Devodbhava poem on Sri Shivakumara Swamiji By; Kumara B B
ದೇವೋದ್ಭವ
(ಸಾಕ್ಷಿ ಬೇಕೆ ದೇವನಿರುವಿಕೆಗೆ?)
ಗುಡಿಯಲೆಲ್ಲೊ ದೇವನಿರುವನಂತೆ
ಕಂಡೆಇಲ್ಲ ನಾ ಎಂದಿಗೂ.
ಹೇಗೆ ಕುಳಿತ? ಅವನೆಂದು ಕುಳಿತ?
ಕಾಣಲಿಲ್ಲ ಯಾವ ಮಂದಿಗೂ.
ಕಾಯವಿಲ್ಲ, ಕಾಯಲಿಲ್ಲ,ಕಾಯಕವೂ
ಇಲ್ಲ ಅವನದೆಂದೆಂದಿಗೂ,
ಆದರೂ ಕಣ್ಣಮುಚ್ಚಿ ಮನವ ಬಿಚ್ಚಿ
ಪೂಜಿಪೆವು ದೈನಂದಿಗೂ.
ಸಾಕ್ಷಿ ಬೇಕೆ ದೇವನಿರುವಿಕೆಗೆ?
ನೋಡಬನ್ನಿ ಸಿಧ್ಧಿನೆಲ ಸಿಧ್ಧಗಂಗೆಗೆ.
ಮೊನ್ನೆತಾನೆ ಮಿನುಗೊ ಸೂರ್ಯ ಸರಿದ ಭಾನಂಚಿಗೆ
ಖಾಲಿ ಭಾನ ಬಿಡಲಿಲ್ಲ ಅವ ಜೀವಕೊಟ್ಟ ಕೋಟಿಗೆ.
ಬೆಳೆವ ಕುಡಿಗೆ ಅನ್ನವಿತ್ತಿ,
ಮೊಳೆವ ಮನಕೆ ಜ್ಞಾನಬಿತ್ತಿ
ಕೋಟಿ ಜನಕೆ ಭಕ್ತಿಯನಿತ್ತಿ
ಹೋದ ದೇವನೊಬ್ಬನೇ.
ಮಂದಿರದೊಳು ಕುಳಿತ ದೇವ
ದೇವನಾದ ಪರಿಯು ಇದುವೆ ನೋಡಿ,
ಕಣ್ಣಾರೆ ಕಂಡೆ ನಾನು
ಗುಡಿಯಲಿ ದೇವೋದ್ಭವವನು.
ರಚನೆ : ಕುಮಾರ್. ಬಿ. ಬಾಗೀವಾಳ್.
Comments
Post a Comment