Introduction of a village history of HOLENARASIPUR

#ಹೊಳೆನರಸೀಪುರ_ಕ್ಷೇತ್ರ_ಪರಿಚಯ - 05

#ರಾಜಾಪುರ_ಮಠ_ಟಿ_ಮಾಯಗೌಡನಹಳ್ಳಿ

ನಾವು ನೆನ್ನೆ ನೋಡಿದಂತೆ ಮಠವೆಂದರೆ ಕೇವಲ ಒಂದು ಭವ್ಯ ಕಟ್ಟಡ ಮಾತ್ರವಲ್ಲ, ಅದೊಂದು ಧಾರ್ಮಿಕ ಸೌಧವಾಗಿ, ಸಮಸ್ತ ಸಮಾಜವೆ ಸಾಂಘಿಕವಾಗಿ ವಿಕಾಸಗೊಳ್ಳುವಂತೆ ಮಾಡುವ ಪೂಜಾಗೃಹವೆನ್ನಬಹುದು. ಮಠಗಳು ಮಾನವಕುಲದ ನಂದಾದೀಪಗಳು. ಮಠಗಳಿಂದಲೇ ಭಾರತದ ಸಂಸ್ಕೃತಿ ಉಳಿದಿರುವುದು ಎಂದರೂ ತಪ್ಪಾಗಲಾರದು ಇಂತಹ ಮಠಗಳು ನಮ್ಮ ತಾಲ್ಲೂಕಿನಲ್ಲಿವೆಯೆಂಬುದೇ ನಮಗೆ ಹೆಮ್ಮೆಯ ವಿಚಾರ. ಅಂತಹ ಮತ್ತೊಂದು ಮಠವನ್ನ ನೋಡಿಕೊಂಡು ಬರೋಣ ಬನ್ನಿ……

ಈ ಮಠವು ಮೂರು ತಲೆಮಾರಿನಲ್ಲಿ ಸ್ಥಾಪನೆಗೊಂಡಿದ್ದು #ಪಂಚಪೀಠಗಳಲ್ಲೊಂದಾದ #ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು ಪುತ್ರವರ್ಗದ ಸಂಪ್ರದಾಯದಲ್ಲಿದೆ.

ಈ ಮಠವು ಮೂಲತಹಃ #ಅರಕಲಗೂಡು ತಾಲ್ಲೂಕಿನ #ರಾಜಾಪುರದಲ್ಲಿ ಸ್ಥಾಪನೆಗೊಂಡಿದ್ದು ಅಲ್ಲಿ ನಡೆದ ಕೆಲವು ಅಹಿತಕರ ಘಟನೆಯಿಂದ ಬೇಸತ್ತು ರಾಜಾಪುರದಿಂದ #ಟಿ_ಮಾಯಗೌಡನಹಳ್ಳಿಗೆ ಸ್ಥಳಾಂತರಗೊಂಡಿತು.

ಇದಕ್ಕೂ ಮೊದಲು ಹಾಗೂ ನಂತರದ ದಿನಗಳಲ್ಲಿ ಟಿ.ಮಾಯಗೌಡನಹಳ್ಳಿ ಭಕ್ತರು ತಮ್ಮ ಧಾರ್ಮಿಕ ಆಚರಣೆಗಾಗಿ #ಉದ್ದೂರು_ಹೊಸಹಳ್ಳಿಯಲ್ಲಿ ನೆಲೆಸಿದ್ದ ವೇ|| ಬ್ರ|| ಶ್ರೀ|| #ಸೋಮಶೇಖರ_ಶಿವಾಚಾರ್ಯರನ್ನು ಅವಲಂಬಿಸಿದ್ದರು. ಅಲ್ಲದೆ ಪ್ರತಿಯೊಂದು ಮನೆಯಲ್ಲೂ ನಡೆಯುವ ಶುಭಕಾರ್ಯಕ್ಕೂ ಸ್ವಾಮೀಜಿಯವರನ್ನೇ ಆಹ್ವಾನಿಸುತ್ತಿದ್ದರು. ಈಗೆ ಕಾಲ ಕಳೆದಂತೆ ಗುರು-ಶಿಷ್ಯರ ಸಂಬಂಧ ಆಧ್ಯಾತ್ಮಿಕವಾಗಿ ಉತ್ತಮವಾಗಿ ಬೆಳೆಯಿತು. ಈ ಭಾವನಾತ್ಮಕತೆ ಹಾಗೂ ಆಧ್ಯಾತ್ಮಿಕ ಚಿಂತನೆಯಿಂದಾಗಿ ಶಿವಾಚಾರ್ಯರ ಕುಟುಂಬ 1888 ರಲ್ಲಿ ಟಿ. ಮಾಯಗೌಡನಹಳ್ಳಿಗೆ ಸ್ಥಳಾಂತರಗೊಂಡು ವಾಸ್ತವ್ಯ ಪ್ರಾರಂಭಿಸಿತು. ಇಲ್ಲಿನ ಭಕ್ತರು ಗುರುಗಳ ವಾಸ್ತವ್ಯಕ್ಕಾಗಿ ಮಠಕ್ಕನುಗುಣವಾಗಿ ಒಂದು ಮನೆಯನ್ನೂ 1898ರಲ್ಲಿ ನಿರ್ಮಿಸಿದರು. ನೂತನ ಕಟ್ಟಡ ಸ್ಥಾಪನೆಯಾದ ನಂತರ 1902 ರಿಂದ ಧಾರ್ಮಿಕ ಚಟುವಟಿಕೆಗಳು ಕ್ರಿಯಾತ್ಮಕವಾಗಿ ನಡೆಯತೊಡಗಿದವು.

ನಂತರದ ದಿನಗಳಲ್ಲಿ ಮಠದಲ್ಲಿ ನಡೆಯುತ್ತಿದ್ದ #ಶಿವಾನುಭವ_ಗೋಷ್ಠಿ, #ಶಿವಭಜನೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಗ್ರಾಮದ ಜನತೆ ತಮ್ಮ ದೈನಂದಿನ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಭಾಗವಹಿಸಲು ಪ್ರಾರಂಭಿಸಿದರು.

ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿರವರು ಲಿಂಗೈಕ್ಯರಾದ ನಂತರ 1955 ರಲ್ಲಿ ಶ್ರೀ #ಚಂದ್ರಶೇಖರ_ಸ್ವಾಮೀಜಿಯವರು ಪಟ್ಟಾಧಿಕಾರ ವಹಿಸಿಕೊಂಡರು.

ಪೂಜ್ಯ ಶ್ರೀ ಚಂದ್ರಶೇಖರ ಸ್ವಾಮೀಜಿ ರವರು ಪುಟ್ಟಸ್ವಾಮಯ್ಯನವರ ಮೂರನೇ ಪುತ್ರರಾಗಿ ಜನಿಸಿ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಮಠದ ಅಧಿಕಾರ ವಹಿಸಿಕೊಂಡು ಮಠದ ಅಭಿವೃದ್ಧಿಗಾಗಿ 40 ಎಕರೆ ಜಮೀನನ್ನು ಖರೀದಿಸಿ ಮಠದ ಧಾರ್ಮಿಕ ಚಟುವಟಿಕೆಗಳಿಗೆ ಅವಶ್ಯಕವಿರುವ ಮೂಲ ಆದಾಯ ಹೆಚ್ಚಿಸಿದರು.

ಗುರು-ವಿಭಕ್ತ ಸಂಬಂಧವನ್ನು ಶ್ರೀ #ಚಂದ್ರಶೇಖರ_ಸ್ವಾಮೀಜಿಯವರು ಸಮಭಾವನೆಯಿಂದ ಕಂಡರು. ವೀರಶೈವ ಸಂಪ್ರದಾಯದ ಅಭಿವೃದ್ಧಿಗೆ ಕಂಟಕಪ್ರಾಯವಾಗಿರುವ ಗುರು-ವಿಭಕ್ತ ಎಂಬ ಬೇಧ ಭಾವವನ್ನು ತೊಡೆದು ಹಾಕಲು ಪ್ರಯತ್ನಿಸಿದರು. ಇದರ ಫಲವೇ ಪಂಚಪೀಠದಲ್ಲೊಂದಾದ #ರಂಭಾಪುರಿ_ಮಠ ಮತ್ತು #ಸಿದ್ದಗಂಗಾ_ಮಠಾಧ್ಯಕ್ಷರಾಗಿದ್ದ ಶಿವೈಕ್ಯ ಡಾ|| #ಶಿವಕುಮಾರ_ಸ್ವಾಮೀಜಿ ರವರು ಹಾಗೂ #ಸುತ್ತೂರು_ಶ್ರೀಗಳವರ ಸಂಪರ್ಕವಿದೆ.

ಮಠದಲ್ಲಿ ಸ್ಥಾಪನೆಗೊಂಡಿರುವ ಗದ್ದುಗೆಯ ನಿತ್ಯಪೂಜೆ ಹಾಗೂ ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಠದಲ್ಲಿ ಭಕ್ತಾದಿಗಳು ಕ್ರಿಯಾಶೀಲರಾಗಿ ಭಾಗವಹಿಸುತ್ತಾರೆ. ಮಠದಲ್ಲಿ ವಿಶೇಷವಾಗಿ #ಬಸವ_ಜಯಂತಿ ಹಾಗೂ #ಕಡೆಕಾರ್ತಿಕೆ ಪೂಜೆ ನಡೆಯುತ್ತದೆ.

ಶ್ರೀ ಚಂದ್ರಶೇಖರಸ್ವಾಮೀಜಿಯವರು ಶಿವೈಕ್ಯರಾದ ನಂತರ ದಿನಾಂಕ 14-03-2008 ರಲ್ಲಿ ಶ್ರೀ #ಸೋಮಶೇಖರ_ಸ್ವಾಮೀಜಿ ರವರು ಮಠದ ಪಟ್ಟಾಧಿಕಾರಿಗಳಾಗಿ ಹಿರಿಯ ಸ್ವಾಮೀಜಿಗಳು ಹಾಕಿಕೊಟ್ಟ ಮಾರ್ಗದರ್ಶನದಂತೆ ಮಠವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

#ಮಠಕ್ಕಿರುವ_ಬಸ್_ಸೌಕರ್ಯಗಳು:

ಹೊಳೆನರಸೀಪುರದಿಂದ ಹಳ್ಳಿಮೈಸೂರು ಮಾರ್ಗದಲ್ಲಿ ಮಾಯಗೌಡನಹಳ್ಳಿ ತಲುಪಬಹುದು (13 ಕಿಲೋ ಮೀಟರ್)
ಕೃಪೆ: ಅಂತರ್ಜಾಲ

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES