Posts
Showing posts from April, 2020
Basaveshwara article
- Get link
- X
- Other Apps
ಓಂ ಶ್ರೀ ಗುರು ಬಸವ ಲಿಂಗಾಯ ನಮಃ. ವಿಶ್ವಗುರು ಬಸವಣ್ಣನವರು ನಡೆದ ಹಾದಿ, ಮಾಡಿದ ಕಾಯಕ, ಮುಡಿದ ಭಕ್ತಿ, ನುಡಿದ ವಚನಗಳು ಸರ್ವಕಾಲಿಕ ಸತ್ಯವೆಂಬುದಕ್ಕೆ ಸಾಕ್ಷಿಯಾಗಿವೆ ಇಂದು ಅಂದು ನುಡಿದ ಮಾತುಗಳು. ಈದಿನ ಬಸವಣ್ಣನವರ ಹಲವಾರು ವಚನಗಳನ್ನು ಅಳವಡಿಸಿಕೊಂಡು ನಡೆಯಬೇಕಿದೆ. ಅದರಲ್ಲೂ ಇಡೀ ವಿಶ್ವವೇ ಕೈಕಟ್ಟಿ ಕೂತಿದೆ ಕೊರೋನಮಹಾಮಾರಿಯಿಂದಾಗಿ.ಮಹಾನಗರಗಳೇ ಬರಿದಾಗಿವೆ, ಮೆರೆದ ದೇಶಗಳೇ ಮರೆಯಾಗುವ ಹಂಚಿಗೆ ಬಂದು ನಿಂತಿವೆ, ಸಾಗರದಷ್ಟು ಸಂಶೋದಿಸಿದರೂ ಪರಿಹಾರ ಶೂನ್ಯ ಎನ್ನುವಂತಿದೆ. ದೇವಾನುದೇವತೆಗಳಿಗಾಗಿ ಸಾಲುಗಟ್ಟಿ ಸಮಯ ಮೀರಿ ನಿಂತ ದೇವಾಲಯಗಳ ಬಾಗಿಲುಗಳು ಮುಚ್ಚಿವೆ,ಸೂರ್ಯೋದಯಕ್ಕೆ ಮೊದಲೇ ಕಿವಿಗಡಿಚಿಕ್ಕುವ ನಮಾಜುಗಳ ಕೇಂದ್ರಗಳಾದ ಮಸೀದಿಗಳ ಬಾಗಿಲುಗಳಲ್ಲೂ ಬೀಗಗಳು ಜೋತುಬಿದ್ದಿವೆ,ಭಾನುವಾರದ ಬಂಧು ಭಗಿನಿಯರ ಸಾಮೂಹಿಕ ಪ್ರಾರ್ಥನೆಗಳೂ ಇಲ್ಲ,ಮೊಂಬತ್ತಿಯ ಬೆಳಕೂ ಇಲ್ಲದ ಚರ್ಚ್ಗಳು ಕತ್ತಲ ಕೋಣೆಯಾಗಿವೆ. ಹೀಗೆ ಹಲವು ಧರ್ಮಗಳ ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ದರ್ಶನ ನಿಂತಿವೆ. ಪೂಜೆ ಪುರಸ್ಕಾರಗಳು ಎಂದರೆ ದೇವಾಲಯದ ನಾಲ್ಕು ಗೋಡೆಗಳೊಳಗೇ ನಡೆಯಬೇಕು ,ಪ್ರಾರ್ಥನೆಗಾಗಿ ಅಲ್ಲಿಯೇ ಸೇರಬೇಕು ಎಂಬ ಮಾತು ಈಗ ಹೆಸರಿಲ್ಲದಂತಾಗಿದೆ. ಈ ಸಮಯದಲ್ಲಿ ಬಸವಣ್ಣನವರ ಒಂದು ವಚನ ಹೇಳಿ ಮಾಡಿಸಿದಂತಿದೆ. "ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡುವೆ ಬಡವನಯ್ಯಾ. ಎನ್ನ ಕಾಲೇ ಕಂಭ, ದೇಹವೇ ದೇಗುಲ, ಶಿರ ಹೊನ್ನ ಕಳಶವಯ್ಯಾ....
Poem on Vishwa Guru Basavanna
- Get link
- X
- Other Apps
ಬಸವ ಸೂಕ್ತಿ ಅಂದಚ್ಚಿದ ಜ್ಯೋತಿಯೊಂದಲುಗದೇ ಉರಿಯುತಿದೆ ಇಂದಿಗೂ ಜಾತಿಗೂಮಿಗಿಲಾಗಿ ಮಾತಿಗೂ ಕೃತಿಯಾಗಿ ಕಾಯಕೂ ಕಾಯಕವಾಗಿ ಭಾನಗಲಕೂ ಬೆಳಕಾಗಿ,ಸರ್ವರಿಗೂ ಸಮನಾಗಿ. ಅಂದುಲಿದ ವಚನಗಳಾಗಿವೆ ಅಮೃತವು ಆವರಿಸಿವೆ ಭುವಿಯ ಭವಿಷ್ಯದೊಳಿತಾಗಿ ಮತಿಗೂ ಮದ್ದಾಗಿ ಮಿತಿಗೂ ಮತಿಯಾಗಿ ಸಾರಿದ ಸಾರವದು ಪಿರಿದಾಗಿದೆ ಬದುಕಾಗಿ. ಅಂದಂಗೈಯೇರಿದ ಸಿರಿಯು ಗಿರಿಯಾಗಿ ಹಣೆಮೇಲನ ವಿಭೂತಿಯದುವೆ ಬಂಧವಾಗಿ ಸಂಘಟಿಸಿದೆ ಸಂದವರನೆ ವಂಧ್ಯವಾಗಿ ಸಮ್ಮಿಳಿತವದು ಷಟ್ಸ್ಥಲವು ಷಡ್ವರ್ಗಗಳ ಗೆಲುವಿಗಾಗಿ. ಜಂಗಮವೊಂದುಳಿದಿದೆ ಜಗದಗಲದಲಳಿಯದೆ ಸ್ಥಾವರವಳಿದಿದೆ ಉಳಿವಿಗಿಲ್ಲದ ನಾಮಕಾಗಿ ಧ್ಯಾನಕೂ ದಾರಿಯಾಗಿ ಮೌನಕೂ ಮಾತಾಗಿ ತೋರಿದಾ ದಿಕ್ಕಿನಲೇ ಸಾಗಿ ಸೇರಿದೆ ಗುರಿಯಾಗಿ. ಒಂದಗುಳಂಚಿದಾ ಅನುಭವವು ಅವಿರತ ಬಂದು ಬಡಿಸಿದೆ ಹಸಿದೊಡಲಿಗೆ ಮತವೆಣಿಸದಾಗಿ ಕಂದುಕರಿವ ನಂದಾದೀಪಕ್ಕೊನಿತು ತೈಲಕಾಗಿ ಕಂದಿರದ ಮಹಾದಾಸೋಹದ ಥೈಲಿ ತುಂಬಿದೆ ಸಾಂಗವಾಗಿ. ನಡೆದ ಪಥವೇ ಮತವಾಗಿದೆ ನಿನ್ನ ವೇದ್ಯವಾಗಿ ವೇದ ಮಂತ್ರ ತಂತ್ರಗಳ ಬದಿಗೊತ್ತಿ ದಿವ್ಯವಾಗಿ ಭಕ್ತಿ ಇಂದಲೇ ಮುಕ್ತಿಗಾಗಿ ಅದ್ವೈತಕೂ ಶಕ್ತಿಯಾಗಿ ಬಸವ ಬಸವ ಬಸವಾನೆನುವ ಸೂಕ್ತಿಯಾಗಿ. ರಚನೆ : ಕುಮಾರ್ ಬಿ ಬಾಗೀವಾಳ್. ಶಿಕ್ಷಕರು. ...
- Get link
- X
- Other Apps
ಕೊರೋನಾದಿಂದಾಗಿ ರಾಜ್ಯ,ರಾಷ್ಟ್ರದ ಶೈಕ್ಷಣಿಕ ಮಜಲು ಬದಲಾಗಬಹುದೇ? ಕರೋನಾ ಕರೋನಾ…. ಇಡೀ ಪ್ರಪಂಚವನ್ನೇ ಮುದುಡಿ ಕೂರವ ಹಾಗೆ ಮಾಡಿದ ಮಹಾ ಮಾಯರೋಗ. ವಿಶ್ವದ ಪ್ರತೀ ರಾಷ್ಟ್ರವೂ ತನ್ನ ಎಲ್ಲಾ ರಂಗದಲ್ಲಿಯೂ ಹಿನ್ನಡೆಯನ್ನು ಅನುಭವಿಸುತ್ತಿವೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ,...ಹೀಗೆ ಹಲವು ಕ್ಷೇತ್ರಗಳಲ್ಲಿ ಕಂಗಾಲಾಗಿವೆ. ಸರ್ಕಾರಗಳು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿವೆ ಆದರೂ ತಹಬದಿಗೆ ತರುವುದು ತ್ರಾಸವಾಗುತ್ತಿದೆ. ಶೈಕ್ಷಣಿಕ ಕೇಂದ್ರಗಳ ಬಾಗಿಲುಗಳಿಗೆ ಬೀಗ ಬಿದ್ದು ತಿಂಗಳುಗಳೇ ಕಳೆದಿವೆ, ಇನ್ನು ಭಾರತದಲ್ಲಿ ಇವು ಬಹುತೇಕ ಶೈಕ್ಷಣಿಕ ಫಸಲನ್ನು ತೆಗೆಯುವ ದಿನಗಳು. ಕಳೆದ ಶೈಕ್ಷಣಿಕ ವರ್ಷದ ಕೊನೆಯವರೆಗೂ ಸಾಕಷ್ಟು ಶ್ರದ್ಧೆಯಿಂದ ವಿದ್ಯಾರ್ಥಿಗಳಿಗೆ ಬೋಧಿಸಿ, ಪರೀಕ್ಷೆಗೆ ತಯಾರು ಮಾಡುತ್ತಿದ್ದ ಕಾಲವದು ಇನ್ನೇನು ಪರೀಕ್ಷೆಗಳನ್ನು ನಡೆಸಬೇಕೆಂದು ಎಲ್ಲಾ ತಯಾರಿ ನಡೆಸಿ ಕೆಲವೊಂದು ತರಗತಿಗಳಿಗೆ ಪರೀಕ್ಷೆನ್ನೂ ನಡೆಸಿಯಾಗಿತ್ತು, ಆದರೆ ಅದು ಕೇವಲ ಒಂದಂಕಿಯ ಪ್ರತಿಶತವಷ್ಟೆ. ಅವನ್ನೂ ಪೂರ್ಣ ಪ್ರಮಾಣದಲ್ಲಿ ಮಾಡಲಾಗದ ಸ್ಥಿತಿಯನ್ನು ತಲುಪಿ ಬಿಟ್ಟಿವೆ. ಪ್ರಾಥಮಿಕದಿಂದ ಹಿಡಿದು ಪದವಿ, ಸ್ನಾತಕೋತ್ತರ ಪದವಿಗಳವರೆವಿಗೂ ಪರೀಕ್ಷೆಗಳನ್ನು ನಡೆಸುವ ಮುನ್ನವೇ ಕರೋನಾದಿಂದಾಗಿ ಸರ್ಕಾರದ ವಿಧಿಯಿಲ್ಲದ ಪ್ರಯತ್ನ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್ ಡೌನ್ಗೆ ಒಳಪಟ್ಟು ಶಾಲಾ ಕಾಲೇಜುಗಳು ಅನಿರ್ದಿಷ್ಟ ಅವದಿಗೆ ಮುಚ್ಚಿಬಿಟ್ಟಿವೆ...
An article about Sri Jagajyothi Basaveshwara. By : Kumar.B.Bagival
- Get link
- X
- Other Apps
ಓಂ ಶ್ರೀ ಗುರು ಬಸವ ಲಿಂಗಾಯ ನಮಃ. ವಿಶ್ವಗುರು ಬಸವಣ್ಣನವರು ನಡೆದ ಹಾದಿ, ಮಾಡಿದ ಕಾಯಕ, ಮುಡಿದ ಭಕ್ತಿ, ನುಡಿದ ವಚನಗಳು ಸರ್ವಕಾಲಿಕ ಸತ್ಯವೆಂಬುದಕ್ಕೆ ಸಾಕ್ಷಿಯಾಗಿವೆ ಇಂದು ಅಂದು ನುಡಿದ ಮಾತುಗಳು. ಈದಿನ ಬಸವಣ್ಣನವರ ಹಲವಾರು ವಚನಗಳನ್ನು ಅಳವಡಿಸಿಕೊಂಡು ನಡೆಯಬೇಕಿದೆ. ಅದರಲ್ಲೂ ಇಡೀ ವಿಶ್ವವೇ ಕೈಕಟ್ಟಿ ಕೂತಿದೆ ಕೊರೋನಮಹಾಮಾರಿಯಿಂದಾಗಿ.ಮಹಾನಗರಗಳೇ ಬರಿದಾಗಿವೆ, ಮೆರೆದ ದೇಶಗಳೇ ಮರೆಯಾಗುವ ಹಂಚಿಗೆ ಬಂದು ನಿಂತಿವೆ, ಸಾಗರದಷ್ಟು ಸಂಶೋದಿಸಿದರೂ ಪರಿಹಾರ ಶೂನ್ಯ ಎನ್ನುವಂತಿದೆ. ದೇವಾನುದೇವತೆಗಳಿಗಾಗಿ ಸಾಲುಗಟ್ಟಿ ಸಮಯ ಮೀರಿ ನಿಂತ ದೇವಾಲಯಗಳ ಬಾಗಿಲುಗಳು ಮುಚ್ಚಿವೆ,ಸೂರ್ಯೋದಯಕ್ಕೆ ಮೊದಲೇ ಕಿವಿಗಡಿಚಿಕ್ಕುವ ನಮಾಜುಗಳ ಕೇಂದ್ರಗಳಾದ ಮಸೀದಿಗಳ ಬಾಗಿಲುಗಳಲ್ಲೂ ಬೀಗಗಳು ಜೋತುಬಿದ್ದಿವೆ,ಭಾನುವಾರದ ಬಂಧು ಭಗಿನಿಯರ ಸಾಮೂಹಿಕ ಪ್ರಾರ್ಥನೆಗಳೂ ಇಲ್ಲ,ಮೊಂಬತ್ತಿಯ ಬೆಳಕೂ ಇಲ್ಲದ ಚರ್ಚ್ಗಳು ಕತ್ತಲ ಕೋಣೆಯಾಗಿವೆ. ಹೀಗೆ ಹಲವು ಧರ್ಮಗಳ ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ದರ್ಶನ ನಿಂತಿವೆ. ಪೂಜೆ ಪುರಸ್ಕಾರಗಳು ಎಂದರೆ ದೇವಾಲಯದ ನಾಲ್ಕು ಗೋಡೆಗಳೊಳಗೇ ನಡೆಯಬೇಕು ,ಪ್ರಾರ್ಥನೆಗಾಗಿ ಅಲ್ಲಿಯೇ ಸೇರಬೇಕು ಎಂಬ ಮಾತು ಈಗ ಹೆಸರಿಲ್ಲದಂತಾಗಿದೆ. ಈ ಸಮಯದಲ್ಲಿ ಬಸವಣ್ಣನವರ ಒಂದು ವಚನ ಹೇಳಿ ಮಾಡಿಸಿದಂತಿದೆ. "ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡುವೆ ಬಡವನಯ್ಯಾ. ಎನ್ನ ಕಾಲೇ ಕಂಭ, ದೇಹವೇ ದೇಗುಲ, ಶಿರ ಹೊನ್ನ ಕಳಶವಯ್ಯಾ....
A POEM ON JAGAJYOTHI BASAVESHWARA,BASAVA SOOKTHI, BY KUMAR.B.BAGIVAL
- Get link
- X
- Other Apps
ಬಸವ ಸೂಕ್ತಿ ಅಂದಚ್ಚಿದ ಜ್ಯೋತಿಯೊಂದಲುಗದೇ ಉರಿಯುತಿದೆ ಇಂದಿಗೂ ಜಾತಿಗೂಮಿಗಿಲಾಗಿ ಮಾತಿಗೂ ಕೃತಿಯಾಗಿ ಕಾಯಕೂ ಕಾಯಕವಾಗಿ ಭಾನಗಲಕೂ ಬೆಳಕಾಗಿ,ಸರ್ವರಿಗೂ ಸಮನಾಗಿ. ಅಂದುಲಿದ ವಚನಗಳಾಗಿವೆ ಅಮೃತವು ಆವರಿಸಿವೆ ಭುವಿಯ ಭವಿಷ್ಯದೊಳಿತಾಗಿ ಮತಿಗೂ ಮದ್ದಾಗಿ ಮಿತಿಗೂ ಮತಿಯಾಗಿ ಸಾರಿದ ಸಾರವದು ಪಿರಿದಾಗಿದೆ ಬದುಕಾಗಿ. ಅಂದಂಗೈಯೇರಿದ ಸಿರಿಯು ಗಿರಿಯಾಗಿ ಹಣೆಮೇಲನ ವಿಭೂತಿಯದುವೆ ಬಂಧವಾಗಿ ಸಂಘಟಿಸಿದೆ ಸಂದವರನೆ ವಂಧ್ಯವಾಗಿ ಸಮ್ಮಿಳಿತವದು ಷಟ್ಸ್ಥಲವು ಷಡ್ವರ್ಗಗಳ ಗೆಲುವಿಗಾಗಿ. ಜಂಗಮವೊಂದುಳಿದಿದೆ ಜಗದಗಲದಲಳಿಯದೆ ಸ್ಥಾವರವಳಿದಿದೆ ಉಳಿವಿಗಿಲ್ಲದ ನಾಮಕಾಗಿ ಧ್ಯಾನಕೂ ದಾರಿಯಾಗಿ ಮೌನಕೂ ಮಾತಾಗಿ ತೋರಿದಾ ದಿಕ್ಕಿನಲೇ ಸಾಗಿ ಸೇರಿದೆ ಗುರಿಯಾಗಿ. ಒಂದಗುಳಂಚಿದಾ ಅನುಭವವು ಅವಿರತ ಬಂದು ಬಡಿಸಿದೆ ಹಸಿದೊಡಲಿಗೆ ಮತವೆಣಿಸದಾಗಿ ಕಂದುಕರಿವ ನಂದಾದೀಪಕ್ಕೊನಿತು ತೈಲಕಾಗಿ ಕಂದಿರದ ಮಹಾದಾಸೋಹದ ಥೈಲಿ ತುಂಬಿದೆ ಸಾಂಗವಾಗಿ. ನಡೆದ ಪಥವೇ ಮತವಾಗಿದೆ ನಿನ್ನ ವೇದ್ಯವಾಗಿ ವೇದ ಮಂತ್ರ ತಂತ್ರಗಳ ಬದಿಗೊತ್ತಿ ದಿವ್ಯವಾಗಿ ಭಕ್ತಿ ಇಂದಲೇ ಮುಕ್ತಿಗಾಗಿ ಅದ್ವೈತಕೂ ಶಕ್ತಿಯಾಗಿ ಬಸವ ಬಸವ ಬಸವಾನೆನುವ ಸೂಕ್ತಿಯಾಗಿ. ರಚನೆ : ಕುಮಾರ್ ಬಿ ಬಾಗೀವಾಳ್. ಶಿಕ್ಷಕರು. ...
- Get link
- X
- Other Apps
What is plasma therapy ? Convalescent Plasma Therapy is an experimental procedure to treat COVID 19 infection. In this treatment method, plasma from a COVID patient who has fully recovered is transfused into a coronavirus patient with critical condition. How does plasma therapy work? Plasma therapy treats patients by transferring the immunity from a healthy person to a sick person. The therapy uses antibodies from the blood of the recovered coronavirus patient to treat another critical patient. This helps the infected person to develop antibodies needed against the COVID 19 virus. The antibodies when tranferred start fighting against conronavirus. How plasma is donated? Donating plasma is similar to donating blood and takes the same amount of time. Plasma donors are hooked upto a small device, which removes plasma and returns the red blood cells to their bodies simultaneously. Plasma can be donated more frequently as compared to blood. It can be donated two-three times a ...
NTIONAL PANCHAYATH RAJ DAY(NATIONAL LOCAL SELF GOVERNMENT DAY. APRIL 24.
- Get link
- X
- Other Apps
NTIONAL PANCHAYATH RAJ DAY(NATIONAL LOCAL SELF GOVERNMENT DAY. APRIL 24. Every year, Indian Government celebrates April 24 as National Panchayati Raj Day. The day is also called National Local Self Government Day. Highlights The National Panchayati Raj Day was first declared by PM Modi in 2010. The day is being marked every year by the Ministry of Panchayati Raj. In the year 2020, on the day before National Panchayati Raj Day, PM Modi launched the E-Gram Swaraj application and portal. Also, he launched the Swamitva scheme to integrate lands and reduce land disputes. The Ministry of Panchayati Raj presented the following awards for the best performing Panchayats E-Panchayat Puraskar Nanaji Deshmukh Rashtriya Gaurav Gram Sabha Puraskar Gram Panchayat Development Plan Award Deen Dayal Upadhyay Panchayat Sashaktikaran Puraskar Child friendly Gram Panchayat Award. Why April 24? The 73rd Constitutional Amendment came into effect on April 24. The amendme...
Introduction of a village history of HOLENARASIPUR
- Get link
- X
- Other Apps
#ಹೊಳೆನರಸೀಪುರ_ಕ್ಷೇತ್ರ_ಪರಿಚಯ - 05 #ರಾಜಾಪುರ_ಮಠ_ಟಿ_ಮಾಯಗೌಡನಹಳ್ಳಿ ನಾವು ನೆನ್ನೆ ನೋಡಿದಂತೆ ಮಠವೆಂದರೆ ಕೇವಲ ಒಂದು ಭವ್ಯ ಕಟ್ಟಡ ಮಾತ್ರವಲ್ಲ, ಅದೊಂದು ಧಾರ್ಮಿಕ ಸೌಧವಾಗಿ, ಸಮಸ್ತ ಸಮಾಜವೆ ಸಾಂಘಿಕವಾಗಿ ವಿಕಾಸಗೊಳ್ಳುವಂತೆ ಮಾಡುವ ಪೂಜಾಗೃಹವೆನ್ನಬಹುದು. ಮಠಗಳು ಮಾನವಕುಲದ ನಂದಾದೀಪಗಳು. ಮಠಗಳಿಂದಲೇ ಭಾರತದ ಸಂಸ್ಕೃತಿ ಉಳಿದಿರುವುದು ಎಂದರೂ ತಪ್ಪಾಗಲಾರದು ಇಂತಹ ಮಠಗಳು ನಮ್ಮ ತಾಲ್ಲೂಕಿನಲ್ಲಿವೆಯೆಂಬುದೇ ನಮಗೆ ಹೆಮ್ಮೆಯ ವಿಚಾರ. ಅಂತಹ ಮತ್ತೊಂದು ಮಠವನ್ನ ನೋಡಿಕೊಂಡು ಬರೋಣ ಬನ್ನಿ…… ಈ ಮಠವು ಮೂರು ತಲೆಮಾರಿನಲ್ಲಿ ಸ್ಥಾಪನೆಗೊಂಡಿದ್ದು #ಪಂಚಪೀಠಗಳಲ್ಲೊಂದಾದ #ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು ಪುತ್ರವರ್ಗದ ಸಂಪ್ರದಾಯದಲ್ಲಿದೆ. ಈ ಮಠವು ಮೂಲತಹಃ #ಅರಕಲಗೂಡು ತಾಲ್ಲೂಕಿನ #ರಾಜಾಪುರದಲ್ಲಿ ಸ್ಥಾಪನೆಗೊಂಡಿದ್ದು ಅಲ್ಲಿ ನಡೆದ ಕೆಲವು ಅಹಿತಕರ ಘಟನೆಯಿಂದ ಬೇಸತ್ತು ರಾಜಾಪುರದಿಂದ #ಟಿ_ಮಾಯಗೌಡನಹಳ್ಳಿಗೆ ಸ್ಥಳಾಂತರಗೊಂಡಿತು. ಇದಕ್ಕೂ ಮೊದಲು ಹಾಗೂ ನಂತರದ ದಿನಗಳಲ್ಲಿ ಟಿ.ಮಾಯಗೌಡನಹಳ್ಳಿ ಭಕ್ತರು ತಮ್ಮ ಧಾರ್ಮಿಕ ಆಚರಣೆಗಾಗಿ #ಉದ್ದೂರು_ಹೊಸಹಳ್ಳಿಯಲ್ಲಿ ನೆಲೆಸಿದ್ದ ವೇ|| ಬ್ರ|| ಶ್ರೀ|| #ಸೋಮಶೇಖರ_ಶಿವಾಚಾರ್ಯರನ್ನು ಅವಲಂಬಿಸಿದ್ದರು. ಅಲ್ಲದೆ ಪ್ರತಿಯೊಂದು ಮನೆಯಲ್ಲೂ ನಡೆಯುವ ಶುಭಕಾರ್ಯಕ್ಕೂ ಸ್ವಾಮೀಜಿಯವರನ್ನೇ ಆಹ್ವಾನಿಸುತ್ತಿದ್ದರು. ಈಗೆ ಕಾಲ ಕಳೆದಂತೆ ಗುರು-ಶಿಷ್ಯರ ಸಂಬಂಧ ಆಧ್ಯಾತ್ಮಿಕವಾಗಿ ಉತ್ತಮವಾಗಿ ಬೆಳೆಯಿತು...
A poem on corona origin , ADARMADA YUDDADA JAYAVEKE? BY KUMAR B BAGIVAL
- Get link
- X
- Other Apps
ಅಧರ್ಮದ ಯುದ್ಧದ ಜಯವೇಕೆ? ಯುದ್ಧವೇ ಬೇಕೆಂದರೆ ಭಯವೇಕೆ ? ಅಧರ್ಮದ ಯುದ್ಧದ ಜಯವೇಕೆ? ಯಾರಿಗೂ ಬೇಡದ ಕ್ರಿಮಿ ಕೂಸನು ಸೃಷ್ಟಿಸಿ ಗೆಲ್ಲುವೆನೆಂದಿದ್ದರೆ ಮೂರನೇ ಮಹಾಯುದ್ಧವ ಸೋಲುವೆ ಮಾರನೆ ದಿನವೇ, ಗೆಲಬಹುದು ನೀ ವಿಶ್ವವನ ಅದರಾಗದು ಗೆಲಲು ವಿಶ್ವಮಾನವನ. ವಿಶ್ವವನೆ ಗೆಲುವೆನಂಬ ನಿನ್ನ ಕನಸು ಕನಸಾಗೇ ಉಳಿಯುವುದು ಖಚಿತ ಸಂಜೀವಿನಿ ಜಗಕೆ ಕೊಡುವೆ ಉಚಿತ ಜಾತಿಮತಧರ್ಮಗಳ ಗಡಿಯಾಚೆಗೂ. ನೀ ಬಚ್ಚಿಟ್ಟಷ್ಟು ಕೊಚ್ಚಿಹೋಗುವುದು ನಿನ್ನ ಕರ್ಮವೇ ಹೊರತು ಧರ್ಮವಲ್ಲ ಈ ಮಾತಿಗರಿತು ಬಾಳು ಹೇಳು ಜಗಕೆ ನಿನ್ನೀ ಮರ್ಮವನು ಕ್ಷಮಿಸಿಯಾರು ನಿನ್ನ ಒಳಿತಾಗಲಿ ಮನುಕುಲಕೆ ಬಾಳಿಬದುಕಲಿ ಜಗದ ಕಣ್ಬಿಡದ ಕನಸುಗಳು ನನಸಾಗಲಿ. ಬಂಡಾಟ ಬೇಡವೆ ಬೇಡ ಕಂಡವರು ನಿನ್ನ ಕೊಂಡಾಡುವಂತೆ ನಡೆ ಅದೇ ನೆಮ್ಮದಿಗೆ ಎಡೆ. ಮದ್ದುಗುಂಡುಗಳ ಬೋರ್ಗರೆವ ಸದ್ದು ಬೇಕೆ! ಮದ್ದಿಲ್ಲದ ಈ ಜೀವಿಯಿಂದ ಸದ್ದಡಗಬೇಕೆ! ಬದ್ಧನಾಗಿರದಿದ್ದರೆ ಜಗದ ಅಧಿ ನಿಯಮಗಳಿಗೆ ಸಿದ್ಧನಿರು ನೀನು ಮಾಡಿದ್ದನ್ನುಣ್ಣುವ ಗಳಿಗೆಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲವೆನ್ನುವ ನಾಟಕವ ಬಿಟ್ಟು ಬಿಡು ಸಾಕು ಈ ನೆಲಕೆ ಶಾಂತಿ ಬೇಕು. ರಚನೆ : ಕುಮಾರ್ ಬಿ ಬಾಗೀವಾಳ್
Poem : Prema Sakshi. By; Kumar B Bagival
- Get link
- X
- Other Apps
ಪ್ರೇಮ ಸಾಕ್ಷಿ ಹೊಚ್ಚಹೊಸ ಕನಸು ಇನಿಯ ಅಚ್ಚಳಿಯದ ಪಚ್ಚೆ ಹಸಿರು ಮುಚ್ಚಳಿಕೆ ಬರೆದು ಕೊಟ್ಟಿದೆ ಸಾಕ್ಷಿಗೆ. ಮನಸುಖಿಸುವ ಮೆಲ್ಲಮಾತನೊಮ್ಮೆ ಕೇಳಿದ ಆ ಹೊಂಗೆ ಮರವು ಹರಸುವೆನೆಂದು ಹೇಳಿ ಈ ಭೃಂಗದ ಬೆನ್ನನೇರಿ ಬಂದಿದೆ. ಮುಂಗುರುಳಿಗೆ ಮನವ ಸೋತ ಆ ಮಲ್ಲಿಗೆ ಮುಡಿಯನೇರಿ ಮದವೇರಿದ ಚೆಲುವು ಕೊಟ್ಟು ಮಧುವ ತುಂಬಲು ತಾ ಬಂದಿದೆ ಮೈಸೋಕಿಸೊ ಹಠಕೆ ಬಿದ್ದ ಈ ಪರ್ಣವು ಮೈನೋಯದೆ ಹಣ್ಣಾಗಿ ಬಿದ್ದು ನೆಲವ ಸೇರಿ ಮೃಧುವಾಗಿದೆ ಈ ಪಲ್ಲಂಗದಿ. ಹೇಮಂತಕು ಬಿಸಿಯಾಗುವ ಆಸೆ ಹುಟ್ಟಿದೆ, ಸುಡು ಬೇಸಿಗೆಯಲು ಮತ್ತೊಮ್ಮೆ ಮೈಯ ಚಾಚಿ ಮಗ್ಗುಲಾಗಿ ನಾಚಿಕೆಯಲಿ ನೆಲಕಚ್ಚಿದೆ. ಮಧುವನೀರೊ ಪರಿಯ ನೋಡಿ ಆ ಧುಂಬಿಗೆ ಪುಷ್ಪವೊಂದು ಪಾಠ ಹೇಳಿ ತಿಳಿ ನೀನು ಈ ಕಲೆಯ ಎಂದು ಹೇಳಿ ತಲೆಬಗ್ಗಿಸಿ ಮೌನವಾಗಿದೆ. ಕನಸ ಪಯಣವಲ್ಲವೇ ಪಣದ ಬದುಕಿಗೆ ದಿಶೆ ನಮಗಿಲ್ಲಿ ಮಧುರ ಮಾಸದು ಜೀವ ಬದುಕ ಬೇಕಿದೆ ಮೀರಿ ಸಾವ. ರಚನೆ: ಕುಮಾರ್. ಬಿ.ಬಾಗೀವಾಳ್.
