ಬದುಕು ದುಸ್ಸರವಾದಾಗ…. ಪುಟಿಯುವ ನಾವು ಹೀಗೆ... ಬದುಕು ದುಸ್ಸರವಾದಾಗ , ಪುಟಿದೇಳುವ ಮನಸಿಗೊಂದು ನಿದರ್ಶನ ಇದು. ಬದುಕು ಇನ್ನೇನು ಮುಗಿಯಿತು ಎಂದುಕೊಳ್ಳುವ ಹೊತ್ತಿಗೆ ಬದುಕ ದಾರಿಯ ಮುಂದೆ ಕತ್ತಲಾದಂತಹಾ ಭ್ರಮೆ ಆವರಿಸಿದಾಗ,ಮುಂದಿನ ದಾರಿ ಅನಾವರಣಗೊಳ್ಳದಿದ್ದಾಗ, ಆಕಾಶವೇ ಕಳಚಿ ತಲೆಯಮೇಲೆ ಬಿಂದಂತಹ, ತಲೆಯ ಮೇಲೆ ಚಪ್ಪಡಿ ಎಳೆದು ಕೊಂಡವೇನೋ ಎಂಬಂತೆ ಕೈಕಟ್ಟಿ ಕುಳಿತು ಕೊಳ್ಳದೇ, ಭ್ರಮನಿರಸನಗೊಳ್ಳದೆ ಇದ್ದುದನ್ನ ಕಳಚಿ ಇದ್ದುದರಲ್ಲೇ ಹೊಸತನವನ್ನು ಬರಮಾಡಿಕೊಂಡು ಬದುಕನ್ನ ಪುನಶ್ಚೇತನಗೊಳಿಸಿಕೊಳ್ಳುವುದನ್ನು ಕಲಿಯಲು ಒಂದು ಅನುಸರಿಸಬಹುದಾದ ಪಕ್ಷಿ ಯಾವುದಾದರೂ ಇದ್ದರೆ ಅದು ಹದ್ದು ಮಾತ್ರ. . ಅದು ತನ್ನ ಜೀವಿತಾವಧಿಯಲ್ಲಿ ಎರಡು ಮಜಲುಗಳನ್ನು ಕಾಣುತ್ತದೆ. ಮೊದಲ ಮಜಲಿನಲ್ಲಿ ಅದು ಇತರೆ ಎಲ್ಲಾ ಪಕ್ಷಿಗಳ ಹಾಗೆಯೇ ಹುಟ್ಟಿ ಹಾರಲು ಕಲಿತು, ತನ್ನ ಪೋಷಕರಿಂದ ಭೇಟೆಯಾಡುವುದನ್ನ ಕಲಿಯುತ್ತದೆ, ಭೇಟೆಯನ್ನ ಹರಸಿ ಹಾರಿ ಬಹುದೂರ ಹೋಗುವುದನ್ನೂ, ಅತೀ ಎತ್ತರದಲ್ಲಿ ಹಾರುತ್ತಾ ಸಾಮಾನ್ಯ ಮಾನವನಿಗಿಂತ ಮೂರರಿಂದ ಮೂರೂವರೆ ಪಟ್ಟು ಕಣ್ಣಿನ ತೀಕ್ಷ್ಣತೆ ಹೊಂದಿರುವ ಅದು ಆಕಾಶದೆತ್ತರಕೆ ಹಾರಿ ಸುತ್ತುತ್ತಾ ಸುತ್ತುತ್ತಾ ತದೇಕಚಿತ್ತದಿಂದ ತನ್ನ ಗುರಿಯೆಡೆಗೆ ಮಾತ್ರ ಗಮನಹರಿಸಿ, ಕೇಂದ್ರೀಕೃತ , ಹಾಗೂ ಸುರುಳಿ ಮಾದರಿಯಲ್ಲಿ ತನ್ನ ಭೇಟೆಯನ್ನ ಹರಸುತ್ತಾ ಸಾಗುತ್ತಾ, ತನ್ನ ಗುರಿ ಸಿಕ್ಕೊಡನೆ ತಡಮಾಡದೆ ತನ್ನ ಗುರಿಯತ್ತ ಸಾಗುವ ಹದ್ದ...