Poem : Prema Sakshi. By; Kumar B Bagival

ಪ್ರೇಮ ಸಾಕ್ಷಿ

ಹೊಚ್ಚಹೊಸ ಕನಸು ಇನಿಯ
ಅಚ್ಚಳಿಯದ ಪಚ್ಚೆ ಹಸಿರು
ಮುಚ್ಚಳಿಕೆ ಬರೆದು ಕೊಟ್ಟಿದೆ ಸಾಕ್ಷಿಗೆ.

ಮನಸುಖಿಸುವ ಮೆಲ್ಲಮಾತನೊಮ್ಮೆ
ಕೇಳಿದ ಆ ಹೊಂಗೆ ಮರವು
ಹರಸುವೆನೆಂದು ಹೇಳಿ 
ಈ ಭೃಂಗದ ಬೆನ್ನನೇರಿ ಬಂದಿದೆ.

ಮುಂಗುರುಳಿಗೆ ಮನವ ಸೋತ 
ಆ ಮಲ್ಲಿಗೆ ಮುಡಿಯನೇರಿ
ಮದವೇರಿದ ಚೆಲುವು ಕೊಟ್ಟು
ಮಧುವ ತುಂಬಲು ತಾ ಬಂದಿದೆ

ಮೈಸೋಕಿಸೊ ಹಠಕೆ ಬಿದ್ದ
ಈ ಪರ್ಣವು ಮೈನೋಯದೆ
ಹಣ್ಣಾಗಿ ಬಿದ್ದು ನೆಲವ ಸೇರಿ 
 ಮೃಧುವಾಗಿದೆ ಈ ಪಲ್ಲಂಗದಿ.

ಹೇಮಂತಕು ಬಿಸಿಯಾಗುವ
ಆಸೆ ಹುಟ್ಟಿದೆ, ಸುಡು ಬೇಸಿಗೆಯಲು
ಮತ್ತೊಮ್ಮೆ ಮೈಯ ಚಾಚಿ
ಮಗ್ಗುಲಾಗಿ ನಾಚಿಕೆಯಲಿ ನೆಲಕಚ್ಚಿದೆ.

ಮಧುವನೀರೊ ಪರಿಯ ನೋಡಿ
ಆ ಧುಂಬಿಗೆ ಪುಷ್ಪವೊಂದು
ಪಾಠ ಹೇಳಿ ತಿಳಿ ನೀನು ಈ ಕಲೆಯ
ಎಂದು ಹೇಳಿ ತಲೆಬಗ್ಗಿಸಿ ಮೌನವಾಗಿದೆ.

ಕನಸ ಪಯಣವಲ್ಲವೇ ಪಣದ
ಬದುಕಿಗೆ ದಿಶೆ ನಮಗಿಲ್ಲಿ
ಮಧುರ ಮಾಸದು ಜೀವ
ಬದುಕ ಬೇಕಿದೆ ಮೀರಿ ಸಾವ.

ರಚನೆ: ಕುಮಾರ್. ಬಿ.ಬಾಗೀವಾಳ್.

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES