You know which are the top 5 technology based jobs in 2020 in Kannada.
2020 ರ ಸಾಲಿನ ಟಾಪ್ 5 ಟ್ರೆಂಡಿಂಗ್ ಟೆಕ್ನಾಲಜೀ
ಜಾಬ್ಸ್ .
ಹಾಯ್ ಇದು ನಿಮ್ಮ ಕುಮಾರ್. ಬಿ.ಬಾಗೀವಾಳ್
ಈದಿನ ನಾನು ನಿಮಗಾಗಿ ಒಂದು ಟ್ರೆಂಡಿಂಗ್ ವಿಚಾರಗಳನ್ನು ಹಂಚ್ಕೊಳ್ಳೋಕೆ ಸಿದ್ದನಿದ್ದೀನಿ ಇನ್ನು ತಡ ಯಾಕೆ ಬನ್ನಿ ತಿಳ್ಕೊಳೋಣ.ಇದು ತಂತ್ರಜ್ಞಾನ ಪ್ರಪಂಚ ತುಂಬಾ ವೇಗ ಕಣ್ರಿ ಇದು, ನಾವು ಒಂದನ್ನ ಯೋಚಿಸೋದ್ರೊಳಗೆ ಅದು ಮೈಲಿ ದೂರ ಹೋಗ್ಬಿಟ್ಟಿರುತ್ತೆ. ಆದರೂ ಸಾಧಕನಿಗೆ ಯಾವುದೂ ಅಸಾದ್ಯ ಅಲ್ಲ ಬಿಡಿ ಅದನ್ನ ಟ್ರೇಸ್ಮಾಡಿ ಸವಾರಿ ಮಾಡಿಯೇ ತೀರ್ತಾನೆ. ಅಂದಹಾಗೆ ಈ ಚಲನಾಶೀಲ ಯುಗದಲ್ಲಿ ನಾವು, ನಮ್ಮ ಕೆರಿಯರ್ಗೆ( career) ಯಾವ ಫೀಲ್ಡ್ ಆಯ್ಕೆ ಮಾಡ್ಕೊಳ್ಬೇಕು? ಯಾವುದಕ್ಕೆ ಡಿಮ್ಯಾಂಡ್ ಇದೆ? ಯಾವುದಕ್ಕೆ ಸ್ಕೋಪ್ ಹೆಚ್ಚಿದೆ? ಎಂಬಿತ್ಯಾದಿ ಪ್ರಶ್ನೆಗಳ ಸುಳಿನಲ್ಲಿ ಸಿಲುಕಿದ್ದೀವಿ ಹೌದಲ್ವ?ಅದಕ್ಕಾಗಿ ಟಾಪ್ 5 ಟ್ರೆಂಡಿಗ್ ಕೆರಿಯರ್ ಗಳನ್ನ ಪರಿಚಯ ಮಾಡ್ಕೊಡ್ತಿದೀನಿ.
ಟೆಕ್ನಾಲಜಿ ಆಧಾರಿತ ಉದ್ಯೋಗಗಳು ಏಕರೂಪದ ಚಲನೆಯನ್ನ ಬಯಸೋದಿಲ್ಲ ಎಂಬ ಅಂಶ ಗಮನದಲ್ಲಿರಬೇಕಾಗುತ್ತದೆ. ಅದು ಚಲನಾಶೀಲ ತಂತ್ರಜ್ಞಾನದ ಮೂಲಕ ತೆರೆದುಕೊಳ್ಳಲು ಬಯಸುತ್ತದೆ, ಸಾಕಷ್ಟು ಸೃಜನಶೀಲತೆ, ನವೀನತೆ,ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಅಗತ್ಯತೆಗೆ ಅನುಸಾರವಾಗಿರುವುದಾಗಿದ್ದರೆ ಹೆಚ್ಚು ಬಲವಾಗಿ ನಿಲ್ಲಲು ಸಹಾಯಮಾಡುತ್ತವೆ ಇಲ್ಲವಾದರೆ…..?
ಹೌದು, ಇದರ ಅರ್ಥ ಟೆಕ್ನಾಲಜಿಯೊಂದಿಗಿನ ಚಲನಶೀಲತೆಗೆ ಒಗ್ಗಿಕೊಂಡು ಭವಿಷ್ಯದ ಕಡೆಗೆ ಮುಖಮಾಡಬೇಕಾಗುವುದು ಸೂಕ್ತ. ಯಾವ ಕೌಶಲ ಯಾವ ರೀತಿಯ ಉದ್ಯೋಗಕ್ಕೆ ಸೂಕ್ತ , ಯಾವ ಉದ್ಯೋಗಕ್ಕೆ ಭವಿಷ್ಯವಿದೆ, ಯಾವ ಅರ್ಹತೆ ಇರಬೇಕಾಗುತ್ತದೆ ಎನ್ನುವುದಾದರೆ ಇಲ್ಲಿದೆ ನೋಡಿ ಅವುಗಳ ಮಾಹಿತಿ. 2020 ರ ಟ್ರೆಂಡಿಂಗ್ ಟೆಕ್ನಾಲಜಿಗಳ ಆಯ್ಕೆಗಾಗಿ ನಿಮಗಾಗಿ.
- ಕೃತಕ ಬುಧ್ಧಿಮತ್ತೆ [ Artificial Intelligence](AI)
AI ಕೃತಕ ಬುದ್ಧಿಮತ್ತೆ ಇದು ಮಾನವನ ಬುದ್ದಿಮತ್ತೆಯನ್ನು ಅನುಕರಿಸುವ ಕಂಪ್ಯೂಟರ್ ಪ್ರೋಗ್ರಾಮಿಂಗ್. ಸಾಕಷ್ಟು ಖಾಸಗಿ, ಸರ್ಕಾರಿ ವಲಯಗಳಲ್ಲಿ ಬಹು ಬೇಡಿಕೆ ಇರುವ ತಂತ್ರಜ್ಞಾನ,ಹಾಗು ಟ್ರೆಂಡಿಂಗ್ ಉದ್ಯೋಗದ ಆಯ್ಕೆ ಕೂಡ.
ಚಿತ್ರ, ಮಾತು,ವಿನ್ಯಾಸ, ಗುರುತಿಸಲ್ಪಡುವ , ನಿಖರ ನಿರ್ದಾರ ತೆಗೆದುಕೊಳ್ಳುವ ಸಾಮರ್ಥ್ಯ ಕೃತಕ ಬುದ್ಧಿಮತ್ತೆ ಹೊಂದಿರುವ ಯಂತ್ರಗಳಿಗಿದೆ. ಮನುಷ್ಯನಿಗಿಂತ ವೇಗ ಮತ್ತು ನಿಖರತೆ ಈ ವಲಯದ ಉದ್ಯೋಗದ ಯಶಸ್ಸು ಎಂಬುದರಲ್ಲಿ ಸಂಶಯವಿಲ್ಲ. ಜಗತ್ತಿನ ಮುಂದುವರಿದ ರಾಷ್ಟ್ರಗಳಲ್ಲಿ ಅದರಲ್ಲೂ ಅಮೇರಿಕಾದಂತಹ ರಾಷ್ಟಗಳಲ್ಲಿ ಪ್ರತೀ ಆರು ಜನರಲ್ಲಿ ಐದು ಜನರು ಕೃತಕ ಬುಧ್ಧಿಮತ್ತೆಯ ಸೇವೆಗಳನ್ನು ಒಂದಿಲ್ಲೊಂದು ರೂಪದಲ್ಲಿ ಬಳಸಿಕೊಳ್ಳುತ್ತಾರೆ, ಅದು ನ್ಯಾವಿಗಷನ್ ಆ್ಯಪ್, ಸ್ಟ್ರೀಮಿಂಗ್ ಸೇವೆ,ಸ್ಮಾರ್ಟ್ ಫೋನ್ ಪರ್ಸನಲ್ ಅಸಿಸ್ಟೆಂಟ್, ರೈಡ್-ಷೇರ್ ಆ್ಯಪ್ಸ್, ಹೋಮ್ ಪರ್ಸನಲ್ ಅಸಿಸ್ಟೆಂಟ್, ಸ್ಮಾರ್ಟ್ ಹೋಮ್ ಡಿವೈಸಸ್ ಇತ್ಯಾದಿಗಳನ್ನು. ಇದಲ್ಲದೆ ಟ್ರೈನ್ ಗಳನ್ನು ಷೆಡ್ಯೂಲ್ ಮಾಡಲು, ಬ್ಯುಸಿನೆಸ್ ರಿಸ್ಕ್ ಗಳನ್ನು ಅಳೆಯಲು, ಶಕ್ತಿ ಸಾಮರ್ಥ್ಯ ವನ್ನು ಉನ್ನತಿಸಲು, ಹಾಗೂ ಹಣದ ಉಳಿಕೆ ಕಾರ್ಯವನ್ನು ನಿಭಾಯಿಸುವ ಸಹಜವಾಗಿಯೂ ಬಳಸಲಾಗುತ್ತದೆ. ತಜ್ಞರ ಅಭಿಪ್ರಾಯದಂತೆ 2020ರ ವೇಳೆಯಲ್ಲಿ ಸುಮಾರು 25 ಮಿಲಿಯನ್ ಉದ್ಯೋಗಗಳು ಕೃತಕ ಬುದ್ಧಿಮತ್ತೆಯ(Artificial Intelligence) ವಿಭಾಗಗಳಲ್ಲಿ ಅಂದರೆ ಅಭಿವೃದ್ಧಿ, ಪ್ರೋಗ್ರಾಮಿಂಗ್, ಟೆಸ್ಟಿಂಗ್, ಮತ್ತು ಮೇಂಟೇನೆನ್ಸ್ ವಿಭಾಗಗಳಲ್ಲಿ ತೆರೆದುಕೊಳ್ಳುತ್ತವೆ.ಹಾಗೂ ಡೇಟಾ ಅನಾಲಿಸ್ಟ್, ಗೇಮ್ ಡೆವೆಲಪರ್, ರೋಬಾಟಿಕ್ಸ್ ಕ್ಷೇತ್ರ ಬೃಹತ್ ದರದಲ್ಲಿ ಬೆಳೆಯುತ್ತಿದೆ.
- ಮಷಿನ್ ಲರ್ನಿಂಗ್.
ಮಷಿನ್ ಲರ್ನಿಂಗ್ AI ನ ಉಪವಿಭಾಗವಾಗಿದೆ. ಮಷಿನ್ ಲರ್ನಿಂಗ್, ಕಂಪ್ಯೂಟರ್‌ಗಳನ್ನು ತಾವು ಮಾಡಲು ಪ್ರೋಗ್ರಾಮ್ ಮಾಡದ ಯಾವುದನ್ನಾದರೂ ಮಾಡಲು ಕಲಿಯಲು ಪ್ರೋಗ್ರಾಮ್ ಮಾಡಲಾಗುತ್ತದೆ: ಡೇಟಾದಿಂದ ಪ್ಯಾಟರ್ನ್ ಮತ್ತು ಇನ್ಸೈಟ್ ಕಂಡುಹಿಡಿಯುವ ಮೂಲಕ ಕಂಪ್ಯೂಟರ್ ಗಳು ಕಲಿಯುತ್ತವೆ.ಮೆಷಿನ್ ಲರ್ನಿಂಗ್ ಎಐನ ಉಪವಿಭಾಗವಾಗಿದ್ದರೂ, ಮೆಷಿನ್ ಲರ್ನಿಂಗ್ ಡೊಮೇನ್‌ನಲ್ಲಿ ನಾವು ನರಮಂಡಲಗಳು, ನೈಸರ್ಗಿಕ ಭಾಷಾ ಸಂಸ್ಕರಣೆ (ಎನ್‌ಎಲ್‌ಪಿ) ಮತ್ತು ಆಳವಾದ ಕಲಿಕೆ ಸೇರಿದಂತೆ ಉಪವಿಭಾಗಗಳನ್ನು ಹೊಂದಿದೆ. ಈ ಪ್ರತಿಯೊಂದು ಉಪವಿಭಾಗಗಳು ವೃತ್ತಿಜೀವನದ ಕ್ಷೇತ್ರದಲ್ಲಿ ಪರಿಣತಿ ಹೊಂದಲು ಅವಕಾಶವನ್ನು ನೀಡುತ್ತದೆ. ಮೆಷಿನ್ ಲರ್ನಿಂಗ್ ಕೌಶಲ ಹೊದಿರುವ ವೃತ್ತಿಪರರಿಗೆ ಎಲ್ಲಾ ಕೈಗಾರಿಕಾ ಕ್ಷೇತ್ರಗಳಲ್ಲಿ ಬಹಳಷ್ಟು ಬೇಡಿಕೆ ಮತ್ತು ತೀವ್ರವಾಗಿ ನೇಮಕಾತಿ ಹೊಂದುತ್ತಿರುವ ಕ್ಷೇತ್ರ. ಡಾಟಾ ಅನಲಿಟಿಕ್ಸ್, ಡಾಟಾ ಮೈನಿಂಗ್, ಮತ್ತು ಪ್ಯಾಟರ್ನ್ ರೆಕಾಗ್ನಿಷನ್ ಕ್ಷೇತ್ರಗಳು ಮೆಷಿನ್ ಲರ್ನಿಂಗ್ ನ ಅನ್ವಯಿಕ ಕ್ಷೇತ್ರಗಳಾಗಿವೆ. ಮತ್ತು ವೆಬ್ ಸರ್ಚ್ ರಿಸಲ್ಟ್, ರಿಯಲ್ ಟೈಮ್ ಆ್ಯಡ್, ನೆಟ್ವರ್ಕ್ ಇನ್ಟ್ರೂಷನ್ ಡಿಟೆಕ್ಷನ್ ಗಳು ಈ ಕ್ಷೇತ್ರದಲ್ಲಿನ ಗ್ರಾಹಕರ ಸೇವಾ ಟಾಸ್ಕ್ ಗಳಾಗಿವೆ. ಇವಲ್ಲದೆ ಅಸಂಖ್ಯಾತ ಟಾಸ್ಕ್ ಗಳೂ ಕೂಡ ಸೇರಿದಂತೆ ಉದ್ಯೋಗಗಳ ಆಗರವೇ ಆಗಿದೆ. ಮೆಷಿನ್ ಲರ್ನಿಂಗ್ ವಿಭಾಗದಲ್ಲಿ ಸಾಕಷ್ಟು ಮುಂಚೂಣಿಯಲ್ಲಿರುವ ಲಿಂಕ್ಡಿನ್ ನಲ್ಲಿ ಸುಮಾರು 2000 ಪೋಸ್ಟಿಗ್ ಗಳಾಗಿವೆ. ಸಂಬಳದ ವಿಚಾರವಾದರೋ ಅತ್ಯುತ್ತಮವಾಗಿದೆ. ಮೆಷಿನ್ ಲರ್ನಿಂಗ್ ಇಂಜಿನಿಯರ್ ಗಳು ಸುಮಾರೆಂದರೂ $ 100000 ಸಂಬಳ ಪಡೆಯುತ್ತಿದ್ದಾರೆ. ಮೆಷಿನ್ ಲರ್ನಿಂಗ್ ಇಂಜಿನಿಯರ್, ಡೆವಲಪರ್, ಸಂಶೋಧಕರು, ಮತ್ತು ಡಾಟಾ ಸೈಂಟಿಸ್ಟ್ ಗಳಿಗೆ ಭಾರೀ ಬೇಡಿಕೆ ಇದೆ.
- ರೋಬಾಟಿಕ್ ಪ್ರೋಸೆಸ್ ಆಟೊಮೇಷನ್.(RPA)
AI, ಮತ್ತು ಮೆಷಿನ್ ಲರ್ನಿಂಗ್ ನಂತೆಯೇ ರೋಬಾಟಿಕ್ ಪ್ರೋಸೆಸ್ ಆಟೊಮೇಷನ್ ಮತ್ತೊಂದು ತಾಂತ್ರಿಕ ಸ್ವಯಂಚಾಲಿತ ಕ್ಷೇತ್ರದ ಉದ್ಯೋಗ. ಇದರಲ್ಲಿ ಆಟೋಮೇಟ್ ಬ್ಯುಸಿನೆಸ್ ಪ್ರೊಸೆಸಸ್ ಗಳಾದ ಇಂಟರ್ಪ್ರಿಟಿಂಗ್ ಅಪ್ಲಿಕೇಷನ್, ಪ್ರೊಸೆಸಿಂಗ್ ಟ್ರಾನ್ಷ್ಯಾಕ್ಷನ್, ಡಾಟಾ ಅದ್ಯಯನ ಮತ್ತು ಸ್ವಯಂಚಾಲಿತ ಈಮೇಲ್ ರಿಪ್ಲೇಗಳ ತಂತ್ರಾಂಶಗಳನ್ನು ಬಳಸಿ ಕೆಲಸ ನಿರ್ವಹಣೆ ಮಾಡಬೇಕಾಗುತ್ತದೆ.
ಡಾಕ್ಟರ್ಸ್, CEO ಗಳು, ಫೈನಾನ್ಸಿಯಲ್ ಮ್ಯಾನೇಜರ್ ಗಳು ಇತ್ಯಾದಿಯಾಗಿ ಶೇಕಡಾ 48 ಕ್ಕೂ ಅಧಿಕ ಉದೋಗ ಕ್ಷೇತ್ರದಲ್ಲಿ ಇದೇ ತಂತ್ರಜ್ಞಾನದ ಬಳಕೆ ಅಧಿಕವಾಗಿದೆ.
ಐಟಿ ಕ್ಷೇತ್ರದಲ್ಲಿ ಭವಿಷ್ಯದ ಉದ್ಯೋಗ ಹರಸುತ್ತಿರುವವರಿಗೆ RPA ಕ್ಷೇತ್ರ ವಿಫುಲ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ.
ಡೆವಲಪರ್, ಪ್ರಾಜೆಕ್ಟ್ ಮ್ಯಾನೇಜರ್, ಬ್ಯುಸಿನೆಸ್ ಅನಾಲಿಸ್ಟ್ ಸಲೂಷನ್ ಆರ್ಕಿಟೆಕ್ಚ್, ಮತ್ತು ಕನ್ಸಲ್ಟೆಂಟ್ ಗಳು ಈ ಕೇತ್ರದ ಮುಂಚೂಣಿಯಲ್ಲಿರುವ ಉದ್ಯೋಗಗಳಾಗಿವೆ. ಸಂಬಳದ ವಿಚಾರಕ್ಕೆ ಬಂದರೆ ಸುಮಾರು $ 74000 ನಿಂದ $141000 ತನಕ ಇದೆ.
- ಎಡ್ಜ್ ಕಂಪ್ಯೂಟಿಂಗ್
ಇಂದು ವೀಕ್ಷಿಸುವ ತಂತ್ರಜ್ಞಾನದ ಪ್ರವೃತ್ತಿ, ಕ್ಲೌಡ್ ಕಂಪ್ಯೂಟಿಂಗ್ ಮುಖ್ಯವಾಹಿನಿಯಾಗಿದೆ, ಪ್ರಮುಖವಾಗಿ ಅಮೆಜಾನ್ ವೆಬ್ ಸರ್ವೀಸಸ್, ಮೈಕ್ರೋಸಾಫ್ಟ್ ಅಜೂರ್ ಮತ್ತು ಗೂಗಲ್ ಕ್ಲೌಡ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ. ಕ್ಲೌಡ್ ಕಂಪ್ಯೂಟಿಂಗ್ ಅಳವಡಿಕೆ ಇನ್ನೂ ಬೆಳೆಯುತ್ತಿದೆ, ಏಕೆಂದರೆ ಹೆಚ್ಚು ಹೆಚ್ಚು ವ್ಯವಹಾರಗಳು ಕ್ಲೌಡ್ ಕಂಪ್ಯೂಟಿಂಗ್ ಪರಿಹಾರಕ್ಕೆ ವಲಸೆ ಹೋಗುತ್ತಿವೆ . ಆದರೆ ಇದು ಇನ್ನು ಮುಂದೆ ಉದಯೋನ್ಮುಖ ತಂತ್ರಜ್ಞಾನವಲ್ಲ.ನಾವು ವ್ಯವಹರಿಸುತ್ತಿರುವ ಡೇಟಾದ ಪ್ರಮಾಣವು ಹೆಚ್ಚುತ್ತಲೇ ಇರುವುದರಿಂದ, ಕೆಲವು ಸಂದರ್ಭಗಳಲ್ಲಿ ಕ್ಲೌಡ್ ಕಂಪ್ಯೂಟಿಂಗ್‌ನ ನ್ಯೂನತೆಗಳನ್ನು ಕಾಣಬಹುದು . ಎಡ್ಜ್ ಕಂಪ್ಯೂಟಿಂಗ್ ಅನ್ನು ಕ್ಲೌಡ್ ಕಂಪ್ಯೂಟಿಂಗ್‌ನಿಂದ ಉಂಟಾಗುವ ಸುಪ್ತತೆಯನ್ನು ಬೈಪಾಸ್ ಮಾಡುವ ಮತ್ತು ಸಂಸ್ಕರಣೆಗಾಗಿ ಡೇಟಾ ಕೇಂದ್ರಕ್ಕೆ ಡೇಟಾವನ್ನು ಪಡೆಯುವ ಮಾರ್ಗವಾಗಿ ಉಂಟಾಗುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಕೇಂದ್ರೀಕೃತ ಸ್ಥಳಕ್ಕೆ ಸೀಮಿತ ಅಥವಾ ಸಂಪರ್ಕವಿಲ್ಲದ ದೂರ ಸ್ಥಳಗಳಲ್ಲಿ ಸಮಯ-ಸೂಕ್ಷ್ಮ ಡೇಟಾವನ್ನು ಪ್ರಕ್ರಿಯೆಗೊಳಿಸಲು ಎಡ್ಜ್ ಕಂಪ್ಯೂಟಿಂಗ್ ಅನ್ನು ಬಳಸಬಹುದು. ಅಂತಹ ಸಂದರ್ಭಗಳಲ್ಲಿ, ಎಡ್ಜ್ ಕಂಪ್ಯೂಟಿಂಗ್ ಮಿನಿ ಡೇಟಾಸೆಂಟರ್‌ಗಳಂತೆ ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಸಾಧನಗಳ ಬಳಕೆ ಹೆಚ್ಚಾದಂತೆ ಎಡ್ಜ್ ಕಂಪ್ಯೂಟಿಂಗ್ ಹೆಚ್ಚಾಗುತ್ತದೆ. 2022 ರ ಹೊತ್ತಿಗೆ, ಜಾಗತಿಕವಾಗಿ ಎಡ್ಜ್ ಕಂಪ್ಯೂಟಿಂಗ್ ಮಾರುಕಟ್ಟೆ $6.72 ಬಿಲಿಯನ್ ತಲುಪುವ ನಿರೀಕ್ಷೆಯಿದೆ. ಯಾವುದೇ ಬೆಳೆಯುತ್ತಿರುವ ಮಾರುಕಟ್ಟೆಯಂತೆ, ಇದು ಮುಖ್ಯವಾಗಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ವಿವಿಧ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
- ಸೈಬರ್ ಸುರಕ್ಷತೆ ( Cyber security).
ಸೈಬರ್ ಸುರಕ್ಷತೆಯು ಇತರ ತಂತ್ರಜ್ಞಾನಗಳಂತೆಯೇ ವಿಕಸನಗೊಳ್ಳುತ್ತಿದೆ. ಕಾನೂನುಬಾಹಿರವಾಗಿ ಡೇಟಾವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ದುಷ್ಕರ್ಮಿ ಹ್ಯಾಕರ್‌ಗಳು ಯಾವುದೇ ಸಮಯವನ್ನು ದುರುಪಯೋಗ ಮಾಡದೆ ಬಿಟ್ಟುಕೊಡುವುದಿಲ್ಲ, ಮತ್ತು ಅವರು ಕಠಿಣವಾದ ಭದ್ರತಾ ಕ್ರಮಗಳನ್ನು ಸಹ ಪಡೆಯುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಹಾಗಾಗಿ ಇಂದು ಸುರಕ್ಷತೆಯನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ನಮ್ಮಲ್ಲಿ ಹ್ಯಾಕರ್‌ಗಳು ಇರುವವರೆಗೂ, ನಾವು ಸೈಬರ್ ಸುರಕ್ಷತೆಯನ್ನು ಉದಯೋನ್ಮುಖ ತಂತ್ರಜ್ಞಾನವಾಗಿ ಕಂಡುಕೊಳ್ಳಬಹುದು ಏಕೆಂದರೆ ಅದು ಆ ಹ್ಯಾಕರ್‌ಗಳ ವಿರುದ್ಧ ರಕ್ಷಿಸಲು ನಿರಂತರವಾಗಿ ವಿಕಸನಗೊಳ್ಳುತ್ತದೆ.
