A poem on corona origin , ADARMADA YUDDADA JAYAVEKE? BY KUMAR B BAGIVAL
ಅಧರ್ಮದ ಯುದ್ಧದ ಜಯವೇಕೆ?
ಯುದ್ಧವೇ ಬೇಕೆಂದರೆ ಭಯವೇಕೆ ?
ಅಧರ್ಮದ ಯುದ್ಧದ ಜಯವೇಕೆ?
ಯಾರಿಗೂ ಬೇಡದ ಕ್ರಿಮಿ ಕೂಸನು
ಸೃಷ್ಟಿಸಿ ಗೆಲ್ಲುವೆನೆಂದಿದ್ದರೆ ಮೂರನೇ
ಮಹಾಯುದ್ಧವ ಸೋಲುವೆ ಮಾರನೆ
ದಿನವೇ, ಗೆಲಬಹುದು ನೀ ವಿಶ್ವವನ
ಅದರಾಗದು ಗೆಲಲು ವಿಶ್ವಮಾನವನ.
ವಿಶ್ವವನೆ ಗೆಲುವೆನಂಬ ನಿನ್ನ ಕನಸು
ಕನಸಾಗೇ ಉಳಿಯುವುದು ಖಚಿತ
ಸಂಜೀವಿನಿ ಜಗಕೆ ಕೊಡುವೆ ಉಚಿತ
ಜಾತಿಮತಧರ್ಮಗಳ ಗಡಿಯಾಚೆಗೂ.
ನೀ ಬಚ್ಚಿಟ್ಟಷ್ಟು ಕೊಚ್ಚಿಹೋಗುವುದು
ನಿನ್ನ ಕರ್ಮವೇ ಹೊರತು ಧರ್ಮವಲ್ಲ
ಈ ಮಾತಿಗರಿತು ಬಾಳು ಹೇಳು ಜಗಕೆ
ನಿನ್ನೀ ಮರ್ಮವನು ಕ್ಷಮಿಸಿಯಾರು ನಿನ್ನ
ಒಳಿತಾಗಲಿ ಮನುಕುಲಕೆ ಬಾಳಿಬದುಕಲಿ
ಜಗದ ಕಣ್ಬಿಡದ ಕನಸುಗಳು ನನಸಾಗಲಿ.
ಬಂಡಾಟ ಬೇಡವೆ ಬೇಡ ಕಂಡವರು ನಿನ್ನ
ಕೊಂಡಾಡುವಂತೆ ನಡೆ ಅದೇ ನೆಮ್ಮದಿಗೆ ಎಡೆ.
ಮದ್ದುಗುಂಡುಗಳ ಬೋರ್ಗರೆವ ಸದ್ದು ಬೇಕೆ!
ಮದ್ದಿಲ್ಲದ ಈ ಜೀವಿಯಿಂದ ಸದ್ದಡಗಬೇಕೆ!
ಬದ್ಧನಾಗಿರದಿದ್ದರೆ ಜಗದ ಅಧಿ ನಿಯಮಗಳಿಗೆ
ಸಿದ್ಧನಿರು ನೀನು ಮಾಡಿದ್ದನ್ನುಣ್ಣುವ ಗಳಿಗೆಗೆ
ಬಿದ್ದರೂ ಮೀಸೆ ಮಣ್ಣಾಗಿಲ್ಲವೆನ್ನುವ ನಾಟಕವ
ಬಿಟ್ಟು ಬಿಡು ಸಾಕು ಈ ನೆಲಕೆ ಶಾಂತಿ ಬೇಕು.
ರಚನೆ : ಕುಮಾರ್ ಬಿ ಬಾಗೀವಾಳ್
Comments
Post a Comment