Balanced Diet and A day. Food article, ಸಮತೋಲನ ಆಹಾರ ಮತ್ತು ಒಂದು ದಿನ.
ಉತ್ತಮ ಪೋಷಣೆ : ಸಮತೋಲಿತ ಆಹಾರ ಮತ್ತು ಒಂದು ದಿನ. ( A Day and Balanced diet).
ಸರಿಯಾದ, ಸಮತೋಲಿತ ಪೌಷ್ಠಿಕಾಂಶವು ನಮ್ಮ ದೈನಂದಿನ ಚಟುವಟಿಕೆಗಳಿಗೆ ಉತ್ತೇಜನ ನೀಡಲು, ಉತ್ತಮ ಆರೋಗ್ಯದ ಜೀವಿತಾವಧಿಯನ್ನು ಉತ್ತೇಜಿಸಲು, ನಿರ್ವಹಿಸಲು ಮತ್ತು ನಮ್ಮ ಉತ್ತಮ ಆಕಾರವನ್ನು ಕಾಪಿಡಲು ಪ್ರತಿದಿನ ನಮಗೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಪೋಷಣೆ ಎಂದರೆ ಅದು ಸಮತೋಲನ ಪೋಷಣೆ ಎಂದೇ ಅರ್ಥ.
ಈ ಕೆಳಗಿನ ಟಿಪ್ಸ್ ಗಳಿಗೆ ಕಮಿಟ್ ಆದಲ್ಲಿ ಈ ಕೆಲ ಪೋಷಣಾ ಸಲಹೆಗಳು ನಾವು ಉತ್ತಮ ಆರೋಗ್ಯವನ್ನು ಹೊಂದಲು ಅನುವು ಮಾಡಿಕೊಡುತ್ತವೆ ಎನ್ನುವುದು ನನ್ನ ಅಭಿಪ್ರಾಯ.
ನಾವು ಆರೋಗ್ಯಕರ, ಸಕ್ರಿಯ ಜೀವನಶೈಲಿಗಾಗಿ ಸಮತೋಲನ ಮತ್ತು ಉತ್ತಮ ಪೋಷಕಾಂಶಗಳೊಂದಿಗೆ ಪ್ರತೀ ದಿನವನ್ನು ಪ್ರಾರಂಭಿಸಬೇಕಾಗುತ್ತದೆ.
- ನಮ್ಮ ದಿನದ ಪ್ರಾರಂಭ ಸರಿಯಾದ ಬ್ರೇಕ್ಫಾಸ್ಟ್ನೊಂದಿಗೆ ಆರಂಭವಾಗಬೇಕು ಯಾಕೆಂದರೆ ಇದು ನಮ್ಮ ದೇಹದ ಚಯಾಪಚಯ ಕ್ರಿಯೆಯನ್ನ ಉತ್ಸಾಹದಿಂದ ಪ್ರಾರಂಭಿಸುತ್ತದೆ ಮತ್ತು ಇಡೀ ದಿನ ಉತ್ಸಾಹದಿಂದಿರಲು ಶಕ್ತಿಯನ್ನೊದಗಿಸುತ್ತದೆ. ಹಾಗಾಗಿ ಉತ್ತಮ ಪ್ರೋಟೀನ್ ಯುಕ್ತ ತಿಂಡಿ ಆಯ್ಕೆ ನಮ್ಮದಾಗಿರಲಿ.
- ಶಕ್ತಿಯ ಕುಸಿತ ಮತ್ತು ಅನಾರೋಗ್ಯ ಸ್ನ್ಯಾಕ್ಸ್ ಗಳಿಂದ ಪಾರಾಗಲು ಒಟ್ಟಿನ ಊಟದಲ್ಲಿ ಕಡಿತ ಮಾಡಿ ಆಗಿಂದಾಗ್ಗೆ ಲಘು ಊಟದ ಅಭ್ಯಾಸವನ್ನು ಇಡೀ ದಿನದ ಅವಧಿಗೆ ರೂಢಿಸಿಕೊಂಡರೆ ಉತ್ತಮ.
- ಪೋಷಕಾಂಶ ಭರಿತ ಸ್ನ್ಯಾಕ್ಸ್ ಗಳಾದ ಹಣ್ಣು,ತರಕಾರಿ ಅಥವಾ ಸಣ್ಣಪ್ರಮಾಣದ ಪ್ರೋಟೀನ್ ಸಪ್ಲಿಮೆಂಟ್ ( (protein supplements) ಗಳಾದ ನಟ್ಸ್, ಯೋಗರ್ಟ್ ಅಥವ ಲೋ ಫ್ಯಾಟ್ ಚೀಸ್ ಗಳನ್ನು ಬೆಳಗಿನ ಅವಧಿಯ ಮಧ್ಯೆ ಅಂದರೆ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ಮಧ್ಯೆ , ಹಾಗೂ ಮಧ್ಯಾಹ್ನದ ಅವಧಿಯ ಮಧ್ಯೆ ತೆಗೆದು ಕೊಂಡಲ್ಲಿ ಇದು ಮಧ್ಯಾಹ್ನ ಮತ್ತು ರಾತ್ರಿ ಊಟದ ಅತಿಯಾದ ಸೇವನೆಯನ್ನು ತಡೆಯಲು ಸಾದ್ಯವಾಗಿಸುತ್ತದೆ.
