Light can also teach us a very good lesson in life, By: Kumar. B. Bagival

ಬೆಳಕು ಜೀವನದ ಪಾಠ ಹೇಳಿಕೊಡುತ್ತದೆಯಾ?
ನೇರ ನಡೆಯಿಂದ ತೊಡಕಾಗುತ್ತದೆಯಾ?


ಸಂದರ್ಭಗಳು ನಮ್ಮನ್ನ ಕೆಲವೊಮ್ಮೆ ಕಠಿಣ ಮಾಡಿಬಿಡುತ್ತವೆ , ನೇರ ನಿಷ್ಠುರದಿಂದ ನಡೆಯಬೇಕಾದದ್ದನ್ನು ಹೇಳಿಕೊಡುತ್ತವೆ. ಹಾಗೆಯೇ ನಡೆಯಬೇಕ ಅಥವಾ ಸ್ವಲ್ಪ ಫ್ಲೆಕ್ಸಿಬಲ್ ಆಗಿ ಇರಬೇಕಾ ಎಂಬ ಗೊಂದಲ ಮೂಡುವುದು ಸಹಜ. ನೇರವಾಗಿ ನಮ್ಮ ನಡವಳಿಕೆ‌ ಇದ್ದರೆ ಇತರಿಗೆ ಅದರಿಂದ ತೊಂದರೆನಾ? ಕೆಲವೊಬ್ಬರಿಗಾಗಿ ನೇರವಾಗಿ ನಿಷ್ಠುರವಾಗಿ ನಡೆಯಬಾರದ? ಯಾರು ಏನು ತಿಳಿಯುವರೋ? ಖಡಕ್ ಆಗಿರುವುದು ಎಷ್ಟರಮಟ್ಟಿಗೆ ಸರಿ? ಈ ಎಲ್ಲಾ ಗೊಂದಲಗಳಿಗೆ ಪರಿಹಾರ ಏನು? ಇತ್ಯಾದಿಗಳಿಗೆ ಪ್ರಕೃತಿ ಸಾಕಷ್ಟು ಸಲಹೆಗಳನ್ನು ತೋರಿಸುತ್ತದೆ. ವಿಜ್ಞಾನದ ಕೆಲವು ವಿದ್ಯಮಾನಗಳು ಬದುಕಿಗೆ ದಾರಿ ತೋರುತ್ತವೆ ಎಂಬುದರಲ್ಲು ಅನುಮಾನವೇ ಇಲ್ಲ.ಹಾಗಾಗಿ ಮೇಲಿನ ಗೊಂದಲಗಳಿಗೆ ಬೆಳಕು ಸರಿಯಾದ ಉತ್ತರವನ್ನ ಕೊಡುತ್ತದೆ. ಬೆಳಕು ಒಂದೇ ದಿಕ್ಕಿನಲ್ಲಿ ಚಲಿಸುತ್ತದೆ, ಅಂದರೆ ಸರಳ ರೇಖೆಯಲ್ಲೇ ಚಲಿಸುತ್ತದೆ. ಎಂದೂ ವಕ್ರ ರೇಖೆಯಲ್ಲಿ ಚಲಿಸುವುದಿಲ್ಲ. ಹೇ ಹೌದಲ್ಲವೇ ಅದು ವಕ್ರವಾಗಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ! ಎಂದು ಯೋಚಿಸುವುದು ತರವೇ? ಹೌದು ಹೀಗೂ ಯೋಚಿಸಬಹುದು. ಯಾಕೆ ಸರಳರೇಖೆಯಲ್ಲೇ ಚಲಿಸಬೇಕು? ಅದು ವಕ್ರ ರೇಖೆಯಲ್ಲೂ ಚಲಿಸಬಹುದಲ್ಲ. ಅದು ವೈಜ್ಞಾನಿಕವಾಗಿ ಹೇಗಾದರೂ ವಿವರಿಸಲಿ ಆದರೆ ನಮಗೊಂದು ಬದುಕಿನ ಮಹತ್ವವನ್ನು ಹೇಳಿಕೊಡುತ್ತದೆ. ವಿಚಿತ್ರವೆನಿಸಿದರೂ ಅದನ್ನೊಮ್ಮೆ ನೋಡೋಣ… ಬೆಳಕು ಸರಳರೇಖೆಯಲ್ಲಿ ಚಲಿಸದಿದ್ದಿದ್ದರೆ ಹೇಗಿರುತ್ತಿತ್ತು? ಹೌದು ಅದು ವಕ್ರವಕ್ರವಾಗಿ ಚಲಿಸಿದ್ದರೆ ನಮ್ಮ ಮನೆಯಲ್ಲಿ ಬೆಳಗಿದ ಲೈಟ್ ಕಿಟಕಿಯಿದ ಇಣುಕಿ ಪಕ್ಕದ ಮನೆಗೂ ಪ್ರವೇಶಿಸುತ್ತಿತ್ತು, ಹಾಗೇ ಪಕ್ಕದ ಮನೆ ಬೆಳಕು ನಮ್ಮ ಮನೆಯ ಅಡುಗೆ ಮನೆ ಬೆಡ್ ರೂಮ್, ಬಾತ್ ರೂಮ್ ಎಲ್ಲಾಕಡೆ….. ನೋ ಪ್ರೈವಸಿ… ಅದಿರಲಿ ರಾತ್ರಿಯ ಕತ್ತಲು ಎಂಬುದಿರುತ್ತಿರಲಿಲ್ಲ‌,  ಭಾರತಲ್ಲಿ ಸೂರ್ಯ ಉದಯಿಸಿ ಬೆಳಗಾದಾಗ ಅಮೇರಿಕಾದ ಭಾಗದಲ್ಲಿನ ಭಾಗಗಳಲ್ಲಿ ಕತ್ತಲಿರುತ್ತದೆ ತಾನೆ, ಇಲ್ಲಿ ಉದಯಿಸಿದ ಸೂರ್ಯನ ಬೆಳಕು ವಕ್ರವಾಗಿ ಚಲಿಸಿ ಅಲ್ಲಿಗೂ ತಲುಪಬಹುದು. ಅಲ್ಲಿಯ ಬೆಳಕು ಇಲ್ಲಿಗೆ ದಿನದ ಇಪ್ಪತ್ತನಾಲ್ಕು ಘಂಟೆಯೂ ಬೆಳಕೆ! ರಾತ್ರಿ ಬೆಳಗುಗಳು ಎಂಬುದಿರುತ್ತಿರಲಿಲ್ಲ. ಓ ಸರಿಯಾಯಿತು ಬಿಡಿ ರಾತ್ರಿ ಸಹ ಓಡಾಡಬಹುದು, ದುಡಿಯಲು ಹಗಲು ಸಾಕಾಗುತ್ತಿರಲಿಲ್ಲ ಹೀಗಿದ್ದರೆ ಎಲ್ಲಾ ಸಮಯದಲ್ಲೂ ಕೆಲಸಮಾಡಬಹುದು ಎಂದುಕೊಳ್ಳೋಣ ಅನ್ನಿ ಅದು ಎಷ್ಟು ದಿನ? ಪ್ರೈವಸಿ ಬೇಡವೇ? ವಿಶ್ರಾಂತಿ ಬೇಡವೇ?... ಹೀಗೆ ಅನೇಕ ತೊಂದರೆಗಳು ಉಗಮವಾಗುತ್ತಿದ್ದವು. ಅಲ್ಲವೇ … ಬೆಳಕು ಸರಳರೇಖೆಯಲ್ಲಿ ಚಲಿಸುತ್ತಿರುವುದರಿಂದ ಈ ಯಾವ ಅವಾಂತರಗಳೂ ಇಲ್ಲ. ಬೆಳಕಿನ ವಕ್ರ ಚಲನೆ ಕೇಳಲಿಕ್ಕೆ ಚಂದವೇ ಹೊರತು ಅನುಭವಿಸಲಿಕ್ಕಲ್ಲ. ಅಲ್ಪ ಕಾಲದ ಮಜಕ್ಕಾಗಿ ಬೇಳಕು ಹಾಗಿರಬೇಕೆಂದೆಣಿಸಿದರೂ ಅದನ್ನು ಧೀರ್ಘಕಾಲದವರೆಗೆ ಅನುಭವಿಸಲಾಗದು. ಕೆಲವರಿಗೆ ಅದು ಸಹ್ಯವಾಗಿದ್ದರೂ ಹಲವರಿಗೆ ಅದು ಸಹಿಸಲಾಗದ ಕ್ರಿಯೆ. ಹಾಗೆ ನಾವೂ ಕೂಡ ಸರಳ ,ನೇರ, ನಿಷ್ಠೂರ.. ಮತ್ತೊಬ್ಬರಿಗಾಗಿ ಆಗದೆ ನಡೆಯುವಾಗ… ಅದು ನೋಡುಗರಿಗೆ ಅದು ಸಹಿಸಲಾಗದಿದ್ದರೂ.. ಅದು ಸರಿಯಾದ ನಡಿಗೆಯಾಗೇ ಇರುತ್ತದೆ ಎಂಬುದು ತಿಳಿಯುವುದು ಸೂಕ್ತ. ಅವರಿಗಾಗಿ ಇವರಿಗಾಗಿ ಸ್ವಲ್ಪ ಫ್ಲೆಕ್ಸಿಬಲ್ ಆಗೋಣ, ಈ ಕೆಲಸದಲ್ಲಿ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳೋಣ … ಸ್ವಲ್ಪ ಸಹಿಸಿಕೋ… ಇತ್ಯಾದಿಗಳು ಬೆಳಕು ವಕ್ರವಾಗಿ ಚಲಿಸಿದ ಹಾಗೆ… ಕ್ಷಣಿಕ ಮಾತ್ರ… ಅದರಿಂದ ಕೆಲವರಷ್ಟಕ್ಕೆ ಮಾತ್ರ ಉಪಯೋಗವಾದರೂ ಹಲವರಿಗೆ ಅದರಿಂದ ನಷ್ಟವೇ ಎಂಬುದನ್ನ ಅರಿಯಬೇಕು. ಬೆಳಕಿನ ಹಾಗೆ ನೇರವಾಗೇ ಬದುಕಬೇಕು. ಅದರಿಂದ ಬೇರೆ ಯಾರಿಗಾದರೂ ಅಡ್ಡಿಯಾ ಎಂದು ಯೋಚಿಸದೆ ಒಂದಿಷ್ಟಕ್ಕೆ ಒಳಿತಾಗುತ್ತದೆ ಎಂಬ ಅಂಶವನ್ನು ಮನಗಾಣಬೇಕು.
 ಹೀಗಾಗಿ ಉತ್ತಮ ಬದುಕಿಗೆ ಬೆಳಕು ನಮಗಿರುವ ಬಹುದೊಡ್ಡ ಮಾರ್ಗದರ್ಶಕ. ಅದರಂತೆ ನಡೆಯದರೆ ಉತ್ತಮ ಬದುಕು ಸಾಧ್ಯ.

ಲೇಖಕರು : ಕುಮಾರ್. ಬಿ.ಬಾಗೀವಾಳ್.

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES