ಬೆರಳ ತುದಿ ಅನಂತದೆಡೆಗಿರಲಿ...ರಚನೆ ; ಕುಮಾರ್ ಬಿ ಬಾಗೀವಾಳ್
ಬೆರಳ ತುದಿ ಅನಂತದೆಡೆಗಿರಲಿ....
ಅನಂತದ ತುದಿ ಹಿಡಿಯಲುಬಹುದೆ
ಆದಿಯಷ್ಟೇ ನಮದು ಅಂತ್ಯವದು ನಿಗದಿ ಇರದು
ಬೀದಿಯ ಕೊನೆಯಂತಲ್ಲ ಗರಿಮೆ ಸಿಗುವುದು
ಹಿರಿದು ಸಾಧನೆಯ ಪಥವದನು ಸವೆಸು ಸಿಗುವುದು.
ಮಂಥನವು ನೂರು ಚಿಂತೆಯ ಕೊನೆಗೆಂದು
ಗುರಿಯಿರದಾಗಿನ ದಾರಿಯಲಿ ಹರಸಿದಾಗ
ಬರಿಗೈಯ ಬಳುವಳಿಯಾದೀತು ಸ್ಪಷ್ಟವಾಗಿರಲಿ
ಚಿತ್ತ ಮತ್ತೆ ತಿರುಗದ ಹಾಗೆ ತಲುಪುವುದು ಸ್ಪಷ್ಟ.
ಮತ್ತದೇತಕೆ ಮರುಳು ಹುರುಳಿಲ್ಲದ ಬಯಕೆ ಬೇಡ
ಸುತ್ತ ಮುತ್ತಲೂ ಕಗ್ಗತ್ತಲೆ ಕವಿಯುವ ಮೊದಲು
ಸಿದ್ಧನಿರು ಬದ್ಧತೆಯ ಬೆಳಕೊಂದನು ಬೆಳಗಲು
ಬಿದ್ದವರೇಳುವರು ಮುಗಿಲೆತ್ತರಕೆ ಸ್ಥಿರತೆ ಇದ್ದರೆ ಛಲದಿ.
ಸಾಧಿಸಿಯೇ ತೀರುವ ಸಾಧಕನವ ಭಾದೆಗಳಿಗೆ ಜಗ್ಗನು
ಹೊಗ್ಗಿ ನಡೆವನು ಮುಗ್ಗರಿಸದೆ ತೋರುವ ದಿಸೆಗೆ
ಹಿಡಿದು ನಿಲಿಸುವನು ಹೊಯ್ದಾಡುವ ಹಡಗನೊಮ್ಮೆ
ಹುಟ್ಟಡಗಿಸುವನು ಭಾದೆಗಳ ಬೆನ್ನಟ್ಟಿ ಹಿಡಿವ ಗುರಿಯ.
ಅನಂತದೆಡೆಗಿರುವ ದಾರಿಯುದ್ದಕೂ ಮೈಲುಗಲ್ಲಗಳಲವು
ಸಿಕ್ಕ ಮೈಲುಗಲ್ಲುಗಳನೆಣಿಸಿಕೋ ಅದೇ ನಿನ್ನ ಸಾಧನೆಗಳತೆಗೋಲ ಮರುಗದಿರು, ಮರಳದಿರು , ಮರಳಿಯತ್ನಿಸಿ ಕೈಮಾಡು ,
ಬೆರಳ ತುದಿ ಆದಿಯಡೆಗಲ್ಲದೆ ಅನಂತದೆಡೆಗೂ ಇರಲಿ.
ರಚನೆ : ಕುಮಾರ್. ಬಿ.ಬಾಗೀವಾಳ್
Comments
Post a Comment