ಸೈಬರ್ ಸೆಕ್ಯುರಿಟಿ ವೃತ್ತಿಪರರ ಬಲವಾದ ಅಗತ್ಯಕ್ಕೆ ಪುರಾವೆಯಾಗಿದೆ, ಸೈಬರ್ ಸೆಕ್ಯುರಿಟಿ ಉದ್ಯೋಗಗಳ ಸಂಖ್ಯೆ ಇತರ ಟೆಕ್ ಉದ್ಯೋಗಗಳಿಗಿಂತ ಮೂರು ಪಟ್ಟು ವೇಗವಾಗಿ ಬೆಳೆಯುತ್ತಿದೆ. ಆದಾಗ್ಯೂ, ಆ ಉದ್ಯೋಗಗಳನ್ನು ಭರ್ತಿ ಮಾಡುವಾಗ ಉದ್ಯೋಗಿಗಳ ಕೊರತೆ ಇದೆ. ಇದರ ಪರಿಣಾಮವಾಗಿ, 2021 ರ ವೇಳೆಗೆ 3.5 ಮಿಲಿಯನ್ ಸೈಬರ್ ಸುರಕ್ಷತೆ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಅಂದಾಜಿಸಲಾಗಿದೆ.ಅನೇಕ ಸೈಬರ್ ಭದ್ರತಾ ಉದ್ಯೋಗಗಳು ಆರು-ಅಂಕಿಗಳ ಆದಾಯವನ್ನು ಪಡೆಯುವವುಗಳಾಗಿವೆ., ಈ ಕ್ಷೇತ್ರದ ಪ್ರಮುಖ ಉದ್ಯೋಗಗಳ ವ್ಯಾಪ್ತಿ ನೈತಿಕ ಹ್ಯಾಕರ್‌ನಿಂದ, ಭದ್ರತಾ ಎಂಜಿನಿಯರ್‌ನಿಂದ ,ಮುಖ್ಯ ಭದ್ರತಾ ಅಧಿಕಾರಿಯವರೆಗೆ ಇರಬಹುದು,
ಈ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರಿಗೆ ಭರವಸೆಯ ವೃತ್ತಿ ಮಾರ್ಗವನ್ನು ಸೈಬರ್ ಸೆಕ್ಯೂರಿಟಿ ಕ್ಷೇತ್ರ ನೀಡುತ್ತದೆ.
ಇವುಗಳಲ್ಲದೆ ಇನ್ನೂ ಅನೇಕ ಅವಕಾಶಗಳಿರುವ ಕ್ಷೇತ್ರಗಳಿವೆ, ಅವುಗಳ ಆಯ್ಕೆಯ ನಿರ್ಧಾರ ನಿಮ್ಮದಾಗಿರಲಿ, ಸಲಹೆಗಳನ್ನು ತಿಳಿದು ಅವಲೋಕಿಸಿ ಸೂಕ್ತ ನಿರ್ಧಾರಕ್ಕೆ ಬನ್ನಿ ಖಂಡಿತವಾಗಿಯೂ ಉತ್ತಮವಾದ ಉದ್ಯೋಗ ದೊರಕುವುದರಲ್ಲಿ ಅನುಮಾನಗಳಿಲ್ಲ. ಈ ನಿಟ್ಟಿನಲ್ಲಿ ನೀವು ಪ್ರಯತ್ನ ಮಾಡುವಿರಲ್ಲವೇ?.
ಲೇಖಕರು : ಕುಮಾರ್ ಬಿ ಬಾಗೀವಾಳ್
https://amzn.to/3b5xlST
Very well drafted.
ReplyDeleteಥ್ಯಾಂಕ್ಯು
Delete