TRADITIONAL CULTURE OF A VILLAGE BAGIVALU KARAGA
- Get link
- X
- Other Apps

Hi this is Kumar B Bagival from Bagivalu village , Holenarasipur talluk , Hassan District, Karnataka,India. TITLE : BAGIVALU KARAGA Karaga image I will bring you very interesting story about a village, that is My own village story and also a very beautiful traditional culture we continued there.Now I will tell you something about culture A video on Karaga is in the end of this article.http://www.walkthroughindia.com/festivals/top-30-celebrated-hindu-festivals-india/ http://www.walkthroughindia.com/festivals/top-30-celebrated-hindu-festivals-india/ This is the festive traditional culture cultivated from hundred of years ago. On the occasion of Ugadi festival, I mean new year to Indians. On padya of Chaitra masa, it is held up to 9 days. Before 5 days one who look after the festival arrange food treat to villagers, person who wear Karaga ( this was decided by Shivaratri day in front of some village chiefs )also have food like holige(Obbattu= sweet bread), after that he w...
. Poem Nannishtadanthe na bareda saalu , By Kumar B Bagival
- Get link
- X
- Other Apps
ನನ್ನಿಷ್ಟದಂತೆ ನಾ ಬರೆದ ಸಾಲು ನನ್ನಿಷ್ಟದಂತೆ ನಾ ಬರೆದ ಸಾಲು ಬಾಗಿಲ ಬಳಿ ನಿಂತು ಕಾಯುವ ಸೈನಿಕನ ತ್ಯಾಗಮಯಿ ಮಡದಿಯಂತೆ ಭಯಕ್ಕಿಂತ ಅವನನ್ನೊಮ್ಮೆ ನೋಡುವ ಕಾತರ, ಎಂಟೆದೆಯ ಭಂಟ ಯುಧ್ಧ ಗೆದ್ದು ಬಂದೇ ಬರುವನಂಬ ಹುಚ್ಚು ಹಂಬಲದಂತೆ. ನನ್ನಿಷ್ಟದಂತೆ ನಾ ಬರೆದ ಸಾಲು ನೆಲಕೆ ಬೀಜವ ಬಿತ್ತಿ ನೆತ್ತಿ ಎತ್ತಿ ಮುಗಿಲ ಕಡೆಗೊಮ್ಮೆ ನೋಡುವ ರೈತನ ಬಲವಾದ ನಂಬಿಕೆಯಂತೆ ನಷ್ಟಕ್ಕಿಂತ ಬೆಳೆದ ಬೆಳೆಯ ನೋಡುವ ಕಾತರ, ಕಷ್ಟ ಕಾಲವ ನೀಗೇನೀಗುವೆನೆಂಬ ಹಂಬಲದಂತೆ. ನನ್ನಿಷ್ಟದಂತೆ ನಾ ಬರೆದ ಸಾಲು ಅಮ್ಮನೊಡಲಿಂದ ಜನಿಸಿದ ಇದೀಗ ತಾನೆ ಹುಟ್ಟಿ ಮಗುವಿನಂತೆ ಅಳುವು ಹೆದರಿಕೆಗಿಂತ ಅಮ್ಮನಾಲಿಂಗನದ ಕಾತರ, ನನ್ನೇಳುಬೀಳುಗಳಿಗೆ ಅಮ್ಮನಿರುವಳೆಂಬ ಅಮ್ಮನೆದೆಯನಪ್ಪಿ ಬಿಸಿಯಾಗುವ ಹಂಬಲದಂತೆ ನನ್ನಿಷ್ಟದಂತೆ ನಾ ಬರೆದ ಸಾಲು ನವಜೀವನಕೆ ಕಾಲನಿಡುವ ನವವಧುವಿನ ಕಣ್ಣೀರ ಧಾರೆಯಂತೆ ಕಷ್ಟಕ್ಕಿಂತ ಬಯಸುವ ಜೀವನದ ಕಾತರ ಜೀವನದ ಕೊನೆ ತಿರುವಿನವರೆಗೂ ಬೆರಳಿಡಿವ ಇನಿಯನಿರುವೆನೆಂಬ ಹುಚ್ಚು ಹಂಬಲದಂತೆ. ನನ್ನಿಷ್ಟದಂತೆ ನಾ ಬರೆದ ಸಾಲು ಮೊದಲ ಹೆಜ್ಜೆಯನಿಡುವ ಮಗುವಿನಂತೆ ಬೀಳುವ ಭಯಕ್ಕಿಂತ, ನಡೆದೇ ತೀರುವ ಕಾತರ ಬಿದ್ದರೂ ಎದ್ದು ನಿಲ್ಲುವ ಹಠವಿರುವುದಿಲ್ಲಿ ಎಡೆಬಿಡದ ಹಾಗೆ ಎತ್ನಿಸುವ ...