋಧನು. ಮಳೆಗೆ ಕೊಡೆ ಹಿಡಿಯದ,ಚಳಿಗೂ ಚಳಿಯಿಡಿಸುವ ಧೃತಿಗೆಡದ ಮೈ ಅದು ಕೈ ಕೆಸರಾದರು ಲೋಕದ ಬಾಯಿಗೆ ಮೊಸರದು ತಾ ಸೋತರೂ ಜಗವ ಗೆಲಿಸುವ ತ್ಯಾಗವು ನೀನಗಲ್ಲದೆ ಮತ್ಯಾರಿಗಿದೆ ಆ ಧೈರ್ಯವು? ಬೆಳೆವುದು ನೂರಾದರೆ ಪಡೆವುದು ಚೂರು ಕೊಳಗಕೂ ಮೀರಿದ ಆಸೆಯಾದರೂ ಬಳಗಕೆಲ್ಲ ಸುರಿದಳೆವ ಒತ್ತಾಸೆಯು ನಿನದು ಬೆನ್ನೆಲುಬು ನೀನಾದರು ಜಗಕೆ ಜಗವೇ ನಿಂತಿದೆ ನಿನ್ನಯ ಬೆನ್ನಿಗೆ. ಉರುಳಿಗೆ ಕೊರಳನೊಡ್ಡದಿರು ಬೆರಳು ಮಾಡದ ಹಾಗೆ ನಿನ್ನೆಡೆಗೆ. ವಿರಮಿಸದಿರು ಬದುಕ  ಮಾಡು  ಹೊನ್ನ ,ಒಮ್ಮೆ ಮಾತ್ರ ಮನುಜ ಜನ್ಮ ನೋಡಲಿ ಎಲ್ಲರೂ ಕೊರಳೆತ್ತಿ ನಿನ್ನ. ರಚನೆ: ಕುಮಾರ್. ಬಿ.ಬಾಗೀವಾಳ್.

ರಾಷ್ಟ್ರೀಯ ಗಣಿತ ದಿನ

  ರಾಷ್ಟ್ರೀಯ ಗಣಿತ ದಿನ ಡಿ ಸೆಂಬರ್22, 1887,  ಭಾರತದ ಮಟ್ಟಿಗೆ ಅವಿಸ್ಮರಣೀಯ ದಿನ‌ ಅಂದು ವಿಶ್ವ ಕಂಡ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮ ದಿನ. ರಾಮಾನುಜನ್ ಅವರು ಹುಟ್ಟಿದ  125 ನೇ ಜನ್ಮದಿನದ ನೆನಪಿಗಾಗಿ ಡಿಸೆಂಬರ್ 22,ನ್ನು ರಾಷ್ಟ್ರೀಯ ಗಣಿತ ದಿನವೆಂದು 2012 ರಲ್ಲಿ ಅಂದಿನ ಭಾರತದ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಅವರು ಘೋಷಿಸಿದರು. ಮತ್ತು ಅದೇ ವರ್ಷ 2012 ನ್ನು ರಾಷ್ಟ್ರೀಯ ಗಣಿತ ವರ್ಷ ಎಂದು ಘೋಷಿಸಿದರು. ಅದೇ ವರ್ಷ ರಾಮಾನುಜನ್ ಅವರ ನೆನಪಿಗೆ ಅಂಚೆ ಚೀಟಿಯನ್ನೂ ಹೊರತರಲಾಯಿತು. ಅಂತೆಯೇ  2017ರಲ್ಲಿ ಆಂದ್ರಪ್ರದೇಶದ, ಚಿತ್ತೂರು ಜಿಲ್ಲೆಯ ಕುಪ್ಪಂ ನಲ್ಲಿ ರಾಮಾನುಜನ್ ಗಣಿತ ಪಾರ್ಕ್ ನಿರ್ಮಾಣ ಮಾಡಲಾಗಿದೆ.

ನಭೋ ವಿಸ್ಮಯ… ಗುರು- ಶನಿಯರ ಸಂಯೋಗ

Image
         ನಭೋ ವಿಸ್ಮಯ… ಗುರು- ಶನಿಯರ ಸಂಯೋಗ ನಭೋ ವೈಚಿತ್ರ್ಯಗಳು ಅನೇಕ. ಅಷ್ಟಕ್ಕೂ ಅದು ಕುತೂಹಲದ ಕುಡಿಕೆ, ನಾವು ಚಿಕ್ಕವರಿದ್ದಾಗಿನ ಒಗಟಂತೆ ಅವ್ವನ ಸೀರೆ,ಅಪ್ಪನ ದುಡ್ಡು. ನೋಡಿದಷ್ಟೂ ನೋಡಿಸಿಕೊಳ್ಳುವ, ಕಣ್ಣಾಡಿಸಿದಷ್ಟೂ ಖುಷಿಕೊಡುವ ಮಾಯಾಲೋಕ.  ಮೇಲ್ನೋಟಕ್ಕೆ ಬರೀ ಕತ್ತಲೆಯ ಹಾಸಿನ ಮೇಲಿನ ಚಿತ್ತಾರದ ಚುಕ್ಕಿಗಳಂತೆ ಕಂಡರೂ…. ಹಾಗೇ…. ಕಣ್ತೆರೆದು ಶುಭ್ರಾಗಸಕ್ಕೆ ಎದೆಯೊಡ್ಡಿ ನೋಡುತ್ತಾ ಮಲಗಿದರೆ ಮೊಗೆದಷ್ಟೂ ಕುತೂಹಲ ತಣಿಸುವ ಅನೇಕ ಕಥಾಹಂದರವೇ ತೆರೆದುಕೊಳ್ಳುತ್ತದೆ. ಕಲ್ಪಿಸಿಕೊಂಡಷ್ಟೂ ಕಲ್ಪನಾ ಲಹರಿ ಬಿಚ್ಚಿಡುತ್ತದೆ. ನೋಡಬೇಕಷ್ಟೆ, ನೋಡುತ್ತಾ ಅನುಭವಿಸಬೇಕಷ್ಟೇ. ಟಅಂತಹಾ ಅನೇಕ ಅಧ್ಬುತಗಳಲ್ಲಿ ವಿಸ್ಮಯಗಳಲ್ಲಿ , ಖಗೋಳ ಘಟನೆಗಳಲ್ಲಿ ಒಂದು ಬಲಾಢ್ಯ ಅನಿಲ ಧೈತ್ಯಗ್ರಹಗಳಾದ ಗುರು,ಶನಿಗಳ ಸಂಗಮ. ನಭದಲ್ಲಿ ನಡೆವ ಪ್ರತೀ ವಿದ್ಯಮಾನಗಳೂ ಸೌರಮಂಡಲದ ಸದಸ್ಯರಾದ ನಮಗೂ ಸಂಬದಿಸಿದ್ದೇ ಆಗಿರುವುದರಲ್ಲಿ ಸಂಶಯವಿಲ್ಲ. ಹಾಗಾಗಿಯೇ ಖಗೋಳ ವಿಜ್ಞಾನಿಗಳು ಹಾಗೂ ಅಘೋಷಿತ ವಿಜ್ಞಾನಿಗಳಾದ ಜ್ಯೋತಿಷಿಗಳ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಖಗೋಳ ವಿದ್ಯಮಾನಗಳಲ್ಲಿ ಒಂದಾದ ಗುರು,ಶನಿಯರ ಸಂಗಮ ನಾಳೆ ಅಂದರೆ 21/12/2020 ರ ಸಂಜೆಯ ವೇಳೆಗೆ ನೋಡಬಹುದಾಗಿದೆ. ಅವೆರಡರ ಕೋನೀಯ ಅಂತರ ಅತ್ಯಂತ ಕಡಿಮೆ ಅಂದರೆ 0.1ಡಿಗ್ರಿಗಳಷ್ಟಾಗಲಿದೆ ಅ ಅವೆರಡೂ ಅತ್ಯಂತ ಸಮೀಪದ ಸಂಗಮಕೊಳಪಡಲಿವೆ. ಬಹುತೇಕ ಇಷ್ಟೇ ಸಮೀಪದ ಸಂಗಮವನ್ನು ...

ಸಾಕಷ್ಟಿವೆ ಸಾಲುಗಳು...

  ಸಾಕಷ್ಟಿವೆ ಸಾಲುಗಳು... ಸಾಕಷ್ಟಿವೆ ಸಾಲುಗಳು ಕಥಾಹಂದರದಲಿ ಎಲ್ಲವೂ ಪ್ರಶ್ನಾರ್ಥಕವಲ್ಲ, ಉತ್ತರದಾಯಿ ಆಶ್ಚರ್ಯಕರವಾದವೂ ಅಲ್ಲ,ಕೆಲವು ಸಾಲು ಮಾತ್ರ ಒರೆಗಚ್ಚುವ ಕಲ್ಲಿನಂತೆ ಮೊನಚಿಗಾಗಿ, ವೇಗ ಅತಿಯಾದಾಗ ಹಾಗಾಗ್ಗೆ ಅಲ್ಪವಿರಾಮ ಬದುಕು ರಸವತ್ತಾದಾಗ ತೋರಿಸಲು ಉಧ್ಧರಣ ಅಲ್ಲಲ್ಲಿ  ಅಡಗಿ ಕುಳಿತ ಒಳಾರ್ಥಕ ನುಡಿಗಳು ನಿನಗೆ ಸಮಾನವಂದೇಳಲು ಆವರಣವಲ್ಲಲ್ಲಿ ಅಸಾಧ್ಯವನು ಸಾಧ್ಯವಾಗಿಸಿದಾಗ ಆಶ್ಚರ್ಯ ಹೇಳಿದ್ದಾಯಿತು ಸಾಕೆನಿಸಿದಾಗ ಪೂರ್ಣವಿರಾಮ. ಸಾಕಷ್ಟಿವೆ ಸಾಲುಗಳು ಕಥಾಹಂದರದಲಿ ಎಲ್ಲವೂ ಸಾಮಾನ್ಯವಲ್ಲ, ಸಂಯುಕ್ತವೂ ಸಂಯೋಜಿತವೂ ಅಲ್ಲ, ಕೆಲವು ಸಾಲು ಮಾತ್ರ ಒರೆಗಚ್ಚುವ ಕಲ್ಲಿನಂತೆ ಮೊನಚಿಗಾಗಿ ಸೊಗಸಿಗಲಂಕಾರ, ಪ್ರಾಸಗಳ ಸಾಲುಗಳು ಚೆಂದಕಾಗಿಯೇ ಛಂದಸ್ಸು ಹೆಚ್ಚಿಸವೆ ಮೆರಗನಲ್ಲಲ್ಲಿ ಸೊಗಡಿಗಾಗಿ ಸೊಗಸಾದ ಗ್ರಾಮ್ಯ ನುಡಿಗಳ ನುಡಿಮುತ್ತು ಬೆಡಗಾಗಿಸಿವೆ ಬೇರೆ ಭಾಷೆಯಿಂದೆರವಲು ಪಡೆದ ಅನ್ಯದೇಶಿಯ ಪದಪುಂಜವದು ನಮ್ಮದೇ ಸ್ವಂತವೆಂಬತೆ. ಕಥೆಯ ಬನಿಯನೆಚ್ಚಿಸಿವೆ… ಸದಾ ಸಾಂಗವಾಗಿವೆ. ರಚನೆ : ಕುಮಾರ್ ಬಿ ಬಾಗೀವಾಳ್

ಆಸೆ - ಅವಕಾಶ Aase--avakaasha poem by KumarB Bagival

  ಆಸೆ - ಅವಕಾಶ ನೀ ನಡೆವ ದಾರಿಯುದ್ದಕೂ ನೆರಳಾಗುವಾಸೆ ಸುಡುವ ಮೈ ತಣಿಸುವ ಕೊಂಚ ಅವಕಾಶ ನನಗೆ ನಾಳೆಗಳ ನಾವೆಗೆ ನಾನೇ ನಾವಿಕನಾಗುವಾಸೆ ಬಿರುಗಾಳಿಗೆ ಹೊಯ್ದಾಡಿದರೂ ಹಿಡಿದು ನಿಲ್ಲುವ ಅವಕಾಶ ನನಗೆ. ಶೃಂಗಾರ ಮಾಡಿರುವ ನಿನ್ನ ಕಣ್ಣಿನ ರೆಪ್ಪೆಯಾಗುವಾಸೆ ದಾರಿ ದೂಳೊಕ್ಕದಂತೆ ತಡೆದು ಸೊಂಪಾಗಿಡುವವಕಾಶ ನನಗೆ ಕರಣಗಳ ಮೇಲ್ಮೆರೆವ ಕಿವಿಯೋಲೆಯಾಗುವಾಸೆ ಕರಣಕ್ಕಡಚ್ಚಿಕ್ಕುವ ಕರ್ಕಶವ ತಡೆದು ಇಂಪಾಗಿಸುವವಕಾಶ ನನಗೆ. ಬೆರಳ್ತುದಿಗೊಂದಂದದ ಉಂಗುರವಾಗುವಾಸೆ ಬೆರಳಿಡಿದು ನಡೆಸಿ ದಿಶೆಯಾಗುವ ಅವಕಾಶ ನನಗೆ. ಕೊರಳೊಳಗೆ ಮೆರೆವ ಸರವಾಗುವಾಸೆ,   ಬರಿಯಕೊರಳಿಗೆ ಚಲುವ ಕೊಡುವ ಅವಕಾಶ ನನಗೆ. ಜೇನ್ಗೆನ್ನೆಯ ಮೇಲೆ ಬಳಿವ ಅರಿಶಿನವಾಗುವಾಸೆ ಹದ ಮುದದ ಕೆನ್ನೆಯ ಕೋಮಲವಾಗುವವಕಾಶ ನನಗೆ. ನೆತ್ತಿಯಲಾಡುವ ಮಲ್ಲೆಯ ಹೂಮಾಲೆಯಾಗುವಾಸೆ ಮಧುರ ಸಿಹಿಯ ಸಹಿಯಾಗುವವಕಾಶ ನನಗೆ. ಬರಿಗಾಲ ಪಾದದಂಚಿನ ರಂಗಾಗುವಾಸೆ ಸುರಿದು ದಾರಿಯುದ್ದಕೂ ಪಾದವನೆ ಕಾಪಾಡುವವಕಾಶ ನನಗೆ ಪಯಣದುದ್ದಕೂ ಪ್ರಣಯದಲಿ ಜೊತೆಯಾಗುವಾಸೆ ಕಣಕಣಕೂ ಕೂಗಿ ನಾ ನಿನ್ನವನೆಂದು ಹೇಳುವವಕಾಶ ನನಗೆ. ರಚನೆ : ಕುಮಾರ್ ಬಿ ಬಾಗೀವಾಳ್

ಬಾಡುವ ಮುನ್ನ...

 ಬಾಡುವ ಮುನ್ನ ಹೂಬಿಡು ನನ್ನ ಮುದ್ದಿನ ಮಲ್ಲಿಗೆ ಗಿಡವೇ  ನೀ... ಸುಡು ಬಿಸಿಲಿಗು ಒಮ್ಮೆ ನಾ ಬರವೆನು ಓಲೆ ತಂಪಾಗಿಡು ನಿನ್ನ ಎನ್ನುವ ಸಾಲೆ. ಮಳೆಗರೆಯುವ ಮೋಡಕು ಮೊರೆ ಇಡುವೆನು ಕೇಳು ಚುಂಬಸು ನಿನ್ನ ನೀ ಬಾಡುವ ಮುನ್ನ. ::::