- ನಮ್ಮಗಳ ಬಹುದೊಡ್ಡ ಸಮಸ್ಯೆ ಎಂದರೆ ಅದು ನಿರ್ಜಲೀಕರಣ( dehydration), ಹಾಗಾಗಿ ರೆಗುಲರ್ ಹೈಡ್ರೇಷನ್ ಬಹುಮುಖ್ಯ. ಆದ್ದರಿಂದ ಆಗಿಂದಾಗ್ಗೆ ಶುದ್ಧ ನೀರು, ಎಳನೀರು, ಹಣ್ಣುಗಳ ರಸ, ಕಬ್ಬಿನ ಹಾಲು ಇತ್ಯಾದಿ ದ್ರವ ಪದಾರ್ಥಗಳು ದೇಹದ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ಮತ್ತು ದಿನವಿಡೀ ಲವಲವಿಕೆಯಿಂದಿರಲು ಸಹಾಯ ಮಾಡುತ್ತವೆ.
- ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಪೋಷಕಾಂಶಗಳು ಅತ್ಯಗತ್ಯ. ಇಲ್ಲದಿದ್ದಲ್ಲಿ ಉತ್ತಮ ಆರೋಗ್ಯ ಸಾಧ್ಯವಿಲ್ಲ. ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ಪಡೆದುಕೊಳ್ಳುವುದನ್ನು ಸಮತೋಲಿತ ಪೋಷಣೆ ಎಂದು ಕರೆಯಲಾಗುತ್ತದೆ. ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ಕೊಬ್ಬುಗಳು ಮತ್ತು ತೈಲಗಳು, ಖನಿಜಗಳು, ಜೀವಸತ್ವಗಳು ಮತ್ತು ನೀರು. ಇವು ನಮಗೆ ಅತ್ಯವಶ್ಯಕ ಪೋಷಕಾಂಶಗಳು. ಇವುಗಳ ಸರಿಯಾದ ಸೇವನೆ ಉತ್ತಮ ಆರೋಗ್ಯದ ಗುಟ್ಟು.
- ಜೀವಸತ್ವಗಳು ಮತ್ತು ಖನಿಜಗಳು ,ನಮ್ಮ ದೇಹದ ಆರೋಗ್ಯಕರ ಕಾರ್ಯ ಮತ್ತು ಚಯಾಪಚಯ ಕ್ರಿಯೆಯನ್ನು ಬೆಂಬಲಿಸಲು ಅಗತ್ಯವಾದ ಸಮತೋಲಿತ ಆಹಾರದ ಪ್ರಮುಖ ಭಾಗಗಳಾಗಿವೆ. ಜೀವಸತ್ವ ಭರಿತ ಹಣ್ಣು ತರಕಾರಿಗಳು, ಬ್ರಾಂಕೊಲಿ,ಮಶ್ರೂಮ್ ಇತ್ಯಾದಿಗಳ ಸಮತೋಲನ ಆಹಾರ ಸೇವನೆ ಮುಖ್ಯವೆನಿಸುತ್ತದೆ.
ಈ ಕೆಲ ಅಂಶಗಳನ್ನು ಅನುಸರಿಸಿದರೆ ಆರೋಗ್ಯಭರಿತ ದೇಹ ಹೊಂದುವುದರಲ್ಲಿ ಸಹಾಯಿಸಬಲ್ಲವು ಎಂಬುದು ಅಭಿಪ್ರಾಯ. ಕೆಲವೊಮ್ಮೆ ದೇಹದ ಸ್ವಭಾವದ ಮೇಲೂ ಕೆಲ ಬದಲಾವಣೆಗಳಾಗಬಹುದು ಅದನ್ನರಿತು ಉತ್ತಮ ಸಮತೋಲನ ಆಹಾರ ಸೇವನಾ ಪದ್ಧತಿ ರೂಢಿಸಿಕೊಳ್ಳುವುದು ಈಗಿನ ಬಿಡುವಿಲ್ಲದ ದಿನಗಳಲ್ಲಿ ಅತ್ಯಗತ್ಯವಾದ ವಿಚಾರ ಎಂಬುದು ನಮಗೆ ನೆನಪಿರಬೇಕಾಗುತ್ತದೆ. ಇತ್ತೀಚಿನ ಪ್ರದೂಷಿತ ವಾತವರಣ, ಜಂಕ್ ಫುಡ್ ಸಹವಾಸ, ಬಿಡುವಿಲ್ಲದ ದುಡಿಮೆ ಸಂಧರ್ಭಗಳಲ್ಲಿ ನಾವು ಆರೋಗ್ಯದ ಕಡೆ ಗಮನ ಹರಿಸುವುದನ್ನೇ ಮರೆತುಬಿಟ್ಟ ಉದಾಹರಣೆಗಳು ಸಾಕಷ್ಟಿವೆ, "ಆರೋಗ್ಯವೇ ಭಾಗ್ಯ" "ಸೇವನೆಯೇ ಸೇವೆ"ಯಾಗಬೇಕಾಗಿದೆ.
ಮುಂದಿನ ಲೇಖನದಲ್ಲಿ ಇನ್ನಷ್ಟು ಆರೋಗ್ಯದ ಟಿಪ್ಸ್ ನೀಡುವೆ.
👉 ಕುಮಾರ್. ಬಿ.ಬಾಗೀವಾಳ್.
Usefull. Nice..
ReplyDelete