ವಚನಾನುಕರಣೆ vachananukarane By: Kumar B Bagival

  ಅನುಕರಣೆ ೩: ದಿನಾಂಕ ೨೨/೧೦/೨೦೨೦ ಶಿವಶರಣ ಅಂಬಿಗರ ಚೌಡಯ್ಯ ರಚಿತ ಅರಿಯದ ಗುರು ಅರಿಯದ ಶಿಷ್ಯಂಗೆ  ಅಂಧಕನ ಕೈಯನಂಧಕ ಹಿಡಿದಡೆ ಮುಂದನಾರು ಕಾಬರು ಹೇಳಲೆ ಮರುಳೆ.  ತೊರೆಯಲದ್ದವನನೀಸಲರಿಯದವ  ತೆಗೆವ ತೆರನಂತೆಂದನಂಬಿಗ ಚೌಡಯ್ಯ. ವಿವರ: ಹನ್ನೆರಡನೆಯ ಶತಮಾನ ಭರತಖಂಡ ಕಂಡ ಅದ್ಭುತ ಸಾಮಾಜಿಕ ಬದಲಾಾವಣೆಗಳನ್ನು ಕಂಡ ಕಾಲ. ಅಣ್ಣ ಬಸವಣ್ಣನವರ ಮಾರ್್ಗ್ಗದರ್ಶನ ದೊರೆತ ಸಂದರ್ಭದಲ್ಲಿ , ಪ್ರತೀ ವಚನಕಾರರು ಸಮಾಜ ತಿದ್ದುವ ಕೆಲಸ ಮಾಡಿದರು. ಅವರು ನಡೆದಂತೆ ನುಡಿದವರು. ಅದರಲ್ಲೂ ಅಂಬಿಗರ ಚೌಡಯ್ಯ ನವರು ಇದ್ದದ್ದನ್ನು ಇದ್ದಹಾಗೆ ನುಡಿದವರು. ಈ ವಚನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಹೇಗಿರಬೇಕು ಎಂಬುದನ್ನು ನಿದರ್ಶನ ಸಹಿತ ಹೇಳಿದ್ದಾರೆ. ಶಿಕ್ಷಣ ನಿಂತ ನೀರಲ್ಲ ಸದಾ ಹರಿಯುತ್ತಿರುವುದು ಅದರ ಲಕ್ಷಣ. ಶಿಕ್ಷಣವೆಂಬ ಜ್ಯೋತಿ ಸಂಜೀವಿನಿ ಸದಾ ದೀಪದಿಂದ ದೀಪವ ಹಚ್ಚುವ, ಹೆಚ್ಚುವ ನಂದದ ದೀಪ. ಗುರು ನಿರಂತರ ಅಭ್ಯಾಸ ಮಾಡುತ್ತಿರಬೇಕು, ಅಭ್ಯಾಸ ಮಾಡುತ್ತಾ ನಿರಂತರ ಅರಿವನ್ನು ಪಡೆಯುತ್ತಿರಬೇಕು.ಸದಾ ಜ್ಞಾನವನ್ನು ಪಡೆಯುವ ಪ್ರನಯತ್ನದಲ್ಲಿ ನಿರತನಾಗಿರಬೇಕು. ಪಡೆದ ಜ್ಞಾನದ ಸದ್ಬಳಕೆಯಾಗಬೇಕು. ತಾನು ತನ್ನ ಶಿಷ್ಯರಿಗೆ ಮಾದರಿಯಾಗಿ ಇರಬೇಕು. ತಾನು ಉತ್ತಮನಾಗಿದ್ದರೆ ಮಾತ್ರ ತನ್ನ ಶಿಷ್ಯರಿಗೆ ಉತ್ತಮವಾದದನ್ನು ಕೊಡಲು ಸಾದ್ಯ ಎಂಬುದರ ಅರಿವು ಗುರುವಿಗೆ ಸದಾ ಜಾಗೃತವಾಗಿರಬೇಕು. ಸಮಾಜದ ಪ್ರತೀ ಕ್ಷೇತ್ರದ ಉತ್ತಮತೆ ಗುರುವಿ...

ವಚನಾನುಕರಣೆ. Vachananukarane, By Kumar b bagival

  ವಚನಾನುಕರಣೆ. ಅನುಕರಣೆ ೨ . ದಿನಾಂಕ: ೨೧/೧೦/೨೦೨೦ ಶಿವ ಶರಣೆ ಅಕ್ಕ ಮಹಾದೇವಿ ರಚಿತ   ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ.  ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ.  ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ.  ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ. ವಿವರ: ಈ ವಚನ ನಮಗೆ ಗುರುವಿನ ಮಹತ್ಕಾರ್ಯವನ್ನು ತಿಳಿಸುತ್ತದೆ ಹಾಗು ಗುರುವಿಗೆ ವಿನಮ್ರ ಧನ್ಯನಾಗಿರಬೇಕಾಗಿ ತಿಳಿಸುತ್ತದೆ. ಮನುಷ್ಯ ಜನ್ಮ ಪಡೆದ ನಂತರ ಗುರುವಿನ ಕೃಪೆ ಇರದಿದ್ದರೆ ನರನಾಗಿಯೇ ಉಳಿಯುತ್ತಿದ್ದ. ನರನಲ್ಲಿನ ಗುಣಾವಗುಣಗಳನ್ನು ಗುರ್ತಿಸಿ ಶಿಕ್ಷಣವನಿತ್ತು ನರನನ್ನ ಹರನಾಗಿಸುವುದು ಗುರು. ಹರನಾದ ಬಳಿಕ ಗುರುವನ್ನು ಮರೆಯದೇ ನಮಿಸುವುದು. ಪ್ರತೀ ಯಶಸ್ವಿ ನಡಿಗೆಯಲ್ಲೂ ಗುರುಸ್ಮರಣೆ ಮಾಡುವುದು ನರನ ಕರ್ತವ್ಯ. ಜೀವನದ ಭವಬಂಧನವ ಬಿಡಿಸಿ ಮುಕ್ತಗೊಳಿಸಿ ಸುಖದ ಜೀವನದೆಡೆಗಿನ ದಾರಿ ತೋರುವುದು ಗುರುವೊಬ್ಬರೆ. ಭವಿಯನೊರತು ಭಕ್ತನಾಗಿಸುವುದೂ ಗುರುವೆ. ಅಷ್ಟೇ ಅಲ್ಲ ಜೀವನದ ಅಂತಿಮ ಗುರಿ ತಲುಪಿಸುವುದೂ ಗುರುವಿನಿಂದ ಕಲಿತ ಶಿಕ್ಷಣವೇ. ಇಲ್ಲಿ ಚನ್ನಮಲ್ಲಿಕಾರ್ಜುನ ಅಕ್ಕನವರ ಗುರಿ ,ಅಕ್ಕನವರ ಬದುಕಿನುದ್ದಕ್ಕೂ ,ಅಣ್ಣ ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ ನವರಂತಹವರಿಂದ ಪಡೆದ ಸಲಹೆ ಅರಿವು ಸದ್ಗತಿಯ ಕಡೆಗೆ ಅಕ್ಕನವರನ್ನು ಕೊಂಡೊಯ್ಯಲು ಅನುವಾಗುವಂತೆ ಮಾಡುತ್ತವೆ. ಹಾಗಾಗಿ ಅಕ್ಕ...

ವಚನಾನುಕರಣೆ Vachana Anukarane

Image
  ವಚನಾನುಕರಣೆ. ಅನುಕರಣೆ ೧. ದಿನಾಂಕ: ೨೦/೧೦/೨೦೨೦ ಶಿವ ಶರಣೆ ಅಕ್ಕ ಮಹಾದೇವಿ ರಚಿತ ಕೃಪೆ: ಇಂಟರ್ನೆಟ್ ಗುರು ತನ್ನ ವಿನೋದಕ್ಕೆ ಗುರುವಾದ  ಗುರು ತನ್ನ ವಿನೋದಕ್ಕೆ ಲಿಂಗವಾದ  ಗುರು ತನ್ನ ವಿನೋದಕ್ಕೆ ಜಂಗಮವಾದ  ಗುರು ತನ್ನ ವಿನೋದಕ್ಕೆ ಪಾದೋದಕವಾದ  ಗುರು ತನ್ನ ವಿನೋದಕ್ಕೆ ಪ್ರಸಾದವಾದ  ಗುರು ತನ್ನ ವಿನೋದಕ್ಕೆ ವಿಭೂತಿಯಾದ  ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ  ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ.  ಇಂತೀ ಭೇದವನರಿಯದೆ,  ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ  ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು.  ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ  ಅಂಗೈಯಲ್ಲಿರ್ದ ಲಿಂಗವು ಜಾರಿತ್ತು.  ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು  ಭವಹೇತುಗಳ ಮಾಡುವನಯ್ಯಾ.  ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು  ಚೆನ್ನಮಲ್ಲಿಕಾರ್ಜುನಾ ವಿವರ: ಈ ವಚನದಲ್ಲಿ ಅಕ್ಕಮಹಾದೇವಿಯವರು ಗುರುವಿನ ಮಹತ್ತರವಾದ ಸ್ಥಾನವನ್ನು ನೆನಪಿಸುತ್ತಾ ಅನುಸರಿಸಬೇಕಾದದ್ದರ ಕುರಿತು ನುಡಿಯುತ್ತಾರೆ. ತನ್ನ ಅರಿವಿಗೆ ಗುರು, ಗುರು,ಲಿಂಗ, ಜಂಗಮ,ಪಾದೋದಕ,ಪ್ರಸಾದ,ವಿಭೂತಿ,ರುದ್ರಾಕ್ಷಿ, ಹಾಗೂ ಓಂ ನಮಃ ಶಿವಾಯವೆಂಬ ಮಹಾಮಂತ್ರಗಳ ಮಹತ್ವದ ಅವಶ್ಯಕತೆ ಬಗೆಗೆ ನುಡಿದಿದ...

ಬರೆದ ಸಾಲುಗಳು.... The lines I write

  ಬರೆದ ಸಾಲುಗಳು ಬರೆಯಲೊರಟಾಗ ಬದುಕ ದಾರಿಗಳೇ , ಬೆರಳಿಡಿದು ಸಾಗಿದವು ತಲುಪಿಸಲು ಗುರಿಯ ಕಣ ಕಣವೂ ಚಡಪಡಿಸಿದವು ಸಲಹೆ ಕೊಡಲು ಕಣ್ಣೆದುರಿಗೆ ನಿಂದವು ಮುಂದೆ ಬಂದು ಕೈಮರವಾಗಿ. ದಾರಿಯುದ್ದಕೂ ತಂಪೆರೆದ ಮರಗಳೆಷ್ಟೋ, ದಾಹ ತೀರಿಸಲು ಜೊತೆಗರಿದ ಹೊಳೆಗಳೆಷ್ಟೋ, ಹಿತಕಾಗಿ ಹರಸಿ ಮೇಳೈಸಿದ ಹಸಿರ್ಸಾಲುಗಳೆಷ್ಟೋ, ಅಮಿತವಾಗಿ ಕೂಗಿ ಕರೆದ ಬೆಟ್ಟಗುಡ್ಡಗಳ ಧ್ವನಿಗಳೆಷ್ಟೋ. ಬರೆದ ಸಾಲುಗಳೊಳಗೆ ಸತ್ವವನೊಂದಿಷ್ಟು ಇಟ್ಟು ಕಟ್ಟಕಡೆಯ ಸಾಲನೊಮ್ಮೆ ಮರುಮೌಲ್ಯಿಸಿದವು ಕವಲದಾರಿಗಳ ಪ್ರಶ್ನೆಗಳು, ಸರಿದಾರಿಯ ಆಧರಿಸಿ ಹೊರಟ ಸಾಲುಗಳಿಗಿಲ್ಲಿ ಪೂರ್ಣ ಅಂಕಗಳು. ಮೌನಿಸಿ, ದಿಟ್ಟಿಸಿ, ಗಟ್ಟಿಸಿಕೊಂಡ ಬೆಟ್ಟುಗಳಿವು ಬರೆಯಲೊರಟ ಮನಕೆ ಮಾದರಿಯಾದವು ಬದುಕ ಬರಹವನೆ ಬದಲಿಸಲು ದಾರಿಯಾದವು ಸಾಧನೆಯ ಶಿಖರದ ಮೇಲಿನ ಶಿರವಾದವು. ರಚನೆ: ಕುಮಾರ್ ಬಿ ಬಾಗೀವಾಳ್

ಮರಳು .... ರಚನೆ: ಕುಮಾರ್ ಬಿ ಬಾಗೀವಾಳ್ please come back...

  ಮರಳು... ಉಸಿರಲೆ ಕಸಿವಿಸಿ ಕಾಣುತಿದೆ  ತುಸು ಸುಧಾರಿಸು ಕಾಯುವೆ ಮರು ಮಾತಿಗೆ ತರುವಿನ ಹಾಗೆ ಬಿಗಿದಪ್ಪಿ ಹುಸಿಯದ ಪ್ರೀತಿಯ ಕದ ತೆರೆವೆ ಜೀವನದುದ್ದಕು. ಕನಸಲೆ ಹೊಂಬಿಸಿಲಿಗೆ ತೆರೆದಿಟ್ಟ ಪುಷ್ಪಗಳ ಅರಳುವಿಕೆಗಾಗಿ ಕಾಯುವೆ ಬರದಿಟ್ಟು ಹೆಸರ  ಗಳಿಗೆಗೊಮ್ಮೆ ನನ್ನದೇ ಕೃತಿಸಂಪುಟದಲಿ ಚಂದದೊಂದು ಹೆಸರಿಟ್ಟು ಜೋಪಾನದಿ ಬಚ್ಚಿಟ್ಟು. ಸಾಗರದ  ತಟದಲ್ಲಿ ಸಾವಿರ ಅಲೆಗಳ                                      ಮರು ಬರುವಿಕೆಗಾಗಿ ಕಾಯುವೆ ಮರಳಲಿ  ಮರೆಯ ಬೇಕಾದದ್ದನ ಬರೆದು ಮೆರೆದಳಿಸಿ,  ‌ನೆರೆದುಳಿಯಲಿ ಸವಿನೆನಪುಗಳು ಅಂಗಳದಿ ಎಂದು    ಮುಗಿಲ ಮೇಲೆಲ್ಲೋ ಮೋಡದ ದುಗುಡ ಮಳೆಹನಿಯ ಹೆರುವಿಕೆಗೆ ಕಾಯುವೆ ಹೆತ್ತರಷ್ಟು ಭಾರ ಕರಗುವ ಹಾಗೆ ಅತ್ತುಬಿಡುವೆ ಮಳೆಗೆ ಇಳೆ ತುಂಬಿ ನಗುವ ಹಾಗೆ ಸುಮ್ಮನೆ. ರಚನೆ : ಕುಮಾರ್ ಬಿ ಬಾಗೀವಾಳ್      

ಗುರು ಮತ್ತು ವಚನಗಳು Teacher and vachanagalu

  ಗುರು ಮತ್ತು ವಚನಗಳು "ಗು ರುವಿನ ಗುಲಾಮನಾಗದ ಹೊರತು ಮಕ್ತಿ ದೊರೆಯದು "... ಜಗತ್ತಿನಲ್ಲಿ ಮತ,ಭಾಷೆ,ಕುಲ,ಸ್ಥರ,ಹೀಗೆ ಎಲ್ಲವೂ ಬೇರೆ ಬೇರೆ ಆದರೆ ಜಗತ್ತಿನಾದ್ಯಂತ ಒಂದೇ ಎಂಬುದೊಂದು ಇದ್ದರೆ ಅದು ಗುರುವಿನ ಸ್ಥಾನ ಮಾತ್ರ.  ವಚನಕಾರರು ಅರಿವಿನ ಮಾರಿತಂದೆ ಎನಗೆ ಗುರುವಾಗಬೇಡ ಹೆಣ್ಣು ಹೊನ್ನು ಮಣ್ಣಿನ ಆಸೆ ಉಳ್ಳನ್ನಕ್ಕ, ಎನಗೆ ಲಿಂಗವಾಗಬೇಡ ಶಕ್ತಿಸಂಪರ್ಕವುಳ್ಳನ್ನಕ್ಕ, ಎನಗೆ ಜಂಗಮವಾಗಬೇಡ ಕಂಡಕಂಡವರ ಮಂದಿರದಲ್ಲಿ ಹೊಕ್ಕು ಅಶನ ವಿಷಯಕ್ಕಾಗಿ ಹುಸಿವೇಷವ ತೊಟ್ಟು ಗಸಣಿಗೊಳಬೇಡ, ಎಂದು ಹೇಳಿದ ಮಾತಿಗೆ ನೊಂದ ನೋವು, ನಿಮ್ಮ ದೇವತ್ವದ ಹಾನಿ ಎನ್ನ ಸಜ್ಜನದ ಕೇಡು. ಎನ್ನ ಹೊದ್ದಡೆ ಮಾಣೆ, ಇದ್ದುದ ಹೇಳಿದೆ, ನೊಂದಡೆ ನೋಯೆ,ಸದಾಶಿವಮೂರ್ತಿಲಿಂಗವೆ ನಿನ್ನ ನಾ ಹಿಂಗದ ತೊಡಕು. ಗುರುಚರದಲ್ಲಿ ಸೇವೆಯ ಮಾಡುವನ್ನಕ್ಕ ಮೂರಕ್ಕೆ ಹೊರಗಾಗಿರಬೇಕು, ಮೂರಕ್ಕೆ ಒಳಗಾಗಿರಬೇಕು. ಮೂರರ ಒಳಗೆ ಕಂಡು ಮೂರರ ಹೊರಗನರಿತು,ನೆರೆ ನೀರನಾಗಿರಬೇಕು, ಸದಾಶಿವಮೂರ್ತಿಲಿಂಗವ ಮೀರಬೇಕು. ವಚನಕಾರರು ಅಕ್ಕಮ್ಮ ಗುರುವಾದಡೂ ಆಚಾರಭ್ರಷ್ಟನಾದಡೆ ಅನುಸರಿಸಲಾಗದು.  ಲಿಂಗವಾದಡೂ ಆಚಾರದೋಹಳವಾದಲ್ಲಿ ಪೂಜಿಸಲಾಗದು.  ಜಂಗಮವಾದಡೂ ಆಚಾರ ಅನುಸರಣೆಯಾದಲ್ಲಿ ಕೂಡಲಾಗದು.  ಆಚಾರವೆ ವಸ್ತು, ವ್ರತವೆ ಪ್ರಾಣ, ಕ್ರಿಯೆಯೆ ಆಚಾರ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ. ವಚನಕಾರರು ಅಪ್ಪಿ ದೇವಯ್ಯ ಹೊನ್ನು ಹೆಣ್ಣು ಮಣ್ಣು ಬಿಡಿಸದ ಗುರುವಿನ ಉಪದೇಶವನೊಲ್ಲೆ...